ಆಸ್ಟ್ರೇಲಿಯಾ ನೆಲದಲ್ಲಿ ವಿರಾಟ್ ಕೊಹ್ಲಿ, ಜೋ ರೂಟ್ ದಾಖಲೆ ಹಿಂದಿಕ್ಕಿದ ಪೂಜಾರ

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಪ್ರಮುಖ ಟೆಸ್ಟ್ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ದಾಖಲೆಯೊಂದನ್ನು ಬರೆದಿದ್ದಾರೆ. ಕಳೆದ ಒಂದು ದಶಕದಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಅತ್ಯಂತ ಹೆಚ್ಚು ಚೆಂಡು ಎದುರಿಸಿದ ಆಟಗಾರ ಎಂಬ ದಾಖಲೆಯನ್ನು ಪೂಜಾರ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಕಳೆದ ಒಂದು ದಶಕದಲ್ಲಿ ಚೇತೇಶ್ವರ್ ಪೂಜಾರ ಆಸ್ಟ್ರೇಲಿಯಾ ನೆಲದಲ್ಲಿ 28 ಇನ್ನಿಂಗ್ಸ್‌ಗಳಲ್ಲಿ ಈವರೆಗೆ 3,609 ಎಸೆತಗಳನ್ನು ಎದುರಿಸಿದ್ದಾರೆ. ಈ ಮೂಲಕ ಇಂಗ್ಲೆಂಡ್ ನಾಯಕ ಜೋ ರೂಟ್, ಮಾಜಿ ಇಂಗ್ಲೆಂಡ್ ಆರಂಭಿಕ ಆಟಗಾರ ಆಲೆಸ್ಟರ್ ಕುಕ್ ಮತ್ತು ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ.

ಅತಿ ಹೆಚ್ಚು ಎಸೆತ ಎದುರಿಸಿದ ಆಟಗಾರರು
28 ಇನ್ನಿಂಗ್ಸ್‌ಗಳಲ್ಲಿ ಜೋ ರೂಟ್ 3607 ಎಸೆತಗಳನ್ನು ಆಸ್ಟ್ರೇಲಿಯಾ ನೆಲದಲ್ಲಿ ಎದುರಿಸಿದ್ದರೆ, ಅಲೆಸ್ಟರ್ ಕುಕ್ 40 ಇನ್ನಿಂಗ್ಸ್‌ಗಳಲ್ಲಿ 3274 ಎಸೆತ ಎದುರಿಸಿದ್ದಾರೆ. 35 ಇನ್ನಿಂಗ್ಸ್‌ಗಳಲ್ಲಿ ವಿರಾಟ್ ಕೊಹ್ಲಿ 3115ಕ್ಕೂ ಅಧಿಕ ಎಸೆತಗಳನ್ನು ಎದುರಿಸಿದ್ದಾರೆ.

43 ರನ್‌ಗೆ 160 ಎಸೆತ
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪೂಜಾರ ವಿರಾಟ್ ಕೊಹ್ಲಿ ಜೊತೆ ಮೂರನೇ ವಿಕೆಟ್‌ಗೆ 68 ರನ್‌ಗಳ ಜೊತೆಯಾಟವನ್ನು ನೀಡಿದರು. ಅತ್ತಂತ ನಿಧಾನಗತಿಯಲ್ಲಿ ಬ್ಯಾಟಿಂಗ್ ನಡೆಸಿದ ಪೂಜಾರ ಬರೊಬ್ಬರಿ 160 ಎಸೆತಗಳನ್ನು ಎದುರಿಸಿ 43 ರನ್ ಬಾರಿಸಿದರು. ಬಳಿಕ ಸ್ಪಿನ್ನರ್ ನಥನ್ ಲಿಯಾನ್‌ಗೆ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿದ್ದಾರೆ.

ಆಸರೆಯಾದ ನಾಯಕ ಉಪನಾಯಕ
ಮೂರು ವಿಕೆಟ್ ಕಳೆದುಕೊಂಡ ಟೀಮ್ ಇಂಡಿಯಾಗೆ ನಾಯಕ ಹಾಗೂ ಉಪನಾಯಕ ಆಸರೆಯಾದರು. ನಾಯಕ ವಿರಾಟ್ ಕೊಹ್ಲಿ 74 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ ಅಜಿಂಕ್ಯ ರಹಾನೆ 42 ರನ್ ಬಾರಿಸಿ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿಕೊಂಡಿದ್ದಾರೆ. 82 ಓವರ್ ಮುಗಿಯುವಷ್ಟರಲ್ಲಿ ಭಾರತ 201 ರನ್‌ಗೆ 5 ವಿಕೆಟ್ ಕಳೆದುಕೊಂಡಿದ್ದು ಹನುಮ ವಿಹಾರಿ ಹಾಗೂ ವೃದ್ಧಿಮಾನ್ ಸಾಹಾ ಬ್ಯಾಟಿಂಗ್ ಮುಂದಿವರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications