ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಚೇತೇಶ್ವರ್ ಪೂಜಾರ ನೇತೃತ್ವದ ಸಸ್ಸೆಕ್ಸ್ ತಂಡಕ್ಕೆ ಭಾರೀ ಹಿನ್ನಡೆಯಾಗಿದೆ. ಲೀಸೆಸ್ಟರ್‌ಶೈರ್ ವಿರುದ್ಧದ ವಿವಾದಾತ್ಮಕ ಗೆಲುವಿನ ನಂತರ 12 ಅಂಕಗಳ ಪೆನಾಲ್ಟಿಗೆ ತುತ್ತಾಗಿದೆ. ಅಲ್ಲದೆ ಸ್ವತಃ ನಾಯಕ ಚೇತೇಶ್ವರ್ ಪೂಜಾರ ಒಂದು ಪಂದ್ಯದ ನಿಷೇಧಕ್ಕೆ ಒಳಗಾಗಿದ್ದಾರೆ. ಆರಂಭದಲ್ಲಿ ಅದ್ಭುತ ಪ್ರದರ್ಶನದ ಮೂಲಕ ಗಮನಸೆಳೆದಿದ್ದ ಸಸ್ಸೆಕ್ಸ್ ತಂಡ ಈಗ ಭಾರೀ ಹಿನ್ನಡೆಗೆ ಒಳಗಾಗಿದೆ.
ಆಟಗಾರರಾದ ಟಾಮ್ ಹೈನ್ಸ್ ಮತ್ತು ಜಾಕ್ ಕಾರ್ಸನ್ ಶಿಸ್ಸತು ಉಲ್ಲಂಘನೆ ಮಾಡಿದ ಕಾರಣಕ್ಕಾಗಿ ತಂಡಕ್ಕೆ ಈ 12 ಅಂಕಗಳ ಪೆನಾಲ್ಟಿಗೆ ಗುರಿಯಾಗಿದೆ. ಈ ಕಾರಣದಿಂದಾಗಿ ಈ ಇಬ್ಬರು ಆಟಗಾರರನ್ನು ಕೂಡ ಮುಂದಿನ ಡರ್ಬಿಶೈರ್ ವಿರುದ್ಧದ ಪಂದ್ಯದಿಂದ ಹೊರಗಿಡುವ ನಿರ್ಧಾರ ತೆಗೆದುಕೊಂಡಿದ್ದಾರೆ.

ಇದರ ಬೆನ್ನಲ್ಲೇ ತಂಡ ಮತ್ತೊಂದು ಆಘಾತಕ್ಕೆ ಒಳಗಾಗಿದೆ. ಮುಂಬರುವ ಒಂದು ಪಂದ್ಯದಿಂದ ತಮಡದ ನಾಯಕ ಚೇತೇಶ್ವರ್ ಪೂಜಾರ ಅವರು ಕೂಡ ನಿಶೇಧಕ್ಕೆ ಒಳಗಾಗಿದ್ದಾರೆ. ಇನ್ನು ಪೂಜಾರ ಟೂರ್ನಿಯ ಫೈನಲ್ ಪಂದ್ಯಕ್ಕೆ ಅಲಭ್ಯವಾಗುವುದು ಮೊದಲೇ ಖಚಿತವಾಗಿರುವ ಕಾರಣ ಈ ನಿಶೇಧದ ಮೂಲಕ ಅವರ ಈ ಬಾರಿಯ ಕೌಂಟಿ ಆವೃತ್ತಿ ಅಂತ್ಯವಾದಂತಾಗಿದೆ.
ಇನ್ನು ಬಹಿರಂಗಪಡಿಸದ ಈ ಘಟನೆಯ ವಿಚಾರಣೆಯನ್ನು ಈಗಾಗಲೇ ಕೈಗೆತ್ತಿಕೊಳ್ಳಲಾಗಿದೆ. ಔಟಾದ ನಂತರ ಎದುರಾಳಿ ಬ್ಯಾಟ್ಸ್‌ಮನ್‌ಗೆ 'ಸೆಂಡ್-ಆಫ್' ನೀಡಿದ್ದಕ್ಕಾಗಿ ಹೈನ್ಸ್‌ಗೆ ಈ ಹಿಂದೆ ಎಚ್ಚರಿಕೆ ನೀಡಲಾಗಿತ್ತು. ಲೀಸೆಸ್ಟರ್‌ಶೈರ್ ಆಟದ ಸಮಯದಲ್ಲಿ ಹೈನ್ಸ್ ಅದನ್ನು ಪುನರಾವರ್ತಿಸಿದ್ದರು. ಹೀಗಾಗಿ ಈ ಶಿಸ್ಸತು ಕ್ರಮ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಇನ್ನು ಪೂಜಾರ ಯಾವುದೇ ಅಪರಾಧವನ್ನು ಸ್ವತಃ ಮಾಡದಿದ್ದರೂ ಈ ಘಟನೆಗಳ ಸಮಯದಲ್ಲಿ ಅವರು ನಾಯಕನಾಗಿರುವ ಕಾರಣ ಅವರನ್ನು ಒಂದು ಪಂದ್ಯದಿಂದ ಅಮಾನತುಗೊಳಿಸಲಾಗಿದೆ.