Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಚೇತೇಶ್ವರ್ ಪೂಜಾರ ಶತಕ: ಗಿಲ್‌ ಟೆನ್ಷನ್‌ ಹೆಚ್ಚಿಸಿದ ಸೌರಾಷ್ಟ್ರ ಪ್ಲೇಯರ್‌

ಟೀಮ್ ಇಂಡಿಯಾದ ಟೆಸ್ಟ್‌ ಸ್ಪೆಷಲಿಸ್ಟ್‌ ಆಟಗಾರ ಚೇತೇಶ್ವರ್ ಪೂಜಾರ ದೇಶೀಯ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಈ ಮೂಲಕ ಇಂಗ್ಲೆಂಡ್‌ ವಿರುದ್ಧದ ಸರಣಿಗೆ ತಮ್ಮನ್ನು ಪರಿಗಣಿಸುವಂತೆ ಆಯ್ಕೆದಾರರಿಗೆ ಸಂದೇಶ ರವಾನಿಸುತ್ತಿದ್ದಾರೆ. ಅಲ್ಲದೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಶುಭಮನ್‌ಗಿಲ್‌ ಟೆನ್ಷನ್ ಹೆಚ್ಚಿಸಿದ್ದಾರೆ.

ಕಳಪೆ ಫಾರ್ಮ್‌ ಹಿನ್ನೆಲೆಯಲ್ಲಿ ಚೇತೇಶ್ವರ್‌ ಪೂಜಾರ ಅವರನ್ನು ಟೆಸ್ಟ್‌ ತಂಡದಿಂದ ಕೈ ಬಿಡಲಾಗಿತ್ತು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಪಂದ್ಯದ ವೇಳೆ ಚೇತೇಶ್ವರ್ ನೆನಪು ಆಗಿದ್ದಂತೂ ಸುಳ್ಳು ಅಲ್ಲವೇ ಅಲ್ಲ. ಬೌನ್ಸಿ ಟ್ರ್ಯಾಕ್‌ಗಳಲ್ಲಿ ಆಡುವ ಕಲೆಯನ್ನು ಕರಗತ ಮಾಡಿಕೊಂಡಿರುವ ಈ ಸ್ಟಾರ್ ಪ್ಲೇಯರ್‌ಗೆ ಆಯ್ಕೆದಾರರು ಗೇಟ್ ಪಾಸ್‌ ನೀಡಿದ್ದರು.

Cheteshwar Pujaras Hundred: Star Batsman Shaping Team Indias Path in England Series

ಚೇತೇಶ್ವರ ಪೂಜಾರ ಅವರ ಪ್ರದರ್ಶನದಿಂದಾಗಿ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು. ಭಾರತೀಯ ಟೆಸ್ಟ್ ತಂಡದಿಂದ ಕೂಡ ಅವರನ್ನು ಕೈಬಿಡಲಾಗಿತ್ತು. ಆದರೆ ಪೂಜಾರ ತಮ್ಮ ಶ್ರಮವನ್ನು ಸ್ವಲ್ಪವೂ ಕಡಿಮೆ ಮಾಡಲಿಲ್ಲ. ಇದೀಗ ಟೀಕಾಕಾರರಿಗೆ ತಮ್ಮ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದಾರೆ. ಸೌರಾಷ್ಟ್ರ ಪರ ಆಡುತ್ತಿರುವ ಪೂಜಾರ 2023-24ರ ರಣಜಿ ಟ್ರೋಫಿಯಲ್ಲಿ ಶತಕ ಗಳಿಸಿದ್ದಾರೆ.

ರಾಜ್‌ಕೋಟ್‌ನಲ್ಲಿ ಸೌರಾಷ್ಟ್ರ ಮತ್ತು ಜಾರ್ಖಂಡ್ ನಡುವೆ ರಣಜಿ ಟ್ರೋಫಿ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಜಾರ್ಖಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ ಕೇವಲ 142 ರನ್ ಗಳಿಸಿ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಸೌರಾಷ್ಟ್ರ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದೆ. ಸೌರಾಷ್ಟ್ರ ಪರ ಪೂಜಾರ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದರು. ಅವರು ಅದ್ಭುತ ಪ್ರದರ್ಶನ ನೀಡಿ ಶತಕ ಗಳಿಸಿದರು.

ಪೂಜಾರ ತಮ್ಮ ನೈಜ ಶೈಲಿಯಲ್ಲಿ ಬ್ಯಾಟಿಂಗ್ ನಡೆಸಿ ಅಬ್ಬರಿಸಿದರು. ಪೂಜಾರ 167 ಎಸೆತಗಳಲ್ಲಿ ಅಜೇಯ 109 ರನ್‌ ಬಾರಿಸಿ ಮುನ್ನುಗುತ್ತಿದ್ದಾರೆ. ಇವರ ಮನಮೋಹಕ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಸೇರಿವೆ.

Cheteshwar Pujaras Hundred: Star Batsman Shaping Team Indias Path in England Series

ಈ ಪ್ರದರ್ಶನದಿಂದ ಪೂಜಾರ ತಮ್ಮನ್ನು ಕಡೆಗಣಿಸಬೇಡಿ ಎಂಬ ಸಂದೇಶವನ್ನು ನೀಡಿದ್ದಾರೆ. ಅಲ್ಲದೆ ಭಾರತದಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಸರಣಿಗೆ ತಮ್ಮನ್ನು ಪರಿಗಣಿಸಿ ಎಂದು ತಿಳಿಸಿದಂತೆ ಬ್ಯಾಟಿಂಗ್ ಮಾಡಿದ್ದಾರೆ.

ಈ ಪಂದ್ಯದಲ್ಲಿ ಆರಂಭಿಕ ಆಟಗಾರ ಹಾರ್ವಿಕ್ ದೇಸಾಯಿ ಸೌರಾಷ್ಟ್ರಕ್ಕೆ ಉತ್ತಮ ಆರಂಭ ನೀಡಿದರು. ಹಾರ್ವಿಕ್ 119 ಎಸೆತಗಳನ್ನು ಎದುರಿಸಿ 85 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 14 ಬೌಂಡರಿಗಳು ಸೇರಿದ್ದವು. ಸ್ನೆಲ್ ಪಟೇಲ್ 15 ರನ್ ಗಳ ಇನಿಂಗ್ಸ್ ಆಡಿದರು. ಶೆಲ್ಡನ್ ಜಾಕ್ಸನ್ ಕೂಡ ಅರ್ಧಶತಕ ಗಳಿಸಿದರು. ಜಾಕ್ಸನ್ 74 ಎಸೆತಗಳನ್ನು ಎದುರಿಸಿ 54 ರನ್ ಗಳಿಸಿದರು. ಅವರು 8 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು.

Story first published: Saturday, January 6, 2024, 16:34 [IST]
Other articles published on Jan 6, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+