ಮುಂಬೈ ಇಂಡಿಯನ್ಸ್ ತಂಡ ತೊರೆದ ಅನಿಲ್ ಕುಂಬ್ಳೆ
ಮುಂಬೈ,ನ.30: ಇಂಡಿಯನ್ ಪ್ರಿಮಿಯರ್ ಲೀಗ್ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಮಾಜಿ ನಾಯಕ ಅನಿಲ್ ಕುಂಬ್ಳೆ ಗುಡ್ ಬೈ ಹೇಳಿದ್ದಾರೆ. ತಕ್ಷಣದಿಂದ ಜಾರಿಗೆ ಬರುವಂತೆ ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಮಾರ್ಗದರ್ಶಕ ಹುದ್ದೆಯಿಂದ ಕೆಳಗಿಳಿದಿದ್ದಾರೆ.
2013ರಿಂದ ಮುಂಬೈ ತಂಡದ ಮೆಂಟರ್ ಆಗಿ ಅನಿಲ್ ಅವರು ಕಾರ್ಯನಿರ್ವಹಿಸುತ್ತಿದ್ದರು. ಸಚಿನ್, ರಿಕಿ ಪಾಂಟಿಂಗ್, ರೋಹಿತ್, ಹರ್ಭಜನ್ ಸಿಂಗ್ ಸೇರಿದಂತೆ ಘಟನಾಘಟಿ ಆಟಗಾರರನ್ನು ಅನಿಲ್ ಅವರು ನಿಭಾಯಿಸಿದ್ದರು. ['ಮಂಕಿ ಗೇಟ್' ಬಗ್ಗೆ ಅನಿಲ್ ಕುಂಬ್ಳೆ ವಿಷಾದ]

ಕುಂಬ್ಳೆ ಅವರ ಮಾರ್ಗದರ್ಶನದಲ್ಲಿ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಹಾಗೂ ಚಾಂಪಿಯನ್ಸ್ ಲೀಗ್ ಟ್ವೆಂಟಿ 20 ಪ್ರಶಸ್ತಿ ಗಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ['ಸ್ಪಿನ್ ಸ್ಟಾರ್' ಗಳ ಹುಡುಕಾಟದಲ್ಲಿ ಅನಿಲ್ ಕುಂಬ್ಳೆ]
ಅನಿಲ್ ಕುಂಬ್ಳೆ ಹೇಳಿಕೆ: ಕಳೆದ ಮೂರು ವರ್ಷಗಳಿಂದ ಮುಂಬೈ ಇಂಡಿಯನ್ಸ್ ಯಶಸ್ಸಿನ ಹಾದಿ ಕಂಡಿರುವುದು ನನಗೆ ಅತ್ಯಂತ ಸಂತಸ ಕೊಟ್ಟಿದೆ.ಐಪಿಎಲ್ ಎರಡು ಬಾರಿ ಹಾಗೂ ಚಾಂಪಿಯನ್ಸ್ ಲೀಗ್ ಗೆದ್ದಿರುವುದು ಅದರಲ್ಲೂ ಎರಡು ಒಂದೇ ವರ್ಷ ಸಿಕ್ಕಿದ್ದು ಪ್ರತಿಭಾವಂತರ ಶ್ರಮಕ್ಕೆ ಸಿಕ್ಕ ಬೆಲೆ ಎಂದಿದ್ದಾರೆ.
ನಾನು ಕ್ರಿಕೆಟ್ ನ ಇತರೆ ಸಾಧ್ಯತೆಗಳತ್ತ ಗಮನ ಹರಿಸುತ್ತಿದ್ದೇನೆ. ಹೀಗಾಗಿ ಮುಂಬೈ ಇಂಡಿಯನ್ಸ್ ನ ಚೀಫ್ ಮೆಂಟರ್ ಹುದ್ದೆಯನ್ನು ತೊರೆಯುತ್ತಿದ್ದೇನೆ. ಅಂಬಾನಿ ಕುಟುಂಬ ಮುಖ್ಯವಾಗಿ ಶ್ರೀಮತಿ ನೀತಾ ಅಂಬಾನಿ, ಆಕಾಶ್ ಅಂಬಾನಿ ಹಾಗೂ ನಿಖಿಲ್ ಮೆಸ್ವಾನಿ ಅವರ ಬೆಂಬಲದಿಂದ ನಾವು ಹೆಚ್ಚಿನ ಯಶಸ್ಸು ಕಾಣಲು ಸಾಧ್ಯವಾಯಿತು ಎಂದು ಹೇಳಿದ್ದಾರೆ. (ಒನ್ ಇಂಡಿಯಾ ಸುದ್ದಿ)
Story first published: Wednesday, January 3, 2018, 10:03 [IST]
Other articles published on Jan 3, 2018
Read in English: Kumble resigns as Chief Mentor of MI
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications