UP vs DC WPL 2025: ಹೆನ್ರಿ 18 ಎಸೆತದಲ್ಲಿ ವೇಗದ ಅರ್ಧಶತಕ: ಯುಪಿಗೆ ಮೊದಲ ಗೆಲುವು
ಮೂರನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಯುಪಿ ವಾರಿಯರ್ಸ್ ಗೆಲುವಿನ ಟ್ರ್ಯಾಕ್‌ಗೆ ಮರಳಿದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಯುಪಿ ಶನಿವಾರ ನಡೆದ ಈ ಆವೃತ್ತಿಯ 8ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿ ಮೊದಲ ಗೆಲುವಿನ ನಗೆ ಬೀರಿದೆ. ಯುಪಿ ಜಯದಲ್ಲಿ ಭರವಸೆಯ ಆಟಗಾರ್ತಿ ಚಿನೆಲ್ಲೆ ಹೆನ್ರಿ ಅಮೋಘ ಕಾಣಿಕೆ ನೀಡಿದರು.
ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಯುಪಿ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 177 ರನ್ ಕಲೆ ಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ 19.3 ಓವರ್‌ಗಳಲ್ಲಿ 144 ರನ್‌ಗಳಿಗೆ ಸರ್ವಪತನ ಕಂಡಿತು. ಈ ಗೆಲುವಿನೊಂದಿಗೆ ಯುಪಿ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಡೆಲ್ಲಿ ಮೂರನೇ ಸ್ಥಾನದಲ್ಲಿದೆ.

ಯುಪಿ ವಾರಿಯರ್ಸ್ ಪರ ಅಬ್ಬರದ ಬ್ಯಾಟಿಂಗ್ ನಡೆಸಿದ ಚಿನ್ಲೆ ಹೆನ್ರಿ ಅಬ್ಬರಿಸಿದರು. ಇವರು ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ವೇಗವಾಗಿ ಅರ್ಧಶತಕ ಬಾರಿಸಿದ ಹಿರಿಮೆಯನ್ನು ತಮ್ಮದಾಗಿಸಿಕೊಂಡರು. ಇವರು 23 ಎಸೆತಗಳಲ್ಲಿ 2 ಬೌಂಡರಿ, 8 ಸಿಕ್ಸರ್ ಸಹಾಯದಿಂದ 62 ರನ್ ಬಾರಿಸಿ ಔಟ್ ಆದರು. ಇವರು ತಮ್ಮ ಅರ್ಧಶತಕವನ್ನು 18ನೇ ಎಸೆತದಲ್ಲಿ ಪುರ್ಣಗೊಳಿಸಿದರು. ಈ ಮೂಲಕ ಮಹಿಳಾ ಲೀಗ್‌ನಲ್ಲಿಇತಿಹಾಸವನ್ನು ಬರೆದರು.
ಯುಪಿ ತಂಡದ ಪರ ಕೀರಣ್ ನವಗೆರಿ 17, ನಾಯಕಿ ದೀಪ್ತಿ ಶರ್ಮಾ 13, ತಹಿಲಾ ಮೆಗ್ರಾತ್ 24, ಶ್ವೆತಾ ಸೆರಾವತ್ 11, ಸೋಪಿಯಾ 12 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಜೆಸ್ ಜೊನಾಸ್ಸೆನ್ 4, ಅರುಂಧತಿ ರೆಡ್ಡಿ ಹಾಗೂ ಮರಿಜಾನ್ನೆ ಕಪ್ಪ್ ತಲಾ ಎರಡು ವಿಕೆಟ್ ಕಬಳಿಸಿದರು.

ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಆರಂಭ ಕಳಪೆಯಾಗಿತ್ತು. ಸ್ಟಾರ್ ಆರಂಭಿಕ ಆಟಗಾರ್ತಿ ಮೆಗ್ ಲ್ಯಾನಿಂಗ್ ನಿರಾಸೆ ಅನುಭವಿಸಿದರು. ಸ್ಟಾರ್ ಆಟಗಾರ್ತಿ ಶೆಫಾಲಿ ವರ್ಮಾ ಸಹ ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಇವರ ಆಟ 24 ರನ್‌ಗಳಿಗೆ ಕೊನೆಯಾಯಿತು. ಮಿಡ್ಲ್ ಆರ್ಡರ್‌ನಲ್ಲಿ ಸ್ಟಾರ್ ಆಟಗಾರ್ತಿಯರಾರು ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡಲಿಲ್ಲ. ಕರ್ನಾಟಕದ ನಿಕಿ ಪ್ರಸಾದ 2 ಬೌಂಡರಿ, 1 ಸಿಕ್ಸರ್ ನೆರವಿನಿಂದ 18 ರನ್ ಬಾರಿಸಿದರು. ಶಿಖಾ ಪಾಂಡೆ 15 ರನ್ ಸಿಡಿಸಿದರು.
ಜೆಮಿಮಾ ಅಬ್ಬರ
ಕಳೆದ ಕೆಲವು ಪಂದ್ಯಗಳಲ್ಲಿ ಮಂಕಾಗಿ ಕಂಡು ಬಂದಿದ್ದ ಜೆಮಿಮಾ ರೋಡ್ರಿಗಸ್ ಯುಪಿ ವಿರುದ್ಧ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು 35 ಪಂದ್ಯಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಸಹಾಯದಿಂದ 56 ರನ್ ಬಾರಿಸಿ ಅಬ್ಬರಿಸಿದರು. ಇವರ ಆಟ ತಂಡಕ್ಕೆ ಗೆಲುವಿನ ಮಾಲೆಯನ್ನು ತೊಡಿಸುವಲ್ಲಿ ವಿಫಲವಾಯಿತು.
ಯುಪಿ ಪರ ಕ್ರಾಂತಿ ಗೌಡ್, ಗ್ರೇಸ್ ಹ್ಯಾರಿಸ್ ತಲಾ 4 ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications