ಮತ್ತೆ ಚಿನ್ನಸ್ವಾಮಿಯಲ್ಲಿ ಕ್ರಿಕೆಟ್ ಕಲರವ: ಜೂನ್ 4 ಬಳಿಕ ಮೊದಲ ಬಾರಿಗೆ ಪಂದ್ಯ
ಬೆಂಗಳೂರಿನ ಐಕಾನಿಕ್ ಚಿನ್ನಸ್ವಾಮಿ ಸ್ಟೇಡಿಯಂ ಈಗ ಕ್ರಿಕೆಟ್‌ಗೆ ಮತ್ತೆ ಆತಿಥ್ಯ ನೀಡಲು ಸಜ್ಜಾಗಿದೆ. ಜೂನ್ 4 ರಂದು ನಡೆದ ಆರ್‌ಸಿಬಿ ಸಂಭ್ರಮಾಚರಣೆಯ ವೇಳೆ ನಡೆದ ಕಾಲ್ತುಳಿತದ ಬಳಿಕ ಈ ಮೈದಾನದಲ್ಲಿ ಯಾವುದೇ ಪಂದ್ಯಗಳು ನಡೆದಿರಲಿಲ್ಲ. ಆರ್‌ಸಿಬಿ ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮಾಚರಣೆಯ ವೇಳೆ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಈ ವೇಳೆ ಕಾಲ್ತುಳಿತ ಸಂಭವಿಸಿದ್ದು, 11 ಜನ ಸಾವನ್ನಪ್ಪಿದ್ದರು. ಈ ದುರ್ಘಟನೆ ನಡೆದ ಬಳಿಕ ಈ ಮೈದಾನದಲ್ಲಿ ಯಾವುದೇ ಪಂದ್ಯಗಳು ನಡೆದಿರಲಿಲ್ಲ. ಈಗ ಮತ್ತೆ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯಗಳು ನಡೆಯಲಿವೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಆಯೋಜಿಸುವ ಕೆ.ತಿಮ್ಮಪ್ಪಯ್ ಮೆಮೋರಿಯಲ್ ಟ್ರೋಫಿ ಟೂರ್ನಿಗೆ ಚಿನ್ನಸ್ವಾಮಿ ಅಂಗಳ ಆತಿಥ್ಯ ನೀಡಲಿದೆ. ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿಯ ಪ್ರಕಾರ ಚಿನ್ನಸ್ವಾಮಿ ಕ್ರೀಡಾಂಗಣ ಆರು ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಈ ವೇಳೆ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ಸಹ ಸೇರಿವೆ. ಟೂರ್ನಿ ಸೆಪ್ಟಂಬರ್ 26 ರಿಂದ ಆರಂಭವಾಗಲಿದೆ. ಇನ್ನು ಸುರಕ್ಷತೆಯ ಕಾರಣಕ್ಕಾಗಿ ಅಭಿಮಾನಿಗಳಿಗೆ ನಿಷೇಧಿಸಲಾಗಿದೆ.

ಈ ಪ್ರತಿಷ್ಠಿತ ಟೂರ್ನಿಯಲ್ಲಿ ಮುಂಬೈ, ವಿದರ್ಭ, ಮಧ್ಯ ಪ್ರದೇಶ, ಹಿಮಾಚಲ ಹಾಗೂ ಚತ್ತೀಸಗರ್ ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಲಿವೆ. ಈ ಟೂರ್ನಿಯಲ್ಲಿ ಹಲವಾರು ಭಾರತದ ಸ್ಟಾರ್ ಆಟಗಾರರು ಆಡುವುದನ್ನು ಕಾಣಬಹುದಾಗಿದೆ. ಈ ಪಂದ್ಯದಲ್ಲಿ ಅಜಿಂಕ್ಯ ರಹಾನೆ, ಹನುಮ ವಿಹಾರಿ, ವೆಂಕಟೇಶ್ ಅಯ್ಯರ್, ವಿಜಯ್ ಶಂಕರ್ ಹಾಗೂ ಶಶಾಂಕ್ ಸಿಂಗ್ ಅವರನ್ನು ಆಡುವುದು ಕಾಣಬಹುದಾಗಿದೆ.
ಜೂನ್ 4 ರಂದು ನಡೆದ ದುರ್ಘಟನೆಯ ಬಗ್ಗೆ ಸರ್ಕಾರದ ತನಿಖಾ ಸಂಸ್ಥೆ ತನಿಖೆ ನಡೆಸಿದೆ. ಈ ವೇಳೆ ಆರ್‌ಸಿಬಿ ಮ್ಯಾನೇಜ್ಮೆಂಟ್, ಇವೆಂಟ್ ಮ್ಯಾನೇಜ್ಮೆಂಟ್ ಹಾಗೂ ಕೆಎಸ್‌ಸಿಎ ವಿರುದ್ಧ ದೂರು ದಾಖಲಿಸಲಾಗಿತ್ತು. ಇನ್ನು ರಾಜ್ಯ ಸರ್ಕಾರ ನೇಮಿಸಿದ್ದ ತನಿಖಾ ಸಮಿತಿ, ಚಿನ್ನಸ್ವಾಮಿ ಕ್ರೀಡಾಂಗಣ ದೊಡ್ಡ ಟೂರ್ನಿಗಳನ್ನು ಆಯೋಜಿಸಲು ಸೂಕ್ತ ಸ್ಥಳವನ್ನು ಎಂದು ತಿಳಿಸಿದೆ. ಇದರ ಪರಿಣಾಮ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಮಹಾರಾಜ ಟಿ20 ಟ್ರೋಫಿ, ಮಹಿಳಾ ಏಕದಿನ ವಿಶ್ವ ಕಪ್ ಟೂರ್ನಿಯ ಪಂದ್ಯಗಳು ಸಹ ಶಿಫ್ಟ್ ಆಗಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications