ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅತ್ಯಾಧುನಿಕ ಎಲ್‌ಇಡಿ ಫ್ಲಡ್‌ಲೈಟಿಂಗ್ ವ್ಯವಸ್ಥೆ ಲೋಕಾರ್ಪಣೆ
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಐತಿಹಾಸಿಕ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಹೊಸದಾಗಿ ಅಳವಡಿಸಲಾದ ಅತ್ಯಾಧುನಿಕ ಎಲ್‌ಇಡಿ ಕ್ರೀಡಾ ಫ್ಲಡ್‌ಲೈಟಿಂಗ್ ವ್ಯವಸ್ಥೆಯನ್ನು ಭಾನುವಾರ ಉದ್ಘಾಟಿಸಲಾಯಿತು. ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಇದು ದೊಡ್ಡ ಮೈಲಿಗಲ್ಲಾಗಿದೆ. ಇದು ಕ್ರಿಕೆಟ್ ಮೂಲಸೌಕರ್ಯವನ್ನು ಆಧುನೀಕರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಈ ಮೊದಲು 2010ರಲ್ಲಿ ಹಳೆಯ ಮೆಟಲ್-ಹಾಲೈಡ್ ಫ್ಲಡ್‌ಲೈಟ್‌ಗಳನ್ನು ಅಳವಡಿಸಲಾಗಿತ್ತು. ಈಗ ಈ ವ್ಯವಸ್ಥೆಯನ್ನು ಅತ್ಯಾಧುನಿಕಗೊಳಿಸಲಾಗಿದ್ದು, ಎಲ್‌ಇಡಿ ಕ್ರೀಡಾ ಫ್ಲಡ್‌ಲೈಟಿಂಗ್ ತಂತ್ರಜ್ಞಾನ ಅಳವಡಿಸಲಾಗಿದೆ. ಪ್ರಸ್ತುತ ಇರುವ ಅಂತಾರಾಷ್ಟ್ರೀಯ ಮಾನದಂಡ ಪೂರೈಸುವಂತೆ ವಿನ್ಯಾಸಗೊಳಿಸಲಾಗಿದೆ.

ಇದು ಪಿಚ್‌ನ ಮೇಲೆ 3500 ಕ್ಕೂ ಹೆಚ್ಚು ಲಕ್ಸ್ ಹಾಗೂ ಔಟ್‌ಫೀಲ್ಡ್‌ನಾದ್ಯಂತ 2500 ಕ್ಕೂ ಹೆಚ್ಚು ಲಕ್ಸ್ ಬೆಳಕನ್ನು ನೀಡುತ್ತದೆ. ಇದು ಆಟಗಾರರು, ಅಧಿಕಾರಿಗಳಿಗೆ ಹಾಗೂ ವೀಕ್ಷಕರಿಗೆ ಅತ್ಯುತ್ತಮ ಅನುಭವ ನೀಡಲಿದೆ. ಈ ಯೋಜನೆಗೆ ಸುಮಾರು 5 ಕೋಟಿ ವೆಚ್ಚವನ್ನು ಮಾಡಲಾಗಿದೆ.
ಎಲ್‌ಇಡಿ ಫ್ಲಡ್‌ಲೈಟಿಂಗ್ ಲೋಕಾರ್ಪಣೆ
ಬೃಹತ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರು ಹಾಗೂ ಸರ್ಕಾರದ ತಜ್ಞರ ಸಮಿತಿಯ ಅಧ್ಯಕ್ಷರಾದ ಜಿ. ಮಹೇಶ್ವರ್ ರಾವ್ ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಸರ್ಕಾರದ ತಜ್ಞರ ಸಮಿತಿಯ ಸದಸ್ಯ ಕಾರ್ಯದರ್ಶಿಯಾದ ಸೀಮಂತ್ ಕುಮಾರ್ ಸಿಂಗ್ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೆಎಸ್‌ಸಿಎ ಅಧ್ಯಕ್ಷರಾದ ಬಿ.ಕೆ. ವೆಂಕಟೇಶ್ ಪ್ರಸಾದ್ ಮತ್ತು ಹ್ಯಾವೆಲ್ಸ್ ಇಂಡಿಯಾ ಲಿಮಿಟೆಡ್‌ನ ಹಿರಿಯ ಉಪಾಧ್ಯಕ್ಷ ಹಾಗೂ ಬಿಸಿನೆಸ್ ಹೆಡ್ (ಇಂಡಿಯಾ) ಶ್ರೀ ಮುನೀಶ್ ಪೆಶಿನ್ ಉಪಸ್ಥಿತರಿದ್ದರು.
ಹಳೆಯ ಲೈಟಿಂಗ್ ವ್ಯವಸ್ಥೆಗೆ ಹೋಲಿಸಿದರೆ ಈ ಹೊಸ ಎಲ್‌ಇಡಿ ವ್ಯವಸ್ಥೆಯು ಸುಮಾರು 40% ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿದೆ. ಇದು ವಿದ್ಯುತ್ ಮತ್ತು ಡೀಸೆಲ್ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಕೆಎಸ್‌ಸಿಎ ಸಂಸ್ಥೆಯ ಪರಿಸರ ಸ್ನೇಹಿ ಮತ್ತು ಸುಸ್ಥಿರ ಕಾರ್ಯಾಚರಣೆಯ ಬದ್ಧತೆಗೆ ಪೂರಕವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications