ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ರನ್ ಕಲೆ ಹಾಕುವಲ್ಲಿ ವಿಫಲರಾಗುತ್ತಿದ್ದಾರೆ. ಇವರ ಆಟದ ಬಗ್ಗೆ ಟೀಕೆಗಳು ಕೇಳಿ ಬರುತ್ತಿವೆ. ಮಾಜಿ ಆಟಗಾರರು ವಿರಾಟ್ ಅವರ ಬ್ಯಾಟಿಂಗ್ ಪ್ರಶ್ನೆ ಮಾಡಿದ್ದಾರೆ. ಈಗ ವೆಸ್ಟ್ ಇಂಡೀಸ್ ತಂಡದ ದೈತ್ಯ ಆಟಗಾರ ಹಾಗೂ ಆರ್‌ಸಿಬಿ ತಂಡದ ಮಾಜಿ ಆಟಗಾರ ಕ್ರಿಸ್ ಗೇಲ್ ತಮ್ಮ ಸ್ನೇಹಿತನ ಫಾರ್ಮ್ ಬಗ್ಗೆ ಮೌನ ಮುರಿದಿದ್ದಾರೆ.
ವಿರಾಟ್ ಕೊಹ್ಲಿ ಅವರ ಕಳಪೆ ಫಾರ್ಮ್ ಬಗ್ಗೆ ಗೇಲ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದರು. ಅವರು ಫಾರ್ಮ್ ಬಗ್ಗೆ ಈಗಾಗಲೇ ಹಲವು ಪ್ರಶ್ನೆಗಳು ಏಳುತ್ತಲೇ ಇರುತ್ತವೆ. ಅವರ ಫಾರ್ಮ್ ಏನೇ ಇರಲಿ. ವಿರಾಟ್ ವಿಶ್ವದ ಅತ್ಯುತ್ತಮ ಬ್ಯಾಟರ್. ಇದಕ್ಕೆ ಅವರು ಅಂಗಳದಲ್ಲಿ ಕಲೆ ಹಾಕಿದ ರನ್ ಸಾಕ್ಷಿ. ಬಾರಿಸಿದ ಶತಕಗಳು ಸಾಕ್ಷಿ ಎಂದು ಗೇಲ್ ತಿಳಿಸಿದ್ದಾರೆ. ಪ್ರತಿ ಕ್ರಿಕೆಟ್ ಆಟಗಾರನ ವೃತ್ತಿ ಜೀವನದಲ್ಲೂ ಇಂತಹ ಘಟನೆಗಳು ಬರುತ್ತವೆ. ಕೊಹ್ಲಿ ತಮ್ಮ ವೃತ್ತಿ ಜೀವನದ ಕೊನೆಯ ಹಂತದಲ್ಲಿದ್ದಾರೆ ಎಂದು ತಿಳಿಸಿದೆ. ವಿರಾಟ್ ಅವರು ತಮ್ಮ ಆಟದ ಮೇಲೆ ನಂಬಿಕೆ ಇಟ್ಟು ಮತ್ತೆ ಲಯಕ್ಕೆ ಮರಳಬೇಕು ಎಂದು ಗೇಲ್ ತಿಳಿಸಿದ್ದಾರೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದವರ ಪಟ್ಟಿಯಲ್ಲಿ ಕ್ರಿಸ್ ಗೇಲ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಇದೇ ಸಂಬಂಧ ಪ್ರಶ್ನೆಯನ್ನು ಕಾರ್ಯಕ್ರಮದಲ್ಲಿ ಕೇಳಲಾಯಿತು. ನಿಮ್ಮ ಗರಿಷ್ಠ ರನ್ ದಾಖಲೆಯನ್ನು ವಿರಾಟ್ ಬ್ರೇಕ್ ಮಾಡುತ್ತಾರಾ ಎಂದು ಕೇಳಲಾಯಿತು. ಆಗ ಕ್ರಿಸ್ ಗೇಲ್, ವಿರಾಟ್ ಅವರಿಗೆ ದಾಖಲೆ ಮುರಿಯಲು ಇನ್ನು 200 ರನ್ ಬೇಕು. ಚಾಂಪಿಯನ್ಸ್ ಟ್ರೋಫಿಯಲ್ಲಿ ಇನ್ನು ಎಷ್ಟು ರನ್ ಆಡುತ್ತಾರೆ ಎಂಬುದು ನಮಗೆ ತಿಳಿದಿಲ್ಲ. ಆದರೆ ಅವರು 200 ರನ್‌ಗಳ ಗಡಿ ದಾಟುತ್ತಾರೆ ಎಂದು ಹೇಳಬಲ್ಲೆ ಎಂದು ತಿಳಿಸಿದ್ದಾರೆ.
ಕಟಕ್‌ನಲ್ಲಿ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರು ಆಡಿದ ಆಟವನ್ನು ಕ್ರಿಸ್ ಗೇಲ್ ಮುಕ್ತ ಕಂಠದಿಂದ ಶ್ಲಾಘಿಸಿದರು. ಏಕದಿನ ಕ್ರಿಕೆಟ್‌ನಲ್ಲಿ ಅವರು ತಮ್ಮ ಸಿಕ್ಸರ್‌ಗಳ ದಾಖಲೆಯನ್ನು ಮುರಿದಿರುವುದನ್ನು ತಿಳಿಸಿದರು. ರೋಹಿತ್ ಅವರ ಆಟಕ್ಕೆ ಅಭಿನಂದನೆಗಳು. ಕ್ರೀಡೆಯ ಅಭಿಮಾನಿಗಳನ್ನು ರಂಜಿಸುವ ಆಟಗಾರರ ಅಗತ್ಯವಿದೆ. ರೋಹಿತ್ ಬಹಳ ವರ್ಷಗಳಿಂದ ಈ ಸಾಧನೆ ಮಾಡುತ್ತಲೇ ಇದ್ದಾರೆ ಎಂದು ಗೇಲ್ ಹೇಳಿದ್ದಾರೆ.

ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಬಹುದ ಎಂದು ಗೇಲ್ ಭವಿಷ್ಯ ನುಡಿದರು. ಅಲ್ಲದೆ ಚಾಂಪಿಯನ್ಸ್ ಟ್ರೋಫಿ ಮತ್ತೆ ಆರಂಭವಾಗಿದ್ದು ಸ್ವಾಗತಾರ್ಹ. ವೆಸ್ಟ್ ಇಂಡೀಸ್ ಈ ಮೆಗಾ ಟೂರ್ನಿಯಲ್ಲಿ ಭಾಗವಹಿಸದಿರುವುದು ನಿರಾಶಾದಾಯಕ ಎಂದು ತಿಳಿಸಿದ್ದಾರೆ.