For Quick Alerts
ALLOW NOTIFICATIONS  
For Daily Alerts
 

RCB ಉಳಿಸಿಕೊಳ್ಳುವಲ್ಲಿ ವಿಫಲ: ಬೇರೆ ತಂಡ ಸೇರಿ ಬೆಂಗಳೂರು ತಂಡಕ್ಕೆ ಕಾಟ ನೀಡಿದ 3 ಪ್ಲೇಯರ್ಸ್

18ನೇ ಆವೃತ್ತಿಯ ಐಪಿಎಲ್ ಆರಂಭವಾಗಿದೆ. ಎಲ್ಲ ತಂಡಗಳು ಗೆಲುವಿನ ಖಾತೆ ಓಪನ್ ಮಾಡಿವೆ. ಆರ್‌ಸಿಬಿ ತಂಡ ಸ್ಥಿರ ಪ್ರದರ್ಶನ ನೀಡುತ್ತಿದ್ದು ಅಭಿಮಾನಿಗಳ ಮನ ಗೆದ್ದಿದೆ. ಆರ್‌ಸಿಬಿ ಈ ಬಾರಿ ಆಡಿದ ಆರಂಭಿಕ ಎರಡೂ ಪಂದ್ಯಗಳನ್ನು ಗೆದ್ದಿದೆ. ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್‌ ವಿರುದ್ಧ ಸಿಎಸ್‌ಕೆ ವಿರುದ್ಧ ಚೆನ್ನೈನಲ್ಲಿ 17 ವರ್ಷಗಳ ಬಳಿಕ ಗೆಲುವು ದಾಖಲಿಸಿರುವ ಆರ್‌ಸಿಬಿ ಅಬ್ಬರಿಸಿದೆ. ಆದರೆ ತವರಿನಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದೆ. ಇದಕ್ಕೆ ಕಾರಣ ಆ ಆರ್‌ಸಿಬಿ ಮಾಜಿ ವೇಗಿ.

ಆರ್‌ಸಿಬಿ ಹಲವು ಆಟಗಾರರಿಗೆ ಪೋಷಿಸಿದೆ. ಇನ್ನು ಹಲವರನ್ನು ಬೆಳಕಿಗೆ ತಂದಿದೆ. ಈ ಜೆರ್ಸಿ ಹಾಕಿದ ಮೇಲೆಯೇ ಅವರ ಲಕ್‌ ಸಹ ಬದಲಾಗಿದೆ. ಆದರೆ ಆರ್‌ಸಿಬಿ ಮ್ಯಾನೇಜ್ಮೆಂಟ್ ಮಾತ್ರ ಇವರಿಗೆ ಹೆಚ್ಚಿನ ಒತ್ತು ನೀಡದೆ ಕೆಲವೊಮ್ಮೆ ನಿರ್ಲಕ್ಷಿಸಿದೆ. ಹೀಗಿ ಆರ್‌ಸಿಬಿ ಕೈ ಬಿಟ್ಟ ಮೂವರು ಆಟಗಾರರು, ತಮ್ಮ ಮಾಜಿ ತಂಡದ ವಿರುದ್ಧವೇ ವೀರಾವೇಶದ ಆಟವನ್ನು ಆಡಿದ್ದಾರೆ. ಈ ವರದಿಲ್ಲಿ ಆರ್‌ಸಿಬಿ ಕೈ ಬಿಟ್ಟ ಮೂವರು ಆಟಗಾರರು ಆರ್‌ಸಿಬಿ ಪರ ಅಬ್ಬರಿಸಿದ ಬಗ್ಗೆ ನೋಡೋಣ.

Chris Gayle KL Rahul and Mohammed Siraj Shine Against Former Team RCB

ಕ್ರಿಸ್‌ ಗೇಲ್‌

ಆರ್‌ಸಿಬಿ ತಂಡದ ಪರ ಆರ್ಭಟಿಸಿದ ಮೆರೆದ ಆಟಗಾರರಲ್ಲಿ ಕ್ರಿಸ್‌ ಗೇಲ್‌ಗೆ ಅಗ್ರ ಸ್ಥಾನ. ಇವರನ್ನು ಆರ್‌ಸಿಬಿ ಹಲವು ವರ್ಷಗಳ ಕಾಲ ತಂಡದಲ್ಲಿ ಉಳಿಸಿಕೊಂಡಿತ್ತು. ಆದರೆ 2018ರಲ್ಲಿ ಕೈ ಬಿಟ್ಟಿತು. ಆರ್‌ಸಿಬಿ ಇವರನ್ನು ಕೈ ಬಿಡುತ್ತಿದ್ದಂತೆ 2019ರ, ಐಪಿಎಲ್‌ನ 28ನೇ ಪಂದ್ಯದಲ್ಲಿ ಕ್ರಿಸ್‌ ಗೇಲ್‌ ಆರ್‌ಸಿಬಿ ಬೌಲಿಂಗ್‌ ವಿಭಾಗವನ್ನು ಬೆಂಡೆತಿದ್ದರು. ಇವರು ಪಂಜಾಬ್‌ ಕಿಂಗ್ಸ್ ಪರ ಆಡಿ ಅಬ್ಬರಿಸಿದ್ದು. ಇವರು ಕೇವಲ 64 ಎಸೆತಗಳಲ್ಲಿ 99 ರನ್‌ ಸಿಡಿಸಿ ಮಿಂಚಿದ್ದರು. ಈ ಪಂದ್ಯವನ್ನು ಆರ್‌ಸಿಬಿ ಸುಲಭವಾಗಿ ಚೇಸ್ ಮಾಡಿ ಗೆದ್ದಿತ್ತು. ಆದರೆ ಕ್ರಿಸ್‌ ತಮ್ಮನ್ನು ಕೈ ಬಿಟ್ಟ ತಂಡದ ವಿರುದ್ಧ ತಮ್ಮ ಸಿಟ್ಟು ತೀರಿಸಿಕೊಂಡರು.

Chris Gayle KL Rahul and Mohammed Siraj Shine Against Former Team RCB

ಕೆಎಲ್ ರಾಹುಲ್

ಕೆಎಲ್‌ ರಾಹುಲ್ ಅಪ್ಪಟ ಪ್ರತಿಭೆ. ಆರ್‌ಸಿಬಿ ಪರ ಆಡಿ ಸೈ ಎನಿಸಿಕೊಂಡಿದ್ದರು. ಆದರೆ ಇವರನ್ನು ಆರ್‌ಸಿಬಿ 2020ರಲ್ಲಿ ರಿಲೀಸ್ ಮಾಡಿತು. ಇವರು ಉತ್ತಮ ಮೊತ್ತಕ್ಕೆ ಪಂಜಾಬ್‌ ಕಿಂಗ್ಸ್ ತಂಡವನ್ನು ಸೇರಿದರು. ತಮ್ಮ ಮಾಜಿ ತಂಡದ ವಿರುದ್ಧ ಮೊದಲ ಪಂದ್ಯದಲ್ಲಿ ಅಬ್ಬರದ ಆಟವನ್ನು ಆಡಿದ್ದ ರಾಹುಲ್‌ ಆರ್ಭಟಿಸಿದ್ದರು. 2020ರ ಐಪಿಎಲ್‌ನ ಆರನೇ ಪಂದ್ಯದಲ್ಲಿ ಪಂಜಾಬ್ ಹಾಗೂ ಆರ್‌ಸಿಬಿ ತಂಡಗಳು ಮುಖಾಮುಖಿ ಆದವು. ಈ ವೇಳೆ ರಾಹುಲ್ ತಮ್ಮ ಕಲಾತ್ಮಕ ಬ್ಯಾಟಿಂಗ್‌ ಎಲ್ಲರ ಮುಂದೆ ಪ್ರಸ್ತುತ ಪಡಿಸಿದರು. ತಮ್ಮನ್ನು ಕೈ ಬಿಟ್ಟ ತಂಡದ ವಿರುದ್ಧ ರಾಹುಲ್‌ 69 ಎಸೆತಗಳಲ್ಲಿ 132 ರನ್‌ ಸೇರಿಸಿದರು. ಇವರ ಅಮೋಘ ಇನಿಂಗ್ಸ್‌ನಲ್ಲಿ 14 ಬೌಂಡರಿ, 6 ಸಿಕ್ಸರ್‌ ಸಾಏರಿದ್ದವು. ಈ ಪಂದ್ಯವನ್ನು ಪಂಜಾಬ್‌ ಸುಲಭವಾಗಿ ಗೆಲ್ಲುವಲ್ಲಿ ರಾಹುಲ್ ಪಾತ್ರ ಮುಖ್ಯ.

Chris Gayle KL Rahul and Mohammed Siraj Shine Against Former Team RCB

ಮೊಹಮ್ಮದ್ ಸಿರಾಜ್

ಈ ಸಾಲಿಗೆ ಲೇಟೆಸ್ಟ್‌ ಆಗಿ ಎಂಟ್ರಿ ನೀಡುವ ಪ್ರತಿಭೆ ಮೊಹಮ್ಮದ್ ಸಿರಾಜ್‌. ಇವರನ್ನು ಮೆಗಾ ಹರಾಜಿನ ಅಂಗಳಕ್ಕೆ ಬಿಟ್ಟಿದ್ದ ಆರ್‌ಸಿಬಿ ಇವರಿಗೆ ಆರ್‌ಟಿಎಂ ಸಹ ಬಳಿಸಲೇ ಇಲ್ಲ. ಸತತ ಏಳು ವರ್ಷಗಳ ಕಾಲ ಆರ್‌ಸಿಬಿ ಪರ ಆಡಿದ್ದ ಸಿರಾಜ್‌, ಆರ್‌ಸಿಬಿ ಬ್ಯಾಟರ್‌ಗಳಿಗೆ ಬುಧವಾರ ಚಿನ್ನಸ್ವಾಮಿ ಅಂಗಳದಲ್ಲಿ ಬಹುವಾಗಿ ಕಾಡಿದರು. ಸಿರಾಜ್‌ ಪವರ್‌ ಪ್ಲೇನಲ್ಲಿ ಆರ್‌ಸಿಬಿ ತಂಡದ ಬ್ಯಾಟಿಂಗ್‌ ಬೆನ್ನೆಲುಬು ಮುರಿದು ತಂಡಕ್ಕೆ ಪೆಟ್ಟು ನೀಡಿದರು. ಅಲ್ಲದೆ ಆರ್‌ಸಿಬಿ ಪಂದ್ಯವನ್ನು ಸೋಲುವನ್ನು ಇವರ ಬೌಲಿಂಗ್ ಕಾರಣವಾಯಿತು.ಇವರು 4 ಓವರ್‌ ಬೌಲ್‌ ಮಾಡಿ 19 ರನ್‌ ನೀಡಿ ಮೂರು ವಿಕೆಟ್‌ ಕಬಳಿಸಿದ್ದರು.

Story first published: Friday, April 4, 2025, 15:05 [IST]
Other articles published on Apr 4, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+