ಭಾರತ vs ಆಸ್ಟ್ರೇಲಿಯಾ: ಟೀಮ್ ಇಂಡಿಯಾ ಕಮ್‌ಬ್ಯಾಕ್ ಮಾಡಿದ ರೀತಿಗೆ ಕ್ರಿಸ್ ಗೇಲ್ ಪ್ರಶಂಸೆ

ಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿನ ಆಘಾತಕಾರಿ ಸೋಲಿನ ಬಳಿಕ ಎರಡನೇ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಅದ್ಭುತವಾಗಿ ತಿರುಗೇಟು ನೀಡುವ ಮೂಲಕ ಗೆಲುವು ಸಾಧಿಸಿತು. ವಿರಾಟ್ ಕೊಹ್ಲಿ ಮೊಹಮ್ಮದ್ ಶಮಿಯಂತಾ ಆಟಗಾರರ ಅಲಭ್ಯತೆಯ ಮಧ್ಯೆಯೂ ಟೀಮ್ ಇಂಡಿಯಾ ನೀಡಿದ ಪ್ರದರ್ಶನಕ್ಕೆ ಅಪಾರ ಪ್ರಮಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ವೆಸ್ಟ್ ಇಂಡೀಸ್ ತಂಡದ ದಿಗ್ಗಜ ಕ್ರಿಕೆಟಿಗ ಕ್ರಿಸ್‌ಗೇಲ್ ಕೂಡ ಟೀಮ್ ಇಂಡಿಯಾ ಪ್ರದರ್ಶನದ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ.
ಟೈಮ್ಸ್‌ನೌ ಜೊತೆಗೆ ಕ್ರಿಸ್ ಗೇಲ್ ಮಾತನಾಡುತ್ತಾ ತಂಡದ ಪ್ರದರ್ಶನದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. "ಮೊದಲನೇ ಟೆಸ್ಟ್ ಪಂದ್ಯದಲ್ಲಿ 36 ರನ್‌ಗಳಿಗೆ ಆಲೌಟ್ ಆದ ಬಳಿಕ ಅಜಿಂಕ್ಯ ರಹಾನೆ ಹಾಗೂ ಅವರ ತಂಡ ಕಮ್‌ಬ್ಯಾಕ್ ಮಾಡಿದ ರೀತಿ ನಿಜಕ್ಕೂ ಶ್ರೇಷ್ಠಮಟ್ಟದ್ದಾಗಿದೆ" ಎಂದು ಕ್ರಿಸ್‌ಗೇಲ್ ವಿವರಿಸಿದ್ದಾರೆ.
ಇದೇ ಸಂದರ್ಭದಲ್ಲಿ ಕ್ರಿಸ್ ಗೇಲ್ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಅಜಿಂಕ್ಯ ರಹಾನೆ ಸಿಡಿಸಿದ ಶತಕಕ್ಕೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ. "ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸುವುದು ಶ್ರೇಷ್ಠವಾದ ಸಾಧನೆ. ಮುಖ್ಯ ನಾಯಕ ವಿರಾಟ್ ಕೊಹ್ಲಿಯ ಅಲಭ್ಯತೆಯಲ್ಲಿ ತಂಡದ ಶ್ರೇಷ್ಠವಾದ ಕಮ್‌ಬ್ಯಾಕ್ ಇದಾಗಿದೆ. ಅಜಿಂಕ್ಯ ರಹಾನೆ ಸಿಡಿಸಿದ ಶತಕಕ್ಕಾಗಿ ನಾನು ಅವರನ್ನು ಅಭಿನಂದಿಸಲು ಬಯಸುತ್ತೇನೆ. ನೀವು ಅದ್ಭುತತವಾಗಿ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಅಮೋಘವಾದ ಶತಕವನ್ನು ಸಿಡಿಸಿದ್ದೀರಿ. ಮೂರನೇ ಟೆಸ್ಟ್ ಇನ್ನಷ್ಟು ಕುತೂಹಲಕಾರಿಯಾಗಿರಲಿದೆ" ಎಂದು ಗೇಲ್ ಅಭಿಪ್ರಾಯಪಟ್ಟಿದ್ದಾರೆ.
ಇದಕ್ಕೂ ಮುನ್ನ 41ರ ಹರೆಯದ ಜಮೈಕ ಮೂಲದ ಕ್ರಿಕೆಟರ್ ತಮ್ಮ ನಿವೃತ್ತಿಯ ಬಗ್ಗೆ ಮಾತನಾಡಿದರು. ಸದ್ಯಕ್ಕೆ ನಾನು ವಿದಾಯ ಹೇಳುವ ಬಗ್ಗೆ ಚಿಂತಿಸಿಲ್ಲ. ಮುಂದಿನ ಎರಡು ವಿಶ್ವಕಪ್‌ಗಳಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಪ್ರತಿನಿಧಿಸಲು ಬಯಸುತ್ತೇನೆ ಎಂದು ಗೇಲ್ ಹೇಳಿಕೆಯನ್ನು ನೀಡಿದ್ದರು.
"ಖಂಡಿತಾ ಈವರೆಗೆ ನಿವೃತ್ತಿಯ ಬಗ್ಗೆ ಚಿಂತಿಸಿಲ್ಲ. ನನ್ನಲ್ಲಿ ಇನ್ನೂ ಐದು ವರ್ಷ ಕ್ರಿಕೆಟ್ ಆಡುವ ಸಾಮರ್ಥ್ಯವಿದೆ ಎಂದು ಭಾವಿಸುತ್ತೇನೆ. 45ರ ಹರೆಯಕ್ಕಿಂತ ಮೊದಲು ನಿವೃತ್ತಿಯ ಯಾವುದೇ ಸಾಧ್ಯತೆಯಿಲ್ಲ. ಖಂಡಿತಾ ಎರಡು ವಿಶ್ವಕಪ್ ಗಳಲ್ಲಿ ಪಾಲ್ಗೊಳ್ಳುತ್ತೇನೆ" ಎಂದು ಕ್ರಿಸ್ ಗೇಲ್ ತಮ್ಮ ಎಂದಿನ ಶೈಲಿಯಲ್ಲಿ ಪ್ರತಿಕ್ರಿಯಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications