ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ಪಂದ್ಯದಲ್ಲಿ ಸಿಕ್ಸರ್ : ವಿಶ್ವ ದಾಖಲೆ ಬರೆದ ಕ್ರಿಸ್ ಗೇಲ್

By Mahesh

ಢಾಕಾ, ಡಿಸೆಂಬರ್ 13: ವೆಸ್ಟ್‌ಇಂಡೀಸ್ ಮೂಲದ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅವರು ಟ್ವೆಂಟಿ-20 ಕ್ರಿಕೆಟ್‌ ನಲ್ಲಿ ಹೊಸ ವಿಶ್ವದಾಖಲೆ ಬರೆದಿದ್ದಾರೆ. ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್ (ಬಿಪಿಎಲ್) ನ ಫೈನಲ್ ಪಂದ್ಯದಲ್ಲಿ 18 ಸಿಕ್ಸರ್ ಸಿಡಿಸಿದ್ದಾರೆ.

ಇನಿಂಗ್ಸ್‌ವೊಂದರಲ್ಲಿ 18 ಸಿಕ್ಸರ್‌ಗಳನ್ನು ಬಾರಿಸಿ ತಮ್ಮದೇ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಅಳಿಸಿ ಹೊಸ ದಾಖಲೆ ಬರೆದರು. ಈ ಹಿಂದೆ 2013ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಇನ್ನಿಂಗ್ಸ್ ವೊಂದರಲ್ಲಿ 17 ಸಿಕ್ಸರ್ ಬಾರಿಸಿದ್ದರು.

Chris Gayle smashes record 18 sixes in Bangladesh Premier League final

ಇದಲ್ಲದೆ ಈ ಪಂದ್ಯದ ಶತಕ ಗಳಿಸಿ ಗೇಲ್ ಅವರು ಈ ಮಾದರಿ ಕ್ರಿಕೆಟ್ ನಲ್ಲಿ ಒಟ್ಟು 20 ಶತಕ ಸಿಡಿಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡರು. ಇದಲ್ಲದೆ, ಗೇಲ್ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 11,000 ರನ್ ಪೂರೈಸಿ, ಈ ಸಾಧನೆ ಮಾಡಿದ ಮೊದಲ ದಾಂಡಿಗ ಎನಿಸಿಕೊಂಡಿದ್ದಾರೆ.

ಢಾಕಾ ಡೈನಾಮೈಟ್ಸ್ ತಂಡದ ಪರ ಆಡಿದ ಎಡಗೈ ಬ್ಯಾಟ್ಸ್ ಮನ್ ಗೇಲ್ ಅವರು, ರಾಂಗ್‌ಪುರ್ ರೈಡರ್ಸ್ ವಿರುದ್ಧ ಅಜೇಯ 146 ರನ್ (69 ಎಸೆತ, 18 ಸಿಕ್ಸರ್, 5 ಬೌಂಡರಿ) ಚೆಚ್ಚಿದರು.

320 ಟ್ವೆಂಟಿ-20 ಪಂದ್ಯಗಳನ್ನು ಆಡಿರುವ ಗೇಲ್ 40ರ ಸರಾಸರಿಯಲ್ಲಿ 150ರ ಸ್ಟ್ರೈಕ್‌ರೇಟ್‌ನಲ್ಲಿ 20 ಶತಕಗಳು ಹಾಗೂ 67 ಅರ್ಧಶತಕಗಳನ್ನು ಸಿಡಿಸಿದ್ದಾರೆ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X