ಟಿ20 ಕ್ರಿಕೆಟ್‌ನ ದೊಡ್ಡ ದಾಖಲೆ ಕೈತಪ್ಪಲು ಎಬಿ ಡಿವಿಲಿಯರ್ಸ್ ಕಾರಣ!: ಅಚ್ಚರಿಯ ಹೇಳಿಕೆ ನೀಡಿದ್ಯಾಕೆ ಕ್ರಿಸ್ ಗೇಲ್?

ಆರ್‌ಸಿಬಿ ತಂಡದ ಮಾಜಿ ಆಟಗಾರ ಕ್ರಿಸ್ ಗೇಲ್ ಟಿ20 ಕ್ರಿಕೆಟ್‌ನಲ್ಲಿ ಅನೇಕ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿರುವ ಆಟಗಾರ. ಅದು ಲೀಗ್ ಕ್ರಿಕೆಟ್ ಆಗಿರಲಿ ಅಥವಾ ಅಂತಾರಾಷ್ಟ್ರೀಯ ಟಿ20 ಪಂದ್ಯಗಳೇ ಆಗಿರಲಿ. ಟಿ20 ಮಾದರಿ ಎಂದರೆ ಕ್ರಿಕೆಟ್ ಅಭಿಮಾನಿಗಳಿಗೆ ಕ್ರಿಸ್ ಗೇಲ್ ಹೆಸರು ಕಣ್ಣಮುಂದೆ ಬರುವಷ್ಟು ಅಭಿಮಾನಿಗಳನ್ನು ಮನರಂಜಿಸಿದ್ದಾರೆ ವೆಸ್ಟ್ ಇಂಡೀಸ್‌ನ ಈ ದಿಗ್ಗಜ ಆಟಗಾರ.
ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಪರವಾಗಿ ಆಡಿ ಭರ್ಜರಿ 175 ರನ್‌ಗಳನ್ನು ಗಳಿಸಿ ದಾಖಲೆ ಬರೆದಿರುವ ಕ್ರಿಸ್ ಗೇಲ್ ಈ ಪಂದ್ಯದ ಬಗ್ಗೆ ಕುತೂಹಲಕಾರಿ ವಿಚಾರವನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಆ ಪಂದ್ಯದಲ್ಲಿ ತಾನು 200 ರನ್‌ಗಳಿಸುವ ಅವಕಾಶವನ್ನು ಹೊಂದಿದ್ದೆ ಎಂದಿದ್ದು ಆದರೆ ಅದಕ್ಕೆ ಆರ್‌ಸಿಬಿ ತಂಡದ ಮತ್ತೊಬ್ಬರ ಸ್ಟಾರ್ ಆಟಗಾರ ಎಬಿ ಡಿವಿಲಿಯರ್ಸ್ ಅಡ್ಡಿಯಾದರು ಎಂದು ಹೇಳಿದ್ದಾರೆ.

200 ರನ್‌ಗಳ ಗಡಿ ದಾಟುತ್ತಿದ್ದೆ!
2013ರ ಐಪಿಎಲ್ ಆವೃತ್ತಿಯಲ್ಲಿ ಕ್ರಿಸ್ ಗೇಲ್ ಪುಣೆ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಅಜೇಯ 175 ರನ್‌ಗಳನ್ನು ಗಳಿಸಿದ್ದರು. ಈ ಮೊತ್ತ ಈಗಲೂ ಐಪಿಎಲ್‌ನ ಅತೀ ಹೆಚ್ಚಿನ ಸ್ಕೋರ್ ಎನಿಸಿಕೊಂಡಿದೆ. ಆದೆ ಆ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ ಇಲ್ಲದಿದ್ದರೆ ತಾನು 200 ರನ್‌ಗಳ ಗಡಿದಾಟುತ್ತಿದ್ದೆ ಎಂದಿದ್ದಾರೆ ಕ್ರಿಸ್ ಗೇಲ್. ಜಿಯೋ ಸಿನಿಮಾದ ವಿಶೇಷ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕ್ರಿಸ್ ಗೇಲ್ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಡಿವಿಲಿಯರ್ಸ್‌ಗೆ ಸ್ಟ್ರೈಕ್ ನೀಡಲು ಆರ್‌ಸಿಬಿ ಆಟಗಾರರಿಂದಲೇ ಒತ್ತಡ!
ಈ ಸಂದರ್ಭದಲ್ಲಿ ಕ್ರಿಸ್ ಗೇಲ್ ಮತ್ತೊಂದು ಕುತೂಹಲಕಾರಿ ಅಂಶವನ್ನು ಕೂಡ ಹಂಚಿಕೊಂಡಿದ್ದಾರೆ. ಕ್ರಿಸ್ ಗೇಲ್ ತಾನು ಕ್ರೀಸ್‌ನಲ್ಲಿದ್ದರೂ ಅಂತಿಮ ಹಂತದಲ್ಲಿ ಬ್ಯಾಟಿಂಗ್‌ಗೆ ಇಳಿದ ಎಬಿ ಡಿವಿಲಿಯರ್ಸ್ ಸ್ಟ್ರೈಕ್ ಪಡೆದುಕೊಳ್ಳಲಿ ಎಂದು ಸ್ವತಃ ಆರ್‌ಸಿಬಿ ಆಟಗಾರರೇ ಡಗೌಟ್‌ನಿಂದ ಕಿರುಚಿ ಹೇಳುತ್ತಿದ್ದರು ಎಂದು ಕ್ರಿಸ್ ಗೇಲ್ ತಮಾಷೆಯಾಗಿ ದೂರಿದ್ದಾರೆ. "ಎಬಿ 8 ಎಸೆತಗಳಲ್ಲಿ 30 ರನ್‌ಗಳನ್ನು ಗಳಿಸಿದ್ದರು. ನಮ್ಮ ಹುಡುಗರಿಗೆ ನಾನು ಇಷ್ಟವಿಲ್ಲ. ಸ್ಟ್ರೈಕ್ ಆತನಿಗೆ ನೀಡಿ ಎನ್ನುತ್ತಿದ್ದರು. ಇಲ್ಲವಾದರೆ ನಾನು 215 ರನ್‌ಗಳನ್ನು ಗಳಿಸಿರುತ್ತಿದ್ದೆ" ಎಂದು ಕ್ರಿಸ್ ಗೇಲ್ ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಆರ್‌ಸಿಬಿ ಅಭಿಮಾನಿಗಳನ್ನು ಕೊಂಡಾಡಿದ ಗೇಲ್
ಇನ್ನು ಈ ಸಂದರ್ಭದಲ್ಲಿ ಕ್ರಿಸ್ ಗೇಲ್ ಆರ್‌ಸಿಬಿ ತಂಡದ ಬಗ್ಗೆ ಹಾಗೂ ಆರ್‌ಸಿಬಿ ಅಭಿಮಾನಿಗಳ ಬಗ್ಗೆಯೂ ವಿಶೇಷ ಮಾತುಗಳನ್ನಾಡಿದ್ದಾರೆ. ಆರ್‌ಸಿಬಿ ಬಿಟ್ಟು ಬೇರೆ ಫ್ರಾಂಚೈಸಿಗಳ ಪರವಾಗಿ ಆಡಿದ್ದರೂ ಅಭಿಆನಿಗಳು ತನ್ನನ್ನು ಆರ್‌ಸಿಬಿ ತಂಡದಿಂದಲೇ ಗುರುತಿಸುತ್ತಾರೆ. ಆರ್‌ಸಿಬಿ ತಂಡಕ್ಕೆ ವಿಶ್ವದಲ್ಲಿ ಅತ್ಯುತ್ತಮ ಅಭಿಮಾನಿ ಬಳಗವಿದೆ ಎಂದಿದ್ದಾರೆ. "ನಾನು ಆಡಿರುವ ಪೈಕಿ ಆರ್‌ಸಿಬಿ ಅತ್ಯುತ್ತಮ ಫ್ರಾಂಚೈಸಿ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 'ಆರ್‌ಸಿಬಿ ಆರ್‌ಸಿಬಿ' ಎಂದು ಅಭಿಮಾನಿಗಳು ಕಿರುಚುತ್ತಿದ್ದರೆ ಅದು ವಿಶೇಷ ಅನುಭವ. ಆರ್‌ಸಿಬಿ ಅದ್ಭುತ ಅಭಿಮಾನಿ ಬಳಗವನ್ನು ಹೊಂದಿದೆ" ಎಂದಿದ್ದಾರೆ ಕ್ರಿಸ್ ಗೇಲ್.

ಆರ್‌ಸಿಬಿ ನನ್ನ ನೆಚ್ಚಿನ ಫ್ರಾಂಚೈಸಿ ಎಂದಿದ್ದ ಗೇಲ್
ಇನ್ನು ವೈಯಕ್ತಿಕವಾಗಿ ತನಗೆ ಆರ್‌ಸಿಬಿ ಹೃದಯಕ್ಕೆ ಹತ್ತಿರಾಗಿ ಫ್ರಾಂಚೈಸಿ ಎಂದು ಈ ಹಿಂದೆ ಕೂಡ ಕ್ರೀಸ್ ಗೇಲ್ ಹಲವು ಸಂದರ್ಭಗಳಲ್ಲಿ ಹೇಳಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಊರು ಫ್ರಾಂಚೈಸಿಗಳ ಪರವಾಗಿ ಕ್ರಿಸ್ ಗೇಲ್ ಆಡಿದ್ದರೂ ತನ್ನ ನೆಚ್ಚಿನ ತಂಡ ಆರ್‌ಸಿಬಿ ಎಂದಿದ್ದಾರೆ. ಐಪಿಎಲ್‌ನಲ್ಲಿ ಸುದೀರ್ಘ ಕಾಲ ಕ್ರಿಸ್ ಗೇಲ್ ಆರ್‌ಸಿಬಿ ತಂಡದ ಪರವಾಗಿಯೇ ಆಡಿದ್ದು 2017ರಲ್ಲಿ ಕೊನೆಯ ಬಾರಿಗೆ ಆರ್‌ಸಿಬಿ ಜರ್ಸಿಯಲ್ಲಿ ಕಣಕ್ಕಿಳಿದಿದ್ದರು. ಅದಾದ ಬಳಿಕ ಪಂಜಾಬ್ ಕಿಂಗ್ಸ್ ತಂಡವನ್ನು ವಿಂಡಿಸ್ ದಿಗ್ಗಜ ಪ್ರತಿನಿಧಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications