T20 World Cup 2024: ಟಿ20 ವಿಶ್ವಕಪ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಇಂಗ್ಲೆಂಡ್ ಬೌಲರ್ ಕ್ರಿಸ್ ಜೋರ್ಡಾನ್!
ಜೂನ್ 24 ಸೋಮವಾರ, ಪ್ರಸ್ತುತ ನಡೆಯುತ್ತಿರುವ 2024ರ ಟಿ20 ವಿಶ್ವಕಪ್ ಟೂರ್ನಿ ಅಂತಿಮ ಘಟ್ಟದತ್ತ ಸಾಗುತ್ತಿದೆ. ಈ ಮೆಗಾ ಟೂರ್ನಿಯಲ್ಲಿ ಬೌಲರ್‌ಗಳು ಬ್ಯಾಟರ್‌ಗಳ ಮೇಲೆ ಪ್ರಾಬಲ್ಯ ಸಾಧಿಸಿದ್ದಾರೆ.
ಅಲ್ಲದೆ, ದಿನದಿಂದ ದಿನಕ್ಕೆ ಬೌಲರ್‌ಗಳು ಟಿ20 ವಿಶ್ವಕಪ್ 2024ರಲ್ಲಿ ಹಲವು ದಾಖಲೆಗಳನ್ನು ಸೃಷ್ಟಿಸುತ್ತಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಬ್ಯಾಟರ್‌ಗಳ ಅಬ್ಬರ ಎಂದು ಹೇಳುತ್ತಿದ್ದರು. ಆದರೆ, ಇದನ್ನು ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಬೌಲರ್‌ಗಳು ಸುಳ್ಳು ಮಾಡಿದ್ದಾರೆ.

ಇಂಗ್ಲೆಂಡ್‌ನ ವೇಗದ ಬೌಲರ್ ಕ್ರಿಸ್ ಜೋರ್ಡಾನ್ ಅವರು ಭಾನುವಾರ ಬ್ರಿಡ್ಜ್‌ಟೌನ್ ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್ ನಡೆದ ಯುಎಸ್ಎ ವಿರುದ್ಧ ಸೂಪರ್ 8 ಪಂದ್ಯದ ವೇಳೆ ಅದ್ಬುತ ಬೌಲಿಂಗ್ ಪ್ರದರ್ಶನ ಮಾಡಿದರು. ಕೇವಲ 2.5 ಓವರ್‌ಗಳಲ್ಲಿ 10 ರನ್ ಬಿಟ್ಟುಕೊಟ್ಟು ಪ್ರಮುಖ 4 ವಿಕೆಟ್ ಪಡೆದು ಮಿಂಚಿದರು.
ಯುಎಸ್‌ಎ ವಿರುದ್ಧ ಉತ್ತಮ ಲಯದಲ್ಲಿದ್ದ ಕ್ರಿಸ್ ಜೋರ್ಡಾನ್ 2024ರ ಟಿ20 ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದು ಸಂಭ್ರಮಿಸಿದರು. ಈ ಮೂಲಕ ಕ್ರಿಸ್ ಜೋರ್ಡಾನ್ ಪುರುಷರ ಟಿ20 ಅಂತರಾಷ್ಟ್ರೀಯ ಕ್ರಿಕೆಟ್ ಮತ್ತು ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಪಡೆದ ಮೊದಲ ಇಂಗ್ಲಿಷ್ ಬೌಲರ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಇನ್ನೊಂದೆಡೆ ಕ್ರಿಸ್ ಜೋರ್ಡಾನ್ ತಮ್ಮ ತವರಿನಲ್ಲಿ (ವೆಸ್ಟ್ ಇಂಡೀಸ್) ಹ್ಯಾಟ್ರಿಕ್ ವಿಕೆಟ್ ಪಡೆದು ಈ ಸಾಧನೆ ಮಾಡಿರುವುದು ವಿಶೇಷವಾಗಿತ್ತು.
ಇಂಗ್ಲೆಂಡ್ ಪರ 19ನೇ ಓವರ್ ಮಾಡಲು ಬಂದ ಕ್ರಿಸ್ ಜೋರ್ಡಾನ್ ಉತ್ತಮ ಸ್ಪೆಲ್ ಮಾಡಿದರು. 18 ನೇ ಓವರ್‌ನ ಮೂರನೇ ಎಸೆತದಲ್ಲಿ ಜೋರ್ಡಾನ್ ಮೊದಲು ಅಲಿ ಖಾನ್ (0) ಅವರ ವಿಕೆಟ್ ಉರುಳಿಸಿದರು.
ಮುಂದಿನ ನಾಲ್ಕು ಮತ್ತು ಐದನೇ ಎಸೆತಗಳಲ್ಲಿ ನೋಸ್ಟುಶ್ ಕೆಂಜಿಗ್ರೆ (0) ಮತ್ತು ಸೌರಭ್ ನೇತ್ರವಾಲ್ಕರ್ (0) ಅವರನ್ನು ಔಟ್ ಮಾಡುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದರು. ಇದಕ್ಕೂ ಮುನ್ನ ಜೋರ್ಡಾನ್ 19ನೇ ಓವರ್‌ನ ಮೊದಲ ಎಸೆತದಲ್ಲೇ ಕೋರಿ ಆಂಡರ್ಸನ್ (29) ಅವರ ವಿಕೆಟ್ ಪಡೆದರು.
ಇದರೊಂದಿಗೆ ಬ್ರೆಟ್ ಲೀ, ಕರ್ಟಿಸ್ ಕ್ಯಾಂಫರ್, ವನಿಂದು ಹಸರಂಗ, ಕಗಿಸೊ ರಬಾಡ, ಕಾರ್ತಿಕ್ ಮೆಯ್ಯಪ್ಪನ್, ಜೋಶುವಾ ಲಿಟಲ್, ಪ್ಯಾಟ್ ಕಮಿನ್ಸ್ ಸೇರಿದಂತೆ ಟಿ20 ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿರುವ ಬೌಲರ್‌ಗಳ ಪಟ್ಟಿಗೆ ಜೋರ್ಡಾನ್ ಸೇರಿದ್ದಾರೆ.
ಜೋರ್ಡಾನ್ ಹೆಸರಿನಲ್ಲಿ ಮತ್ತೊಂದು ವಿಶೇಷ ಸಾಧನೆ
ಜೋರ್ಡಾನ್ 19ನೇ ಓವರ್ ನಲ್ಲಿ ಒಟ್ಟು 4 ವಿಕೆಟ್ ಪಡೆದರು. ಟಿ20 ವಿಶ್ವಕಪ್‌ನಲ್ಲಿ ಒಂದೇ ಓವರ್‌ನಲ್ಲಿ 4 ವಿಕೆಟ್ ಪಡೆದ ವಿಶ್ವದ ಎರಡನೇ ಬೌಲರ್ ಎನಿಸಿಕೊಂಡರು. ಜೋರ್ಡಾನ್ ಅವರಿಗಿಂತ ಮೊದಲು, ಐರ್ಲೆಂಡ್‌ನ ಕರ್ಟಿಸ್ ಕ್ಯಾಂಫರ್ 2021ರ ಟಿ20 ವಿಶ್ವಕಪ್‌ನಲ್ಲಿ ಈ ಸಾಧನೆ ಮಾಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications