For Quick Alerts
ALLOW NOTIFICATIONS  
For Daily Alerts
 

'ಜೀವ ಕ್ರಿಕೆಟ್‌ಗಿಂತ ಹೆಚ್ಚು' ಎಂದು ಪಿಎಸ್‌ಎಲ್‌ಅನ್ನು ಅರ್ಧಕ್ಕೆ ತೊರೆದ ಆಸಿಸ್ ಕ್ರಿಕೆಟಿಗ

Chris Lynn leaves Pakistan Super League In Midst Of Coronavirus Pandemic

ಒಂದೆಡೆ ಕೊರೊನಾ ರೌದ್ರಾವತಾರ ತಾಳಿ ವಿಶ್ವದೆಲ್ಲೆಡೆ ಕರಾಳ ಮುಖವನ್ನು ತೋರಿಸುತ್ತಿದೆ. ಎಲ್ಲಾ ದೇಶಗಳು ಕೊರೊನಾ ಕಬಂಧಬಾಹುವಿನಿಂದ ತಪ್ಪಿಸಿಕೊಳ್ಳು ಹೆಣಗಾಡುತ್ತಿವೆ. ಬಹುತೇಕ ಎಲ್ಲಾ ಕ್ರೀಡಾ ಕೂಟಗಳೂ ರದ್ದಾಗಿದೆ. ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪಿಎಸ್‌ಎಲ್ ಲೀಗ್‌ಅನ್ನು ಪ್ರೇಕ್ಷಕರಿಲ್ಲದೆ ಟೂರ್ನಿಯನ್ನು ಮುಂದುವರಿಸುತ್ತಿದೆ.

ಈ ಮಧ್ಯೆ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಪಾಲ್ಗೊಂಡಿದ್ದ ಆಸ್ಟ್ರೇಲಿಯಾದ ಕ್ರಿಕೆಟಿಗ ಕ್ರಿಸ್ ಲೀನ್ ಅರ್ಧಕ್ಕೆ ಟೂರ್ನಿಯಿಂದ ವಾಪಸ್‌ ಆಗುವುದಾಗಿ ತಿಳಿಸಿದ್ದಾರೆ ಮಾತ್ರವಲ್ಲ ಈ ಸಂದರ್ಭದಲ್ಲಿ ಕ್ರಿಕೆಟ್‌ಗಿಂತಲೂ ಹೆಚ್ಚಿನ ಜೀವನವಿದೆ ಎಂದು ಹೇಳಿಕೆಯನ್ನು ನೀಡಿದ್ದಾರೆ. ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಕ್ರಿಸ್ ಲೀನ್ ಪಿಎಸ್‌ಎಲ್ ಟೂರ್ನಿಯನ್ನು ಅರ್ಧಕ್ಕೆ ಮೊಟಕು ಗೊಳಿಸಿ ಆಸ್ಟ್ರೇಲಿಯಾಗೆ ಮರಳುವ ನಿರ್ಧಾರವನ್ನು ತೆಗದುಕೊಂಡಿದ್ದಾರೆ.

ಪಿಎಸ್‌ಎಲ್‌ನಲ್ಲಿ ಕಳೆದ ಕ್ಷಣಗಳನ್ನು ನಾನು ತುಂಬಾ ಆನಂದಿಸಿದ್ದೇನೆ. ಆದರೆ ಇಂತಾ ಸಂದರ್ಭ ತಾನು ತನ್ನ ದೇಶಕ್ಕೆ ಮರಳಲು ನಿರ್ಧರಿಸಿದ್ದೇನೆ ಎಂದು ಕ್ರಿಸ್ ಲೀನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಪಿಎಸ್‌ಎಲ್‌ನಲ್ಲಿ ಕ್ರಿಸ್ ಲೀನ್ ಲಾಹೋರ್ ಖಲಂದರ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ಲೀಗ್‌ನಲ್ಲಿ ಈ ಬಾರಿ ಸಾಕಷ್ಟು ವಿದೇಶಿ ಆಟಗಾರರು ಪಾಲ್ಗೊಂಡಿದ್ದಾರೆ. ಅದರಲ್ಲಿ ಅಲೆಕ್ಸ್ ಹೇಲ್ಸ್, ಜೇಸನ್ ರಾಯ್, ಟೈಮಲ್ ಮಿಲ್ಸ್, ವೆಸ್ಟ್ ಇಂಡೀಸ್‌ನ ಕಾರ್ಲೋಸ್ ಬ್ರಾಥ್‌ವೆಟ್ ಸೇರಿದಂತೆ ಅನೇಕ ವಿದೇಶಿ ಆಟಗಾರರು ಈಗಾಗಲೆ ಪಿಎಸ್‌ಎಲ್‌ನಿಂದ ಅರ್ಧಕ್ಕೆ ವಾಪಸಾಗಿದ್ದಾರೆ. ಇದೀಗ ಕ್ರಿಸ್ ಲೀನ್ ಕೂಡ ತನ್ನ ಆಸ್ಟ್ರೇಲಿಯಾಗೆ ಮರಳಲಿದ್ದಾರೆ.

ಕ್ರಿಸ್ ಲೀನ್ ಆಸ್ಟ್ರೇಲಿಯಾಗೆ ಮರಳಿದರೂ ಕೂಡ ಅಲ್ಲಿ ಸರ್ಕಾರದ ಕಠಿಣ ಕ್ರಮದ ಕಾರಣದಿಂದಾಗಿ ಪ್ರತ್ಯೇಕವಾಗಿರಬೇಕಾಗುತ್ತದೆ. ಆಸ್ಟ್ರೇಲಿಯಾ ಸರ್ಕಾರ ವಿದೇಶದಿಂದ ಆಗನಿಸುವ ಪ್ರತಿಯೊಬ್ಬರು ಖಡ್ಡಾಯವಾಗಿ ಸೆಲ್ಫ್ ಹದಿನಾಲ್ಕು ದಿನಗಳ ಕಾಲ ಐಸೋಲೇಶನ್‌ಗೆ ಒಳಗಾಗಬೇಕೆಂದು ಸೂಚಿಸಿದೆ.

Story first published: Monday, March 16, 2020, 17:18 [IST]
Other articles published on Mar 16, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+