Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸ್ಟೋಯ್ನಿಸ್ ಎದುರು ಮಂಕಡ್ ನಾಟಕವಾಡಿದ ಕ್ರಿಸ್ ಮೋರಿಸ್: ವೀಡಿಯೋ

Chris Morris pulls off a ‘fake’ Mankad against Marcus Stoinis in BBL

ಸಿಡ್ನಿ, ಜನವರಿ 3: ಸಿಡ್ನಿ ಥಂಡರ್ಸ್ ಆಲ್ ರೌಂಡರ್ ಕ್ರಿಸ್‌ ಮೋರಿಸ್, ಮೆಲ್ಬರ್ನ್ ಸ್ಟಾರ್ಸ್ ಆಲ್ ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಅವರೆದುರು 'ಮಂಕಡ್' ನಾಟಕವಾಡಿದ ತಮಾಷೆಯ ದೃಶ್ಯ ಗುರುವಾರ (ಜನವರಿ 2) ಬಿಗ್‌ಬ್ಯಾಷ್ ಲೀಗ್ ಪಂದ್ಯದಲ್ಲಿ ಕಂಡುಬಂತು.

ಸಿಡ್ನಿ ಮೈದಾನದಲ್ಲಿ ನಡೆದ ಸಿಡ್ನಿ ಥಂಡರ್ಸ್ vs ಮೆಲ್ಬರ್ನ್ ಸ್ಟಾರ್ಸ್ ನಡುವಿನ ಪಂದ್ಯದ 2.3ನೇ ಓವರ್‌ನಲ್ಲಿ ಈ ಗಮ್ಮತ್ತಿನ ದೃಶ್ಯ ಕಾಣ ಸಿಕ್ಕಿತು. ಓವರ್‌ ಎಸೆಯಲು ಬರುವಾಗ ಕ್ರಿಸ್‌ ಮೋರೀಸ್ ಕೈಯಿಂದ ಚೆಂಡು ಕೈ ತಪ್ಪಿ ಕೆಳಗುರುಳಿತು. ಆ ವೇಳೆ ನಾನ್ ಸ್ಟ್ರೈಕ್‌ನಲ್ಲಿದ್ದ ಸ್ಟೋಯ್ನಿಸ್ ಕ್ರೀಸ್ ಬಿಡುವುದರಲ್ಲಿದ್ದರು.

ಸ್ಟೋಯ್ನಿಸ್ ಕ್ರೀಸ್ ಬಿಡಲು ಮುಂದಾಗುತ್ತಿರುವುದನ್ನು ಗಮನಿಸಿದ ಮೋರಿಸ್ ಚೆಂಡು ಕೈಯಲ್ಲಿಲ್ಲದಿದ್ದರೂ ಸುಮ್ಮನಾದರೂ ಸ್ಟೋಯ್ನಿಸ್ ಅವರನ್ನು ಮಂಕಡ್ ಮಾಡುವಂತೆ ನಟಿಸಿದರು. ಅಂಪೈರ್ ಅದು ಡೆಡ್ ಬಾಲ್ ಎಂದು ಸನ್ನೆ ಮಾಡಿದರೂ ಮೋರಿಸ್ ನಟನೆ ನಿಲ್ಲಲಿಲ್ಲ. ಸ್ಟೋಯ್ನಿಸ್‌ಗೆ ಚಮಕ್ ಕೊಟ್ಟ ಬಳಿಕ ಮೋರಿಸ್ ಮುಖದಲ್ಲಿ ನಗೆಯಾಡಿತು.

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಸಿಡ್ನಿ ಥಂಡರ್ಸ್, ಮ್ಯಾಥ್ಯೂ ಗಿಲ್ಕೆಸ್ 28, ಅಲೆಕ್ಸ್ ರಾಸ್ 40 ರನ್‌ನೊಂದಿಗೆ 20 ಓವರ್‌ಗೆ 7 ವಿಕೆಟ್‌ ನಷ್ಟದಲ್ಲಿ 142 ರನ್‌ ಮಾಡಿತ್ತು. ಗುರಿ ಬೆನ್ನಟ್ಟಿದ ಮೆಲ್ಬರ್ನ್ ಸ್ಟಾರ್ಸ್, ಸ್ಟೋಯ್ನಿಸ್ 58, ನಿಕ್ ಲಾರ್ಕಿನ್ 65 ರನ್‌ನೊಂದಿಗೆ 19.4 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 143 ರನ್‌ ಬಾರಿಸಿ ಗೆಲುವನ್ನಾಚರಿಸಿತು.

Story first published: Friday, January 3, 2020, 10:43 [IST]
Other articles published on Jan 3, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+