Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ಫೈನಲ್‌ಗಾಗಿ ನ್ಯೂಜಿಲೆಂಡ್ ಟೆಸ್ಟ್ ತ್ಯಜಿಸಲು ಸಿದ್ದ ಎಂದ ಇಂಗ್ಲೆಂಡ್ ಆಲ್‌ರೌಂಡರ್

Chris Woakes said he would opt to miss a Test against new Zealand for IPL final

14ನೇ ಆವೃತ್ತಿಯ ಐಪಿಎಲ್‌ಗೆ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿದೆ. ಎಲ್ಲಾ ತಂಡಗಳ ಆಟಗಾರರು ಕೂಡ ಒಬ್ಬೊಬ್ಬರಾಗಿ ತಂಡವನ್ನು ಸೇರಿಕೊಂಡು ಶಿಬಿರಗಳಲ್ಲಿ ಭಾಗಿಯಾಗಲು ಆರಂಭಿಸಿದ್ದಾರೆ. ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿರುವ ಇಂಗ್ಲೆಂಡ್ ಆಲ್‌ರೌಂಡರ್ ಕ್ರಿಸ್ ವೋಕ್ಸ್ ಹೇಳಿಕೆಯೊಂದನ್ನು ನೀಡಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಕ್ರಿಸ್ ವೋಕ್ಸ್ ಈ ಬಾರಿ ಡೆಲ್ಲಿ ಫೈನಲ್‌ಗೆ ತಲುಪಿದರೆ ಫೈನಲ್ ಪಂದ್ಯದಲ್ಲಿ ಭಾಗಿಯಾಗುವ ಸಲುವಾಗಿ ತವರಿನಲ್ಲಿ ನಡೆಯುವ ನ್ಯೂಜಿಲೆಂಡ್ ವಿರುದ್ಧದ ಒಂದು ಟೆಸ್ಟ್ ಪಂದ್ಯವನ್ನು ತಪ್ಪಿಸಿಕೊಳ್ಳಲು ಸಿದ್ದ ಎಂದು ಪ್ರತಿಕ್ರಿಯೆಯನ್ನು ನೀಡಿದ್ದಾರೆ.

"ಡೆಲ್ಲಿ ತಂಡ ಫೈನಲ್‌ಗೆ ಪ್ರವೇಶ ಪಡೆದುಕೊಂಡರೆ ಅದೊಂದು ಅವಕಾಶ ಎಂದು ಭಾವುಸುತ್ತೇನೆ. ಈ ವರ್ಷ ಭಾರತದಲ್ಲಿ ಟಿ20 ವಿಶ್ವಕಪ್ ನಡೆಯಲಿದ್ದು ಅದಕ್ಕೆ ಆಯ್ಕೆಯಾಗಲು ಅದೊಂದು ಉತ್ತಮ ಅವಕಾಶವಾಗಿದೆ. ಹಾಗಾಗಿ ಒಂದು ಟೆಸ್ಟ್ಅನ್ನು ತಪ್ಪಿಸಿಕೊಳ್ಳುವ ಆಯ್ಕೆಯನ್ನು ನಾನು ಆರಿಸುತ್ತೇನೆ" ಎಂದು ಕ್ರಿಸ್ ವೋಕ್ಸ್ ಹೇಳಿದ್ದಾರೆ.

ಕಳೆದ ಆವೃತ್ತಿಯ ಐಪಿಎಲ್‌ಗೆ ಕ್ರಿಸ್ ವೋಕ್ಸ್ ಕೌಟುಂಬಿಕ ಕಾರಣಗಳಿಂದಾಗಿ ಹಿಂದಕ್ಕೆ ಸರಿದಿದ್ದರು. ಆದರೂ ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿಯ ಆವೃತ್ತಿಗೆ ಅವರನ್ನು ರೀಟೈನ್ ಮಾಡಿಕೊಂಡು ತಂಡದಲ್ಲಿ ಉಳಿಸಿಕೊಂಡಿತ್ತು. ಹೀಗಾಗಿ ಈ ಬಾರಿಯ ಆವೃತ್ತಿಯಲ್ಲಿ ಕ್ರಿಸ್ ವೋಕ್ಸ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಕಳೆದ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫೈನಲ್‌ಗೆ ಪ್ರವೇಶವನ್ನು ಪಡೆದುಕೊಂಡಿತ್ತು. ಈ ಬಾರಿಯ ಆವೃತ್ತಿಯಲ್ಲಿಯೂ ಡೆಲ್ಲಿ ಈ ಸಾಧನೆಯನ್ನು ಪುನರಾವರ್ತಿಸಿದರೆ ಲಾರ್ಡ್ಸ್‌ನಲ್ಲಿ ಜೂನ್ 2ರಿಂದ ಆರಂಭವಾಗುವ ಟೆಸ್ಟ್ ಪಂದ್ಯದಿಂದ ವೋಕ್ಸ್ ಹೊರಗುಳಿಯಲಿದ್ದಾರೆ. ಐಪಿಎಲ್ ಫೈನಲ್ ಪಂದ್ಯ ಮೇ 30 ರಂದು ನಡೆಯಲಿದೆ.

Story first published: Thursday, March 25, 2021, 15:05 [IST]
Other articles published on Mar 25, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+