For Quick Alerts
ALLOW NOTIFICATIONS  
For Daily Alerts
 

Vamshhi Krrishna: ಸಿಕೆ ನಾಯ್ಡು ಟ್ರೋಫಿ; ಒಂದೇ ಓವರ್‌ನಲ್ಲಿ 6 ಸಿಕ್ಸರ್ ಬಾರಿಸಿ ದಾಖಲೆ ಬರೆದ ವಂಶಿ ಕೃಷ್ಣ

ಕ್ರಿಕೆಟ್‌ನಲ್ಲಿ ಎಂದಿಗೂ ಆಚರಿಸುವ ಹಲವಾರು ಸಾಹಸಗಳಿವೆ. ಒಂದು ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸುವುದು ಅವುಗಳಲ್ಲಿ ಒಂದಾಗಿದೆ. 2007ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ ಬೌಲಿಂಗ್‌ನಲ್ಲಿ ಭಾರತದ ಯುವರಾಜ್ ಸಿಂಗ್ ಬಾರಿಸಿದ ಆರು ಸಿಕ್ಸರ್‌ಗಳನ್ನು ಯಾರೂ, ಎಂದಿಗೂ ಮರೆಯಲು ಸಾಧ್ಯವಿಲ್ಲ.

ಇದಕ್ಕೂ ಮುನ್ನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಬಾರಿಸಿದ ಮೊದಲ ಬ್ಯಾಟರ್ ಹರ್ಷಲ್ ಗಿಬ್ಸ್. 2007ರ ಏಕದಿನ ವಿಶ್ವಕಪ್‌ನಲ್ಲಿ ನೆದರ್ಲ್ಯಾಂಡ್ಸ್ ತಂಡದ ಡಾನ್ ವಾನ್ ಬಂಗೆ ವಿರುದ್ಧ ಒಂದು ಓವರ್‌ನಲ್ಲಿ ಸತತ ಆರು ಸಿಕ್ಸರ್‌ಗಳನ್ನು ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್ ಪಾತ್ರರಾದರು.

ಇದೀಗ ಆ ಪಟ್ಟಿಗೆ ಆಂಧ್ರಪ್ರದೇಶದ ವಂಶಿ ಕೃಷ್ಣ ಸೇರ್ಪಡೆಯಾಗಿದ್ದಾರೆ. ಅವರು ಕರ್ನಲ್ ಸಿಕೆ ನಾಯ್ಡು ಟ್ರೋಫಿ ಪಂದ್ಯದಲ್ಲಿ ಈ ಸಾಧನೆ ಮಾಡಿದರು. ಕರ್ನಲ್ ಸಿಕೆ ನಾಯ್ಡು ಟ್ರೋಫಿಯು ಅಂಡರ್-23 ಕ್ರಿಕೆಟಿಗರಿಗೆ ರಾಷ್ಟ್ರೀಯ ಪಂದ್ಯಾವಳಿಯಾಗಿದೆ.

CK Nayudu Trophy 2024; Vamshhi Krrishna Create Record With Smashes 6 Sixes In A Single Over


ಬುಧವಾರ, ಫೆಬ್ರವರಿ 21ರಂದು ಆಂಧ್ರಪ್ರದೇಶದ ಕಡಪಾದಲ್ಲಿನ ವೈಎಸ್ ರಾಜಾಶೇಖರ್ ರೆಡ್ಡಿ ಎಸಿಪಿ ಕ್ರಿಕೆಟ್ ಸ್ಟೇಡಿಯಂನಲ್ಲಿ ರೈಲ್ವೇಸ್ ವಿರುದ್ಧ ಕರ್ನಲ್ ಸಿಕೆ ನಾಯುಡು ಟ್ರೋಫಿ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಬಾರಿಸುವ ಮೂಲಕ ಆಂಧ್ರದ ಆರಂಭಿಕ ಬ್ಯಾಟರ್ ವಂಶಿ ಕೃಷ್ಣ ದಾಖಲೆ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ.

ವಂಶಿ ಕೃಷ್ಣ ಅವರು ಮಣಿಕಟ್ಟಿನ ಸ್ಪಿನ್ನರ್ ದಮನ್‌ದೀಪ್ ಸಿಂಗ್ ಬೌಲಿಂಗ್‌ನಲ್ಲಿ ಆರು ಎಸತಗಳಲ್ಲಿ ಸತತ ಆರು ಸಿಕ್ಸರ್‌ಗಳನ್ನು ಸಿಡಿಸಿ ಈ ಸಾಧನೆ ಮಾಡಿದ ನಾಲ್ಕನೇ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಈ ಹಿಂದೆ ಈ ಸಾಧನೆಯನ್ನು ಮಾಡಿದ್ದ ರವಿಶಾಸ್ತ್ರಿ, ಯುವರಾಜ್ ಸಿಂಗ್ ಮತ್ತು ರುತುರಾಜ್ ಗಾಯಕ್ವಾಡ್ ಅವರ ಎಲೈಟ್ ಕ್ಲಬ್‌ಗೆ ವಂಶಿ ಕೃಷ್ಣ ಸೇರಿದರು. ಕೇವಲ 64 ಎಸೆತಗಳಲ್ಲಿ 9 ಬೌಂಡರಿ ಹಾಗೂ 10 ಸಿಕ್ಸರ್‌ಗಳ ನೆರವಿನಿಂದ 110 ರನ್ ಗಳಿಸಿದರು.

CK Nayudu Trophy 2024; Vamshhi Krrishna Create Record With Smashes 6 Sixes In A Single Over

ಆಂಧ್ರಪ್ರದೇಶ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 378 ರನ್ ಗಳಿಸಿದಾಗ ಬಲಗೈ ಬ್ಯಾಟರ್ ವಂಶಿ ಕೃಷ್ಣ ಇನ್ನಿಂಗ್ಸ್‌ನ ಗರಿಷ್ಠ ರನ್ ಗಳಿಸಿದ ಆಟಗಾರನಾದರು. ವಂಶಿ ಕೃಷ್ಣ ಅವರು ಮಣಿಕಟ್ಟಿನ ಸ್ಪಿನ್ನರ್ ವಿರುದ್ಧ ಮೈದಾನದ ಎಲ್ಲಾ ಭಾಗಗಳಿಗೆ ಚೆಂಡು ಕಳಿಸುವಾಗ ಅವರ ಅತ್ಯುತ್ತಮ ಸ್ಟ್ರೋಕ್‌ಗಳನ್ನು ಪ್ರದರ್ಶಿಸಿದರು.

ಮೊದಲ ಎಸೆತವನ್ನು ಡೀಪ್ ಸ್ಕ್ವೇರ್ ಲೆಗ್‌ನಲ್ಲಿ ಸ್ಲಾಗ್-ಸ್ವೀಪ್ ಮಾಡಿದರೆ, ಎರಡನೇ ಸಿಕ್ಸರ್ ಬಾರಿಸಲು ಚೆಂಡನ್ನು ನೇರವಾಗಿ ಬೌಲರ್‌ನ ತಲೆಯ ಮೇಲೆ ಹೊಡೆದರು. ಸ್ಫೋಟಕ ಆರಂಭಿಕ ಬ್ಯಾಟರ್ ಮುಂದಿನ ನಾಲ್ಕು ಎಸೆತಗಳನ್ನು ಪವರ್‌ಫುಲ್ ಶಾಟ್‌ಗಳ ಮೂಲಕ ಐತಿಹಾಸಿಕ ಸಾಧನೆ ಪೂರ್ಣಗೊಳಿಸಿದರು.

ಗಮನಾರ್ಹವೆಂದರೆ, ವೆಸ್ಟ್ ಇಂಡೀಸ್‌ನ ಲೆಜೆಂಡ್ ಆಲ್‌ರೌಂಡರ್ ಸರ್ ಗಾರ್ಫೀಲ್ಡ್ ಸೋಬರ್ಸ್ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಓವರ್‌ನಲ್ಲಿ ಸತತ ಆರು ಸಿಕ್ಸರ್‌ಗಳನ್ನು ಸಿಡಿಸಿದ ಮೊದಲ ಆಟಗಾರ.

ಸರ್ ಗಾರ್ಫೀಲ್ಡ್ ಸೋಬರ್ಸ್ ಅವರು 1968ರಲ್ಲಿ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಗ್ಲಾಮೋರ್ಗನ್‌ನ ಮಾಲ್ಕಮ್ ನ್ಯಾಶ್ ವಿರುದ್ಧ ನಾಟಿಂಗ್‌ಹ್ಯಾಮ್‌ಶೈರ್ ಪರ ಆಡುವಾಗ ಈ ಸಾಧನೆಯನ್ನು ಮಾಡಿದ್ದರು.

ನಂತರ, ಭಾರತೀಯ ಲೆಜೆಂಡ್ ರವಿಶಾಸ್ತ್ರಿ ಅವರು ಬರೋಡಾ ವಿರುದ್ಧ ಮುಂಬೈ ಪರ 1985ರಲ್ಲಿ ಒಂದು ಓವರ್‌ನಲ್ಲಿ ಆರು ಸಿಕ್ಸರ್ ಬಾರಿಸಿದ ಮೊದಲ ಭಾರತೀಯ ಆಟಗಾರನಾಗಿದ್ದಾರೆ.

ಇದೇ ವೇಳೆ, ಮತ್ತೊಬ್ಬ ಭಾರತೀಯ ರುತುರಾಜ್ ಗಾಯಕ್ವಾಡ್ 2022ರ ವಿಜಯ್ ಹಜಾರೆ ಟ್ರೋಫಿಯ ಮಹಾರಾಷ್ಟ್ರ ಮತ್ತು ಉತ್ತರಪ್ರದೇಶ ನಡುವಿನ ಪಂದ್ಯದಲ್ಲಿ ಏಳು ಸಿಕ್ಸರ್‌ಗಳನ್ನು ಸಿಡಿಸಿದರು.

ವೆಸ್ಟ್ ಇಂಡೀಸ್‌ನ ಕೀರಾನ್ ಪೊಲಾರ್ಡ್ ಮತ್ತು ಯುಎಸ್‌ಎಯ ಜಸ್ಕರನ್ ಮಲ್ಹೋತ್ರಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಸಾಧನೆ ಮಾಡಿದ ಇತರ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ.

Story first published: Wednesday, February 21, 2024, 21:34 [IST]
Other articles published on Feb 21, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+