ಮಹಾರಾಷ್ಟ್ರದ ನಾಲ್ವರು ಟಿ20 ವಿಶ್ವಕಪ್ ವಿಜೇತರನ್ನು ಸನ್ಮಾನಿಸಿದ ಸಿಎಂ ಏಕನಾಥ್ ಶಿಂಧೆ
ಜುಲೈ 5 ಶುಕ್ರವಾರ, ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆದ 2024ರ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ ರೋಚಕ ಜಯ ಸಾಧಿಸಿತ್ತು. ಈ ಗೆಲುವಿನ ಬಳಿಕ ದೇಶದೆಲ್ಲೆಡೆ ಭಾರತ ತಂಡವನ್ನು ಹೊಗಳುತ್ತಿದ್ದಾರೆ.
ಗುರುವಾರ ಬಾರ್ಬಡೋಸ್‌ನಿಂದ ತವರಿಗೆ ಮರಳಿದ ಭಾರತ ತಂಡವನ್ನು ನರೇಂದ್ರ ಮೋದಿ ಅಭಿನಂದಿಸಿದ್ದರು. ಬಳಿಕ ಮುಂಬೈನಲ್ಲಿ ವಿಶ್ವಕಪ್‌ನೊಂದಿಗೆ ಭಾರತ ತಂಡದ ವಿಕ್ಟರಿ ಪರೇಡ್ ನಡೆದಿತ್ತು. ಅಲ್ಲಿಂದ ವಾಂಖೆಡೆ ಸ್ಟೇಡಿಯಂನಲ್ಲಿ ಅದ್ಧೂರಿ ಅಭಿನಂದನೆ ಕಾರ್ಯಕ್ರಮ ಜರುಗಿತ್ತು.

ಇದೀಗ ಟಿ20 ವಿಶ್ವಕಪ್ 2024ರ ಚಾಂಪಿಯನ್ ಟೀಮ್ ಇಂಡಿಯಾದ ಭಾಗವಾಗಿದ್ದ ಮಹಾರಾಷ್ಟ್ರದ ನಾಲ್ವರು ಆಟಗಾರರನ್ನು ರಾಜ್ಯ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸನ್ಮಾನಿಸಿದರು. ಮುಖ್ಯಮಂತ್ರಿಗಳ ಅಧಿಕೃತ ವರ್ಷ ನಿವಾಸದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್, ಆಲ್‌ರೌಂಡರ್ ಶಿವಂ ದುಬೆ ಮತ್ತು ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು ಏಕನಾಥ್ ಶಿಂಧೆ ಅವರನ್ನು ಭೇಟಿಯಾದರು.
ಶುಕ್ರವಾರ, ಮಹಾರಾಷ್ಟ್ರ ರಾಜ್ಯ ಶಾಸಕಾಂಗದ ವತಿಯಿಂದ, ಮುಂಬೈನ ಟಿ20 ವಿಜೇತ ಭಾರತ ತಂಡದ 4 ಆಟಗಾರರ ಸನ್ಮಾನ ಸಮಾರಂಭವು ವಿಧಾನ ಭವನದ ಸೆಂಟ್ರಲ್ ಹಾಲ್‌ನಲ್ಲಿ ನಡೆಯಿತು. ಇದಕ್ಕೂ ಮೊದಲು ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಶಿವಂ ದುಬೆ ಮತ್ತು ಯಶಸ್ವಿ ಜೈಸ್ವಾಲ್ ಅವರು ರಾಜ್ಯದ ಮುಖ್ಯಮಂತ್ರಿಗಳ ಅಧಿಕೃತ ನಿವಾಸಕ್ಕೆ ತಲುಪಿದರು.
ಈ ವೇಳೆ ನಾಲ್ವರು ಆಟಗಾರರನ್ನು ಮುಖ್ಯಮಂತ್ರಿ ಏಕನಾಥ್ ಶಿಂಧೆ ಸನ್ಮಾನಿಸಿದರು. ಪಂದ್ಯದ ರೋಚಕತೆ ಬಗ್ಗೆ ನಾಯಕ ರೋಹಿತ್ ಶರ್ಮಾ ಹಾಗೂ ಮುಖ್ಯಮಂತ್ರಿ ಏಕನಾಥ್ ಶಿಂಧೆ ಚರ್ಚೆ ನಡೆಸಿದರು.
ಬಳಿಕ ಟೀಮ್ ಇಂಡಿಯಾ ಆಟಗಾರಿಗೆ ಶಿಂಧೆ ಶುಭಾಶಯಗಳನ್ನು ಹೇಳಿದರು. ಇದಾದ ನಂತರ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಶಿವಂ ದುಬೆ ಮತ್ತು ಯಶಸ್ವಿ ಜೈಸ್ವಾಲ್, ಶಿಂಧೆ ಅವರೊಂದಿಗೆ ವಿಧಾನಸಭೆಗೆ ತೆರಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications