For Quick Alerts
ALLOW NOTIFICATIONS  
For Daily Alerts
 

'ಕುಂಬ್ಳೆ ಕೋಚ್ ಹುದ್ದೆ ತೊರೆಯಲು, ಕೊಹ್ಲಿ ಎಸ್ಎಂಎಸ್ ಕಾರಣ'

ಕುಂಬ್ಳೆ ಕೋಚ್ ಹುದ್ದೆ ತೊರೆಯಲು, ಕೊಹ್ಲಿ ಎಸ್ಎಂಎಸ್ ಕಾರಣ..! | Oneindia Kannada
CoA Member Diana Edulji Accuses Kohli Of Sending Sms Which Led To the Exit Of Kumble And Appointment Of Shastri

ಬೆಂಗಳೂರು, ಡಿಸೆಂಬರ್ 13: ಮಹಿಳಾ ಕ್ರಿಕೆಟ್ ತಂಡಕ್ಕೆ ಕೋಚ್ ಆಯ್ಕೆ ಗೊಂದಲ ಮುಂದುವರೆದಿದೆ. ಈ ನಡುವೆ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸಲಿರುವ ಬಿಸಿಸಿಐ ಆಡಳಿತ ಮಂಡಳಿ(ಸಿಒಎ) ಸದಸ್ಯೆ ಡಯಾನಾ ಎಡುಲ್ಜಿ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.

ಅಂದು ಟೀಂ ಇಂಡಿಯಾ ಕೋಚ್ ಆಗಿ ಆಯ್ಕೆಯಾಗಿದ್ದ ಕನ್ನಡಿಗ ಅನಿಲ್​ ಕುಂಬ್ಳೆ ಅವರನ್ನು ತಂಡದ ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿಸಲು ಕ್ಯಾಪ್ಟನ್​ವಿರಾಟ್​ ಕೊಹ್ಲಿ ಅವರ ಒಂದು ಎಸ್ಎಂಎಸ್ ಸಾಕಾಯಿತು. ಆ ಒಂದು ಎಸ್ಎಂಎಸ್ ಆಧಾರದ ಮೇಲೆ ಬಿಸಿಸಿಐ ನಿರ್ಧಾರ ಕೈಗೊಂಡಿತ್ತು.

ಮಹಿಳಾ ತಂಡದ ಕೋಚ್​ ರಮೇಶ್ ಪವಾರ್​ ವಿಚಾರವಾಗಿ ಮಾತನಾಡಿರುವ ಡಯಾನಾ ಎಡುಲ್ಜಿ, ಪುರುಷರ ತಂಡದ ಕೋಚ್ ಅವರನ್ನ ಆ ತಂಡದ ಕ್ಯಾಪ್ಟನ್​ ಹೇಳಿದ್ದಕ್ಕೆ ತೆಗೆದು ಹಾಕುವುದಾದರೆ ಇದೀಗ ತಂಡಕ್ಕೆ ಪವಾರ್​ ಕೋಚ್​ ಆಗಿರಬೇಕು ಎಂದು ಕ್ಯಾಪ್ಟನ್​ ಹರ್ಮನ್​ಪ್ರೀತ್​ ಕೌರ್​ ಹಾಗೂ ಸ್ಮೃತಿ ಮಂದಾನಾ ಹೇಳುತ್ತಿದ್ದು, ಅವರನ್ನ ಮುಂದುವರೆಸಿಕೊಂಡು ಹೋಗದಿರಲು ಕಾರಣವೇನು ಎಂದು ಪ್ರಶ್ನೆ ಮಾಡಿದ್ದಾರೆ.

2017ರ ಜೂನ್​ ತಿಂಗಳಲ್ಲಿ ಅನಿಲ್​ ಕುಂಬ್ಳೆ ತಮ್ಮ ಕೋಚ್​ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕುಂಬ್ಳೆ- ಕೊಹ್ಲಿ ಅವರ ಮನಸ್ತಾಪದ ಬಗ್ಗೆ ಊರೆಲ್ಲ ಸುದ್ದಿಯಾದರೂ ಹಾಗೇನಿಲ್ಲ ಎಂದು ಬಿಸಿಸಿಐ ಸ್ಪಷ್ಟನೆ ನೀಡಿತ್ತು.

Story first published: Thursday, December 13, 2018, 12:38 [IST]
Other articles published on Dec 13, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+