Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹಾರ್ದಿಕ್ ಪಾಂಡ್ಯ- ರಾಹುಲ್ ಪ್ರಕರಣ ಓಂಬುಡ್ಸ್ಮನ್‌ಗೆ ಶೀಘ್ರ ಹಸ್ತಾಂತರ

CoA to refer Hardik Pandya-KL Rahul matter to Ombudsman

ನವದೆಹಲಿ, ಮಾರ್ಚ್ 6: ಟಿವಿ ಟಾಕ್ ಶೋನಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಪ್ರಕರಣವನ್ನು ಸುಪ್ರೀಮ್ ಕೋರ್ಟ್ ನೇಮಿತ ಬಿಸಿಸಿಐ ಕಮಿಟಿ ಆಫ್ ಅಡ್ಮಿನಿಸ್ಟ್ರೇಟರ್ಸ್ (ಸಿಒಎ), ಹೊಸದಾಗಿ ನೇಮಿಸಲಾಗಿರುವ ಓಂಬುಡ್ಸ್ಮನ್ ಡಿಕೆ ಜೈನ್‌ಗೆ ಹಸ್ತಾಂತರಿಸಲಿದೆ.

ಬಾಲಿವುಡ್ ನಟ, ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ 'ಕಾಫೀ ವಿತ್ ಕರಣ್' ಶೋನಲ್ಲಿ ಪಾಲ್ಗೊಂಡಿದ್ದ ಯುವ ಕ್ರಿಕೆಟಿಗರಾದ ಪಾಂಡ್ಯ ಮತ್ತು ರಾಹುಲ್ ಮಹಿಳೆಯರ ಬಗ್ಗೆ ಪೂರ್ವಾಗ್ರಹ ಪೀಡಿತರಂತೆ ಅಶ್ಲೀಲವಾಗಿ ಹೇಳಿಕೆ ನೀಡಿದ್ದರು. ಇದು ವಿವಾದಕ್ಕೆ ಗುರಿಯಾಗಿತ್ತು. ಇದಕ್ಕಾಗಿ ಇಬ್ಬರೂ ಆಸ್ಟ್ರೇಲಿಯಾ ವಿರುದ್ಧದ ಸರಣಿಯೊಂದರಿಂದ ಅಮಾನತಾಗಿದ್ದರು.

ಆದರೆ ಪ್ರಕರಣದ ವಿಚಾರಣೆ ಪೂರ್ಣಗೊಳ್ಳದೆ ಬಾಕಿಯಾಗಿತ್ತು. ಇದೀಗ ಸುಪ್ರೀಮ್ ಕೋರ್ಟ್‌ನಿಂದ ನೇಮಿಸಲ್ಪಟ್ಟಿರುವ ಓಂಬುಡ್ಸ್ಮನ್‌ ಜೈನ್ ಹೆಗಲಿಗೆ ಪ್ರಕರಣದ ವಿಚಾರಣೆ ಬೀಳಲಿದ್ದು, ಜೈನ್ ವಿಚಾರಣೆ ಕೈಗೆತ್ತಿಕೊಳ್ಳುವುದರಲ್ಲಿದ್ದಾರೆ. ವಿಚಾರಣೆ ಆದೇಶಕ್ಕಾಗಿ ತಾನು ಕಾಯುತ್ತಿರುವುದಾಗಿ ಡಿಕೆ ಜೈನ್ ತಿಳಿಸಿದ್ದಾರೆ (ಮೇಲಿನ ಟ್ವಿಟರ್ ಚಿತ್ರದಲ್ಲಿ ರಾಹುಲ್-ಪಾಂಡ್ಯ ಕುರಿತು ಟ್ರೋಲ್).

Story first published: Wednesday, March 6, 2019, 19:02 [IST]
Other articles published on Mar 6, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+