Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸ್ಟ್ರಿಕ್ಟ್‌ ಹೆಡ್‌ ಮಾಸ್ಟರ್‌ ಹುಡುಕಾಟದಲ್ಲಿ ಇಂಗ್ಲೆಂಡ್‌; ಇಸಿಬಿ ಬಂಪರ್ ಆಫರ್‌

ಇಂಗ್ಲೆಂಡ್ ಕ್ರಿಕೆಟ್‌ನಲ್ಲಿ ಬಿರುಗಾಳಿಯ ಗಾಳಿ ಬೀಸಿದೆ. ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್‌ ಇತ್ತೀಚೆಗೆ ನಿವೃತ್ತಿಯನ್ನು ಘೋಷಿಸಿದ್ದರು. ಈಗ ಇಂಗ್ಲೆಂಡ್ ತಂಡ ಕೋಚ್‌ ಬದಲಾವಣೆಗೂ ಮಣೆ ಹಾಕಿದೆ. ನಾಲ್ಕು ವರ್ಷದಿಂದ ಇಂಗ್ಲೆಂಡ್ ತಂಡದ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ನ್ಯೂಜಿಲೆಂಡ್ ತಂಡದ ಮಾಜಿ ಆಟಗಾರ ಬ್ರೆಂಡನ್ ಮೆಕಲಮ್‌ ಅವರನ್ನು ಕೆಳಗಿಳಿಸಲು ನಿರ್ಧರಿಸಲಾಗಿದೆ. ಇವರ ಸ್ಥಾನದಲ್ಲಿ ಇಂಗ್ಲೆಂಡ್‌ ಕ್ರಿಕೆಟ್ ಬೋರ್ಡ್‌ ಸ್ಟ್ರಿಕ್ಟ್‌ ಹೆಡ್‌ ಮಾಸ್ಟರ್‌ ಒಬ್ಬರ ಹುಡುಕಾಟದಲ್ಲಿದೆ.

ಇಂಗ್ಲೆಂಡ್‌ ತಂಡ ಈ ಬಾರಿ ಒಬ್ಬ ನುರಿತ ಕೋಚ್‌ಗೆ ಮಣೆ ಹಾಕಲು ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಇದಕ್ಕಾಗಿ ತನ್ನ ನಿಯಮಗಳಲ್ಲೂ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲು ಸಹ ಸಿದ್ಧವಾಗಿದೆ ಎಂದು ವರದಿಗಳು ಬಂದಿವೆ. ಬ್ರೆಂಡನ್‌ ಮೆಕಲಮ್ ಅವರ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಗಳನ್ನು ಹುಡುಕುತ್ತಿರುವ ಇಂಗ್ಲೆಂಡ್‌ ಕೆಲವೊಂದು ಆಫರ್‌ಗಳನ್ನು ಸಹ ನೀಡಲು ತೀರ್ಮಾನಿಸಿದೆ.

Coach Hunt

ಇಂಗ್ಲೆಂಡ್‌ ಕೋಚ್‌ ರೇಸ್‌ನಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚ್‌ ಆಂಡಿ ಫ್ಲಾವರ್‌, ಟೀಮ್ ಇಂಡಿಯಾದ ಮಾಜಿ ಕೋಚ್ ರಾಹುಲ್‌ ದ್ರಾವಿಡ್‌, ರಾಜಸ್ಥಾನ್ ರಾಯಲ್ಸ್ ತಂಡದ ಕೋಚ್‌ ಕುಮಾರ್ ಸಂಗಾಕ್ಕರ್ ಸೇರಿದಂತೆ ಹಲವು ಕೋಚ್‌ಗಳನ್ನು ಇಂಗ್ಲೆಂಡ್‌ ಶಾರ್ಟ್‌ ಲೀಸ್ಟ್‌ ಮಾಡಿದೆ ಎಂದು ತಿಳಿದು ಬಂದಿದೆ.

ಇಸಿಬಿ ಬಿಗ್ ಆಫರ್‌

ಹೊಸ ಕೋಚ್‌ ಹುಡುಕಾಟದಲ್ಲಿರುವ ಇಸಿಬಿ ಐಪಿಎಲ್‌ನಲ್ಲೂ ಕಾರ್ಯನಿರ್ವಹಿಸಲು ಅನುಮತಿ ನೀಡಿದೆ. ಇದರಿಂದ ಆರ್‌ಸಿಬಿ ತಂಡದ ಕೋಚ್‌ ಆಂಡಿ ಫ್ಲಾವರ್ ಅವರು ಇಂಗ್ಲೆಂಡ್ ತಂಡದ ಕೋಚ್‌ ಆಗಿ ಮರಳಲು ಬಾಗಿಲು ಓಪನ್ ಆದಂತೆ ಆಗಿದೆ.

ಈ ಮೊದಲು ಇಂಗ್ಲೆಂಡ್‌ ಕೋಚ್ ಆದವರು ವಿಶ್ವದ ಬೇರೆ ಬೇರೆ ಟಿ20 ಲೀಗ್‌ಗಳಲ್ಲಿ ಕಾರ್ಯನಿರ್ವಹಿಸುವಂತಿಲ್ಲ ಎಂಬ ನಿಯಮವಿತ್ತು. ಆದರೆ ಈ ಇಸಿಬಿ ಈ ನಿಯಮದಿಂದ ಕೊಂಚ ಹಿಂದಕ್ಕೆ ಸರಿದಂತೆ ಕಾಣುತ್ತಿದೆ. ಈ ಬಗ್ಗೆ ಇಸಿಬಿ ಮುಖ್ಯ ಕಾರ್ಯನಿರ್ವಾಹಕ ರಿಚರ್ಡ್‌ ಗೌಲ್ಡ್‌ ಪ್ರಸ್ತಾಪನೆಯನ್ನು ಮಂಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಆರ್‌ಸಿಬಿ ಚಾಂಪಿಯನ್‌ ಕೋಚ್‌

ಈಗಾಗಲೇ ಇಂಗ್ಲೆಂಡ್‌ ಕೋಚ್ ಆಗಿ ಕಾರ್ಯನಿರ್ವಹಿಸಿರುವ ಆಂಡಿ ಫ್ಲಾವರ್ ಅವರು ಮತ್ತೆ ತಂಡವನ್ನು ಸೇರುವ ಆಸೆ ಚಿಗುರಿದೆ. ಇವರು ಈ ಹಿಂದೆ 2009 ರಿಂದ 2014ರ ವರೆಗೆ ಇಂಗ್ಲೆಂಡ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಇವರ ಗರಡಿಯಲ್ಲಿ ತಂಡ ದೊಡ್ಡ ಯಶಸ್ಸನ್ನು ಸಹ ಕಂಡಿತ್ತು. ಈಗ ಮತ್ತೆ ಇಸಿಬಿ ಇವರಿಗೆ ಗಾಳ ಹಾಕಲು ಪ್ಲ್ಯಾನ್ ನಡೆಸಿದೆಯಾ? ಎಂಬ ಚರ್ಚೆಗಳು ಆರಂಭವಾಗಿವೆ.

ಆಂಡಿ ಫ್ಲಾವರ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಹೆಡ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಅವಧಿಯಲ್ಲಿ ಆರ್‌ಸಿಬಿ ಬ್ಯಾಕ್‌ ಟು ಬ್ಯಾಕ್‌ ಎರಡು ಬಾರಿ ಐಪಿಎಲ್‌ ಟ್ರೋಫಿ ಎತ್ತಿ ಸಂಭ್ರಮಿಸಿದೆ. ಹೀಗಾಗಿ ಫ್ಲವರ್‌ ಅವರು ಆರ್‌ಸಿಬಿ ತೊರೆಯಲು ಹಿಂದೆಟು ಹಾಕುವ ಸಾಧ್ಯತೆ ಇದೆ. ಹೀಗಾಗಿ ಇಂಗ್ಲೆಂಡ್ ಬಿಗ್ ಆಫರ್ ನೀಡಿದೆ ಎಂದು ಹೇಳಲಾಗುತ್ತಿದೆ.

Story first published: Tuesday, July 14, 2026, 12:27 [IST]
Other articles published on Jul 14, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+