ಕೋಚ್ ಶಾಸ್ತ್ರಿ ಮತ್ತು ತಂಡದ ಸೇವೆ ವಿಶ್ವಕಪ್ ನಂತರ ವಿಸ್ತರಣೆ!

ಹೊಸದಿಲ್ಲಿ, ಜೂನ್ 12: ಟೀಮ್ ಇಂಡಿಯಾದ ಪ್ರಮುಖ ಕೋಚ್ ರವಿ ಶಾಸ್ತ್ರಿ ಮತ್ತು ತರಬೇತಿ ಸಿಬ್ಬಂದಿ ಜೊತೆಗಿನ ಒಪ್ಪಂದವು ಪ್ರಸಕ್ತ ಏಕದಿನ ಕ್ರಿಕೆಟ್ ವಿಶ್ವಕಪ್‌ನೊಂದಿಗೆ ಮುಗಿಯಲಿದ್ದು, ಹೆಚ್ಚುವರಿ 45 ದಿನಗಳ ಕಾಲ ಅವರ ಸೇವೆ ವಿಸ್ತರಿಸಲಾಗಿದೆ ಬಿಸಿಸಿಐ ಹೇಳಿದೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಪ್ರಮುಖ ಕೋಚ್ ರವಿ ಶಾಸ್ತ್ರಿ ಹೊರತಾಗಿ, ಸಹಾಯಕ ಕೋಚ್ ಸಂಜಯ್ ಬಾಂಗರ್, ಬೌಲಿಂಗ್ ಕೋಚ್ ಅರುಣ್ ಹಾಗೂ ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ತರಬೇತಿ ಸಿಬ್ಬಂದಿ ವರ್ಗದಲ್ಲಿದ್ದಾರೆ. ಸೇವೆಯ ಅವಧಿ ವಿಸ್ತರಣೆಯ ವಿಷಯವನ್ನು ಸುಪ್ರೀಂ ಕೋರ್ಟ್ ನೇಮಿತ ಬಿಸಿಸಿಐನ ಆಡಳಿತ ಸಮಿತಿ (ಸಿಒಎ) ಪ್ರಸ್ತಾಪಿಸಿದ್ದು, ಬಿಸಿಸಿಐನ ಅಧಿಕಾರಿಗಳು ಇದಕ್ಕೆ ಸಮ್ಮತಿಸಿದ್ದಾರೆ ಎಂದು ಬಿಸಿಸಿಐ ತನ್ನ ವೆಬ್‌ಸೈಟ್ ಮೂಲಕ ತಿಳಿಸಿದೆ.
"ಕೆಲ ಹೊತ್ತು ಚರ್ಚೆಯ ಬಳಿಕ, ಟೀಮ್ ಇಂಡಿಯಾದ ತರಬೇತಿ ಮತ್ತು ಸಹಾಯಕ ಸಿಬ್ಬಂದಿ ಜೊತೆಗಿನ ಒಪ್ಪಂದವನ್ನು ಹೆಚ್ಚುವರಿ 45 ದಿನಗಳ ಕಾಲ ವಿಸ್ತರಿಸಲು ಸಿಒಎ ನಿರ್ಧರಿಸಿದೆ. ಇನ್ನು ವಿಶ್ವಕಪ್ ಬಳಿಕ ನೂತನ ತರಬೇತಿ ಮತ್ತು ಸಹಾಯಕ ಸಿಬ್ಬಂದಿ ವರ್ಗದ ಆಯ್ಕೆಗೆ ಸಂದರ್ಶನ ನಡೆಯಲಿದೆ,'' ಎಂದು ವಿವರಿಸಿದೆ.
"ಟೀಮ್ ಇಂಡಿಯಾದ ಮುಖ್ಯ ಕೋಚ್ ಆಯ್ಕೆ ವಿಚಾರದಲ್ಲಿ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಪಾಲ್ಗೊಳ್ಳುವಿಕೆ ಅಗತ್ಯವಿದೆ. ಈ ವಿಚಾರವಾಗಿ ಬಿಸಿಸಿಐ ಆಡಳಿತ ಮಂಡಳಿಯು ಸಿಎಸಿ ಸದಸ್ಯರೊಂದಿಗೆ ಚರ್ಚಿಸಿ ಅವರ ನಿರೀಕ್ಷೆ ಏನು ಎಂಬುದನ್ನು ತಿಳಿದುಕೊಳ್ಳಬೇಕಿದೆ,'' ಎಂದು ಹೇಳಿದೆ.
ಆದರೆ, ಸಿಎಸಿ ಸದಸ್ಯರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್, ಐಪಿಎಲ್ ವೇಳೆ ಹಿತಾಸಕ್ತ ಸಂಘರ್ಷದ ಆರೋಪ ಎದುರಿಸಿದ ಸಂದರ್ಭದಲ್ಲಿ ಬಿಸಿಸಿಐನ ಒಂಬುಡ್ಸ್‌ಮನ್ ಡಿ.ಕೆ ಜೈನ್ ಅವರ ಬಳಿ ಸಿಎಸಿಯಲ್ಲಿ ತಮ್ಮ ಪಾತ್ರದ ಕುರಿತಾಗಿ ಬಿಸಿಸಿಐ ಸ್ಪಷ್ಟವಾಗಿ ಹೇಳಿಲ್ಲ. ಹೀಗಾಗಿ ಈ ಜವಾಬ್ದಾರಿಯಿಂದ ಹೊರಬರಲು ಸಿದ್ದರಿರುವುದಾಗಿ ಹೇಳಿದ್ದರು. ಹೀಗಾಗಿ ಈ ವಿಚಾರವಾಗಿ ಸಿಒಎ ಮೊದಲಿಗೆ ಪರಿಹಾರ ಕಂಡುಕೊಳ್ಳಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications