Ishan Kishan: ರಾಯಲ್ಸ್ ವಿರುದ್ಧ ಇಶಾನ್ ಶತಕದ ಇನಿಂಗ್ಸ್ ಬಗ್ಗೆ ಕೋಚ್ ಹೇಳಿದಿಷ್ಟು..
ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ಈ ಲೀಗ್‌ನ ಎರಡನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಕಾದಾಟ ನಡೆಸಿದವು. ಈ ವೇಳೆ ಇಶಾನ್ ಕಿಶನ್ ತಮ್ಮ ಮೈಚಳಿ ಬಿಟ್ಟು ಬ್ಯಾಟ್ ಮಾಡಿದರು. ಈ ಮೂಲಕ ಐಪಿಎಲ್‌ನಲ್ಲಿ ತಮ್ಮ ಚೊಚ್ಚಲ ಶತಕದ ಸಾಧನೆ ಮಾಡಿದರು. ಐಪಿಎಲ್‌ನಲ್ಲಿ ಇಶಾನ್ 90 ರನ್‌ಗಳ ವರೆಗೆ ಇನಿಂಗ್ಸ್ ಕಟ್ಟಿದ್ದರು. ಆದರೆ ಶತಕ ಬಾರಿಸುವಲ್ಲಿ ವಿಫಲರಾಗಿದ್ದರು. ಆದರೆ ಮುತ್ತಿನ ನಗರಿಯಲ್ಲಿ ಕ್ಲಾಸ್ ಇನಿಂಗ್ಸ್ ಕಟ್ಟಿ ಗಮನ ಸೆಳೆದರು.
ಐಪಿಎಲ್‌ನಲ್ಲಿ ಇಶಾನ್ ಕಿಶನ್ ಅಮೋಘ ಲಯಕ್ಕೆ ಮರಳಿದ್ದಾರೆ. ಸುಮಾರು ಏಳು ವರ್ಷಗಳ ಕಾಲ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದ ಇಶಾನ್, ಈಗ ಆರೆಂಜ್ ಆರ್ಮಿ ಕ್ಯಾಂಪ್ ಸೇರಿಕೊಂಡಿದ್ದಾರೆ. ಇಶಾನ್ ಸನ್‌ರೈಸರ್ಸ್ ಹೈದರಾಬಾದ್ ಪರ ಆಡಿದ ಮೊದಲ ಪಂದ್ಯದಲ್ಲಿ ಅಬ್ಬರಿಸಿದ್ದಾರೆ. ಇವರ ಅಮೋಘ ಇನಿಂಗ್ಸ್ ಕಂಡು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಇವರ ಈ ಆಟದ ಬಗ್ಗೆ ಇಶಾನ್ ಕಿಶನ್ ಕೋಚ್ ಉತ್ತಮ್ ಮಜುಂದಾರ್ ಮೈಖೇಲ್ ಜೊತೆ ತಮ್ಮ ಶಿಷ್ಯನ ಸಾಧನೆಯನ್ನು ಕೊಂಡಾಡಿದ್ದಾರೆ.

ಕೋಚ್ ಹೇಳಿದ್ದೇನು?
ಮೈಖೇಲ್ ಜೊತೆ ಮಾತನಾಡಿರುವ ಇಶಾನ್ ಕಿಶನ್ ಕೋಚ್ ಉತ್ತಮ್ ಮಜುಂದಾರ್, ಇಶಾನ್ ಕೆಲವು ವರ್ಷಗಳ ಕಾಲಾ ಸಾಕಷ್ಟು ನೋವು ಕಂಡಿದ್ದಾರೆ. ಇವರ ಪರಿಶ್ರಮದ ಹೊರತಾಗಿಯೂ ಭಾರತ ತಂಡದಲ್ಲಿ ಸ್ಥಾನ ಪಡೆಯದೇ ಇದ್ದಾಗ ಅವರಲ್ಲೂ ನಿರಾಸೆ ಇತ್ತು. ಈಗ ಐಪಿಎಲ್‌ನಲ್ಲಿ ಬಾರಿಸಿದ ಶತಕ ನಿಜಕ್ಕೂ ಅವರ ಆಸೆಗಳಿಗೆ ಜೀವ ತುಂಬಿದಂತೆ ಆಗಿದೆ. ವಿಶ್ವದ ಖ್ಯಾತ ಬೌಲರ್‌ಗಳನ್ನು ಇವರು ಎದುರಿಸಿದ ರೀತಿ ಅವರ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಇವರು ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಅಮೋಘ ಲಯದಲ್ಲಿ ಕಂಡುಕೊಂಡಿದ್ದಾರೆ ಎಂದು ಕೋಚ್ ಹೇಳಿದ್ದಾರೆ.
ಕಳೆದ ವರ್ಷ ಇಶಾನ್‌ಗೆ ಸುಲಭವಾಗಿರಲಿಲ್ಲ. ದಕ್ಷಿಣ ಆಫ್ರಿಕಾದ ಪ್ರವಾಸದ ವೇಳೆ ಇವರು ವಿರಾಮವನ್ನು ಮಾಡಿದ ನಂತರ ಇವರು ಆಯ್ಕೆದಾರರ ಗಮನ ಬೇರೆ ಕಡೆಗೆ ಕೇಂದ್ರಿ ಕರಿಸುವಂತೆ ಮಾಡಿದ್ರು. ಈಗ ವಿಕೆಟ್ ಕೀಪರ್ ಸ್ಥಾನದ ಮೇಲೆ ಕೆಎಲ್ ರಾಹುಲ್, ರಿಷಭ್ ಪಂತ್, ಸಂಜು ಸ್ಯಾಮ್ಸನ್ ಮತ್ತು ಧ್ರುವ್ ಜುರೆಲ್ ಸಹ ಕಣ್ಣು ನೆಟ್ಟಿದ್ದಾರೆ. ಇವರು ದೇಶೀಯ ಟೂರ್ನಿಗಳಲ್ಲಿ ನೀಡಿದ ಪ್ರದರ್ಶನ ಅವರ ಆತ್ಮವಿಶ್ವಾಸವನ್ನು ಇಮ್ಮಡಿ ಗೊಳಿಸಿದೆ ಎಂದಿದ್ದಾರೆ.

ದೇಶೀಯ ಟೂರ್ನಿಗಳಲ್ಲಿ ಸಿಕ್ಕ ಅವಕಾಶಗಳನ್ನು ಎರಡೂ ಕೈಗಳಿಂದ ಬಳಸಿಕೊಂಡಿರುವ ಇಶಾನ್ ಅಬ್ಬರಿಸಿದ್ದಾರೆ. ದುಲೀಪ್, ಇರಾನಿ, ರಣಜಿ ಟ್ರೋಫಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ರನ್ ಕಲೆ ಹಾಕಿದ್ದಾರೆ. ಐಪಿಎಲ್‌ನಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡು ಅಬ್ಬರಿಸಲು ಪ್ಲ್ಯಾನ್ ಮಾಡಿಕೊಂಡಿದ್ದರು. ಅದರಂತೆ ರಾಜಸ್ಥಾನ ವಿರುದ್ಧ ಆರ್ಭಟಿಸಿದರು. ಇವರು ಈಗಲೂ ತಮ್ಮ ಕ್ಷಮತೆಯನ್ನು ಸಾಬೀತು ಪಡಿಸಲು ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಎಂದು ಕೋಚ್ ಮಜುಂದರ್ ತಿಳಿಸಿದರು.
ಕಳೆದ ಕೆಲವು ವರ್ಷಗಳಲ್ಲಿ ಅವರು ಫಿಟ್ನೆಸ್ ಮೇಲೆ ಕೆಲಸ ಮಾಡಿದ್ದಾರೆ. ಇದಕ್ಕಾಗಿ ಅವರು ಹಗಲಿರುಳು ಅಭ್ಯಾಸ ಮಾಡಿದ್ದಾರೆ. ಇದರ ನೇರ ಪರಿಣಾಮ ಅವರ ಆಟದ ಮೇಲೆ ಆಗಿದೆ ಎಂಬುದನ್ನು ಕೋಚ್ ಉತ್ತಮ್ ಮಜುಂದರ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications