For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ 'ಕಿಂಗ್ ಆಫ್ ಕ್ರಿಕೆಟ್': ಆಸೀಸ್ ಕ್ರಿಕೆಟರ್

By Mahesh

ಸಿಡ್ನಿ, ಜ.2: ಟೀಂ ಇಂಡಿಯಾದ ಟೆಸ್ಟ್ ತಂಡದ ನಾಯಕ, ಪ್ರಮುಖ ಆಟಗಾರ ವಿರಾಟ್ ಕೊಹ್ಲಿಯನ್ನು 'ಕಿಂಗ್ ಆಫ್ ಕ್ರಿಕೆಟ್' ಎಂದು ಆಸ್ಟ್ರೇಲಿಯಾ ಆಟಗಾರರೊಬ್ಬರು ಹಾಡಿ ಹೊಗಳಿದ್ದಾರೆ. ಭಾರತ ತಂಡದ ಆಟಗಾರನೊಬ್ಬನನ್ನು ಆಸೀಸ್ ಆಟಗಾರ ಹೊಗಳುವುದು ದೊಡ್ಡ ವಿಷಯವೇ. ಮಾಜಿ ಆಟಗಾರ, ಹಾಲಿ ಕಾಮೆಂಟೇಟರ್ ಡೀನ್ ಜೋನ್ಸ್ ಅವರು ಕೊಹ್ಲಿಯನ್ನು "ವಿಶ್ವ ಕ್ರಿಕೆಟ್ ನ ಸರದಾರ" ಎಂದು ಬಣ್ಣಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ದದ ಕೊನೆಯ ಟೆಸ್ಟ್ ಪಂದ್ಯಕ್ಕೆ ವಿರಾಟ್ ಕೊಹ್ಲಿ ನಾಯಕರಾಗಿರುವುದು ಶುಭ ಸಂಗತಿ. ಪ್ರಸಕ್ತ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಅಡಿಲೇಡ್ ಟೆಸ್ಟ್ ನಲ್ಲಿ ಟೀಂ ಇಂಡಿಯಾವನ್ನು ಸಮರ್ಥವಾಗಿ ಮುನ್ನಡೆಸಿದ್ದಲ್ಲದೆ ಸತತ ಶತಕ ಸಿಡಿಸಿದ್ದಾರೆ. ಅವರ ಆಟದ ವೈಖರಿ ನೋಡಿದರೆ ಕಿಂಗ್ ಆಫ್ ಕ್ರಿಕೆಟ್ ಎನ್ನದಿರಲು ಸಾಧ್ಯವಿಲ್ಲ ಎಂದು ಡೀನ್ ಜೋನ್ಸ್ ಹೇಳಿದ್ದಾರೆ. [ಕ್ರಿಕೆಟ್ ದಿಗ್ಗಜ ಸಚಿನ್ ದಾಖಲೆ ಮುರಿದ ಕೊಹ್ಲಿ]

'Combative' Virat Kohli is 'new king of world cricket': Dean Jones

ಸಂಡೇ ಮಾರ್ನಿಂಗ್ ಹೆರಾಲ್ಡ್ ನಲ್ಲಿ ಜೋನ್ಸ್ ಬರೆದಿರುವ ಅಂಕಣದಲ್ಲಿ ಭಾರತದ ಕ್ರಿಕೆಟ್ ತಂಡದ ನಾಯಕನಾಗುವುದು ಎಷ್ಟು ಕಷ್ಟದ ಕೆಲಸ ಹಾಗೂ ಎಷ್ಟು ದೊಡ್ಡ ಜವಾಬ್ದಾರಿ ಎಂಬುದನ್ನು ವಿವರಿಸಿದ್ದಾರೆ. ಧೋನಿ ಹಾಗೂ ವಿರಾಟ್ ಕೊಹ್ಲಿ ಇಬ್ಬರ ನಡವಳಿಕೆಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ. [32 ಟೆಸ್ಟ್ ನಾಯಕರಲ್ಲಿ ಧೋನಿಯೇ ಶ್ರೇಷ್ಠ]

ವಿದೇಶದಲ್ಲಿ ಧೋನಿ ಸಾಧಿಸಲು ಸಾಧ್ಯವಾಗದ್ದನ್ನು ಕೊಹ್ಲಿ ಸಾಧಿಸುವ ನಿರೀಕ್ಷೆಯಿದೆ. ಕೊಹ್ಲಿಯಲ್ಲಿ ಆ ಕಿಚ್ಚು ನನಗೆ ಕಾಣಿಸುತ್ತಿದೆ. ಧೋನಿ ಅವರ ನಿರ್ಭಾವುಕತ್ವ ಕೆಲವೆಡೆ ಸರಿಯಾದ ಫಲಿತಾಂಶ ಹೊರ ತರಲು ಸಾಧ್ಯವಾಗಿಲ್ಲ. ಕೊಹ್ಲಿ ಅವರ ಕಿಚ್ಚಿನ ಬಗ್ಗೆ ಹಲವರಲ್ಲಿ ವ್ಯತಿರಿಕ್ತ ಅಭಿಪ್ರಾಯಗಳಿರಬಹುದು. ಅದರೆ, ವಿದೇಶದಲ್ಲಿ ಇಂಥ ನಾಯಕನ ಅಗತ್ಯ ಟೀಂ ಇಂಡಿಯಾಕ್ಕಿದೆ ಎಂದು 53 ವರ್ಷದ ಜೋನ್ಸ್ ಹೇಳಿದ್ದಾರೆ.

ಧೋನಿ ಅವರ ನಾಯಕತ್ವದಿಂದ ಕೊಹ್ಲಿ ಸಾಕಷ್ಟು ಕಲಿತಿರುವ ಕೊಹ್ಲಿ ಅವರು ಮೈಕಲ್ ಕ್ಲಾರ್ಕ್ ನಂತೆ ಆಕ್ರಮಣಕಾರಿ ನಾಯಕನಾಗಬಲ್ಲ. ಧೋನಿ ಹೆಬ್ಬಾವಿನಂತೆ ಬೇಟೆಯಾಡುವ ತಂತ್ರ ಅನುಸರಿಸುತ್ತಿದ್ದರು. ಎದುರಾಳಿಯ ತಪ್ಪು ಮಾಡುವುದನ್ನೇ ಕಾಯ್ದು ಅದರ ಲಾಭವನ್ನು ಪಡೆಯಲು ಯತ್ನಿಸುತ್ತಿದ್ದರು ಎಂದು ಜೋನ್ಸ್ ಬರೆದಿದ್ದಾರೆ.

Story first published: Wednesday, January 3, 2018, 10:12 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+