ICC Annual Conference 2024: ಟಿ20 ವಿಶ್ವಕಪ್ 2024ರ ಆಯೋಜನೆಯನ್ನು ಪರಿಶೀಲಿಸಲು ಸಮಿತಿ ರಚಿಸಿದ ಐಸಿಸಿ
ಜುಲೈ 23 ಮಂಗಳವಾರ, ಕೊಲಂಬೊದಲ್ಲಿ ನಡೆದ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವಾರ್ಷಿಕ ಸಭೆಯ ನಂತರ, ಮಂಡಳಿಯು ತನ್ನ ಮೂವರು ನಿರ್ದೇಶಕರಾದ ರೋಜರ್ ಟೋವ್ಸ್, ಲಾಸನ್ ನೈಡೂ ಮತ್ತು ಇಮ್ರಾನ್ ಖವಾಜಾ ಅವರನ್ನು 2024ರ ಪುರುಷರ ಟಿ20 ವಿಶ್ವಕಪ್ ಆಯೋಜನೆಯನ್ನು ಪರಿಶೀಲಿಸಲು ನೇಮಿಸಿದೆ.
ಈ ಮೆಗಾ ಟಿ20 ಟೂರ್ನಿಯೂ ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಜೂನ್ 1 ರಿಂದ 29 ರವರೆಗೆ ನಡೆಯಿತು. 2024ರ ಪುರುಷರ ಟಿ20 ವಿಶ್ವಕಪ್ ಯುನೈಟೆಡ್ ಸ್ಟೇಟ್ಸ್‌ನಲ್ಲಿ ನಡೆದ ಮೊದಲ ಐಸಿಸಿ ಕ್ರಿಕೆಟ್ ಟೂರ್ನಿ ಆಗಿತ್ತು.

ನ್ಯೂಯಾರ್ಕ್, ಡಲ್ಲಾಸ್ ಮತ್ತು ಫ್ಲೋರಿಡಾದಲ್ಲಿ 16 ಪಂದ್ಯಗಳನ್ನು ಆಡಿಸಲಾಗಿತ್ತು. ಈ ಸಂದರ್ಭದಲ್ಲಿ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಸ್ಟೇಡಿಯಂ ತನ್ನ ಡ್ರಾಪ್-ಇನ್ ಪಿಚ್‌ಗಳು ಮತ್ತು ನಿಧಾನಗತಿಯ ಔಟ್‌ಫೀಲ್ಡ್‌ಗಾಗಿ ಟೀಕೆಗೆ ಗುರಿಯಾಗಿತ್ತು.
ಇದಲ್ಲದೆ, ಹೋಟೆಲ್‌ಗಳು ದೂರದಲ್ಲಿರುವ ಕಾರಣ ಶ್ರೀಲಂಕಾ ಮತ್ತು ಐರ್ಲೆಂಡ್‌ನಂತಹ ತಂಡಗಳು ಲಾಜಿಸ್ಟಿಕ್ಸ್ ಸಮಸ್ಯೆಗಳನ್ನು ಎದುರಿಸಿದವು. ಟೂರ್ನಮೆಂಟ್‌ನ ಯುಎಸ್ ಲೆಗ್ ಮೂಲ ಬಜೆಟ್ ಅನ್ನು ಮೀರಿದೆಯೇ ಮತ್ತು ಅದಕ್ಕೆ ಯಾರು ಹೊಣೆ ಎಂದು ತನಿಖೆ ನಡೆಸಲಾಗುತ್ತಿದೆ.
ರೋಜರ್ ಟೋವ್ಸ್, ಲಾಸನ್ ನೈಡೂ ಮತ್ತು ಇಮ್ರಾನ್ ಖವಾಜಾ ಅವರು ವರ್ಷಾಂತ್ಯದ ವೇಳೆಗೆ ಟೂರ್ನಿ ನಿರ್ವಹಣೆಯ ಬಗ್ಗೆ ತಮ್ಮ ವರದಿಯನ್ನು ಮಂಡಳಿಗೆ ಸಲ್ಲಿಸಲಿದ್ದಾರೆ ಎಂದು ಐಸಿಸಿ ಸೋಮವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಐಸಿಸಿ ಸದಸ್ಯತ್ವ ಮಾನದಂಡಗಳ ಪ್ರಸ್ತುತ ಉಲ್ಲಂಘನೆಗಳಿಗಾಗಿ ಯುಎಸ್ಎ ಮತ್ತು ಚಿಲಿ ಕ್ರಿಕೆಟ್‌ಗೆ ಔಪಚಾರಿಕವಾಗಿ ನೋಟಿಸ್ ನೀಡಲಾಗಿದೆ ಮತ್ತು ಸುಧಾರಣೆಗಳನ್ನು ಮಾಡಲು 12 ತಿಂಗಳುಗಳಿವೆ ಎಂದು ಹೇಳಿದೆ.
2026ರ ಟಿ20 ವಿಶ್ವಕಪ್
ಹೆಚ್ಚುವರಿಯಾಗಿ, ಮುಖ್ಯ ಕಾರ್ಯನಿರ್ವಾಹಕರ ಸಮಿತಿಯು 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿಯಲ್ಲಿ 8 ಪ್ರಾದೇಶಿಕ ಅರ್ಹತಾ ಸ್ಲಾಟ್‌ಗಳ ಹಂಚಿಕೆಯನ್ನು ದೃಢಪಡಿಸಿದೆ. ಇದರಲ್ಲಿ ಆಫ್ರಿಕಾ ಮತ್ತು ಯುರೋಪ್‌ನ 2 ತಂಡಗಳು, ಅಮೆರಿಕದ 1 ತಂಡ ಮತ್ತು ಏಷ್ಯಾ ಮತ್ತು ಇಎಪಿ ಜಂಟಿ ಪ್ರಾದೇಶಿಕ ಫೈನಲ್‌ನಿಂದ 3 ತಂಡಗಳು ಅರ್ಹತೆ ಪಡೆಯಲಿವೆ. ಈ ಟೂರ್ನಿಯೂ ಭಾರತ ಮತ್ತು ಶ್ರೀಲಂಕಾದಲ್ಲಿ ಜಂಟಿಯಾಗಿ ನಡೆಯಲಿದೆ.
ಮಹಿಳಾ ಟಿ20 ವಿಶ್ವಕಪ್‌ನಲ್ಲಿ 16 ತಂಡಗಳು
ಐಸಿಸಿ ಮಂಡಳಿಯು 2030ರ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ 16 ತಂಡಗಳನ್ನು ಅನುಮೋದಿಸಿದೆ. 2026ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಟೂರ್ನಿಯಲ್ಲಿ 12 ತಂಡಗಳು ಭಾಗವಹಿಸಲಿದ್ದು, 2030ರಲ್ಲಿ 16 ತಂಡಗಳಿಗೆ ಏರಿಕೆಯಾಗಲಿದೆ. ಇದಲ್ಲದೆ, 2026 ರ ವಿಶ್ವಕಪ್‌ಗೆ ಅರ್ಹತಾ ಕಟ್-ಆಫ್ ದಿನಾಂಕವು ಅಕ್ಟೋಬರ್ 31, 2024 ಆಗಿರುತ್ತದೆ ಎಂದು ಮಂಡಳಿಯು ದೃಢಪಡಿಸಿದೆ.
ಎಲ್ಲಾ 108 ಐಸಿಸಿ ಸದಸ್ಯರು ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಿದ್ದರು. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಗೊಳ್ಳುವ ಅವಕಾಶವನ್ನು ಬಳಸಿಕೊಳ್ಳುವುದು ನಾಲ್ಕು ದಿನಗಳ ಸಮ್ಮೇಳನದ ಚರ್ಚೆಯ ವಿಷಯವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications