For Quick Alerts
ALLOW NOTIFICATIONS  
For Daily Alerts
 

Team India: ಭಾರತ ಟಿ20 ತಂಡಕ್ಕೆ ಡೆಡ್ಲಿ ಆಲ್‌ರೌಂಡರ್ ಎಂಟ್ರಿ; ಹಾರ್ದಿಕ್ ಪಾಂಡ್ಯ ಸ್ಥಾನಕ್ಕೆ ಪೈಪೋಟಿ!

ನ್ಯೂಜಿಲೆಂಡ್ ವಿರುದ್ಧ 3-0 ಸೋಲಿನ ನಂತರ ರೋಹಿತ್ ಶರ್ಮಾ ನಾಯಕತ್ವದ ಭಾರತ ಟೆಸ್ಟ್ ತಂಡವು ತೀವ್ರಮುಖ ಭಂಗ ಅನುಭವಿಸಿದೆ. ಮತ್ತೊಂದೆಡೆ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ಟಿ20 ತಂಡ ಸತತವಾಗಿ ಸರಣಿಗಳನ್ನು ಗೆಲ್ಲುವ ಮೂಲಕ ವಿಜಯರಥದ ಮೇಲೆ ಸವಾರಿ ಮಾಡುತ್ತಿದೆ.

ಇದೀಗ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಅಲ್ಲಿ ಹರಿಣಗಳ ಪಡೆ ವಿರುದ್ಧ ಚಾಂಪಿಯನ್ ಭಾತ ನಾಲ್ಕು ರಪಂದ್ಯಗಳ ಟಿ20 ಸರಣಿ ಆಡಲಿದೆ. ಈ ಸರಣಿಗಾಗಿ ಭಾರತ ತಂಡದಲ್ಲಿ ಆನೇಕ ಯುವ ಆಟಗಾರರನ್ನು ಸೇರಿಸಲಾಗಿದೆ. ಈ ಆಟಗಾರರ ಪೈಕಿ ಡೆಡ್ಲಿ ಯುವ ಆಲ್‌ರೌಂಡರ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿರುವುದು ಹಾರ್ದಿಕ್ ಪಾಂಡ್ಯ ಅವರಿಗೆ ಟೆನ್ಶನ್ ತಂದಿದೆ.

Competition for Hardik Pandya place due to the arrival of a young all-rounder in the India T20 team

ಟಿ20 ತಂಡಕ್ಕೆ ಡೆಡ್ಲಿ ಆಲ್‌ರೌಂಡರ್ ಎಂಟ್ರಿ

ಇತ್ತೇಚೆಗೆ ಮುಕ್ತಾಯವಾದ ಉದಯೋನ್ಮುಖ ಏಷ್ಯಾಕಪ್‌ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನದ ನಂತರ, ಈ ಆಟಗಾರ ದಕ್ಷಿಣ ಆಫ್ರಿಕಾ ಸರಣಿಗಾಗಿ ಟೀಮ್ ಇಂಡಿಯಾದ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಭಾರತ ಎ ತಂಡ ಉದಯೋನ್ಮುಖ ಏಷ್ಯಾಕಪ್‌ನಲ್ಲಿ ಪ್ರಶಸ್ತಿ ಗೆಲ್ಲಲು ಹರಸಾಹಸ ಪಟ್ಟಿತ್ತು. ಲೀಗ್ ಹಂತದಲ್ಲಿ ಆಡಿದ ಎಲ್ಲ ಪಂದ್ಯಗಳನ್ನು ಗೆದ್ದು ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸಿತ್ತು. ಈ ವೇಳೆ ಯುವ ಬ್ಯಾಟರ್ ರಮಣದೀಪ್ ಸಿಂಗ್ ಆಲ್‌ರೌಂಡರ್ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದರು.

ಅಫ್ಘಾನಿಸ್ತಾನ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ನಾಯಕ ತಿಲಕ್ ವರ್ಮಾ ಮತ್ತು ಅಭಿಷೇಕ್ ಶರ್ಮಾ ಅವರಂತಹ ಬ್ಯಾಟರ್ ವಿಕೆಟ್ ಕಳೆದುಕೊಂಡಾಗ, ರಮಣದೀಪ್ ಅಫ್ಘಾನ್ ತಂಡಕ್ಕೆ ಬೆವರಿಳಿಸಿದ್ದರು. ಕೊನೆವರಗೆಗೂ ಭಾರತಕ್ಕೆ ಗೆಲುವು ತಂದುಕೊಂಡಲು ಹೋರಾಟ ನಡೆಸಿದ್ದರು. ಆದರೆ ಅಂತಿಮವಾಗಿ ಅಫ್ಘಾನ್ ವಿರುದ್ಧ ಭಾರತ ಮುಗ್ಗರಿಸಿತ್ತು. ಸೆಮಿಫೈನಲ್‌ನಲ್ಲಿ ರಮಣದೀಪ್ ಬೌಂಡರಿ ಹಾಗೂ ಸಿಕ್ಸರ್ ಬಾರಿಸಿದರು. 64 ರನ್‌ಗಳ ವೇಗದ ಇನ್ನಿಂಗ್ಸ್‌ ಆಡಿದ್ದರು. ಇದಾದ ನಂತರ ಅವರು ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದಾರೆ.

ಈಗ ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಸ್ಥಾನಕ್ಕೆ ಪೈಪೋಟಿ ಹೆಚ್ಚಾಗಿದೆ. ಆದರೆ ಹಾರ್ದಿಕ್ ಪಾಂಡ್ಯ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿರೆ, ಒಂದು ವೇಳೆ ಅವರು ಗಾಯಗೊಂಡು ಹೊರಗುಳಿದರೆ, ಮತ್ತೆ ಟೀಮ್ ಇಂಡಿಯಾ ಸೇರುವುದು ಕಷ್ಟಕರವಾಗಲಿದೆ. ಹಾರ್ದಿಕ್ ಪಾಂಡ್ಯ ನಂತರ ವೇಗದ ಬೌಲಿಂಗ್ ಆಲ್‌ರೌಂಡರ್‌ಗೆ ರಮಣದೀಪ್ ಸಿಂಗ್ ಉತ್ತಮ ಆಯ್ಕೆ ಎನ್ನಲಾಗುತ್ತಿದೆ. ಅವರು ಉದಯೋನ್ಮುಖ ಏಷ್ಯಾಕಪ್‌ ಟೂರ್ನಿಯಲ್ಲಿ ಆಡಿದ 4 ಪಂದ್ಯಗಳಲ್ಲಿ 3 ವಿಕೆಟ್ ಪಡೆದರೆ, ಬ್ಯಾಟಿಂಗ್‌ನಲ್ಲಿ ಖದರ್ ತೋರಿದ ಅವರು ಒಂದು ಅರ್ಧಶತಕ ಒಳಗೊಂಡಂತೆ 94 ರನ್ ಗಳಿಸಿದ್ದರು.

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡ

ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ತಿಲಕ್ ವರ್ಮಾ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ರಮಣದೀಪ್ ಸಿಂಗ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ವಿಜಯಕುಮಾರ್ ವಿಶಾಕ್, ಅವೇಶ್ ಖಾನ್ ಯಶ್ ದಯಾಳ್.

Story first published: Wednesday, November 6, 2024, 7:05 [IST]
Other articles published on Nov 6, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+