ಕನ್ನಡದ ನಟನಿಗಿಲ್ಲದ ಸಂತಾಪ ಬಾಲಿವುಡ್ ನಟನಿಗೆ: ಕೆಎಲ್ ರಾಹುಲ್ ನಡೆಗೆ ಅಭಿಮಾನಿಗಳು ಕೆಂಡ!

ಎಂಎಸ್ ಧೋನಿ ಜೀವನಾಧಾರಿತ ಚಿತ್ರದಲ್ಲಿ ಮಿಂಚಿ ಬಾಲಿವುಡ್‌ನಲ್ಲಿ ನೆಲೆಯೂರಿದ್ದ ಸುಶಾಂತ್ ಸಿಂಗ್ ರಜಪೂತ್ ಇದ್ದಕ್ಕಿದ್ದಂತೆ ಆತ್ಮಹತ್ಯೆಗೆ ಶರಣಾಗಿದ್ದು ಸಿನಿ ಪ್ರೇಮಿಗಳನ್ನು ದಂಗುಬಡಿಸಿದೆ. ಕೇವಲ ಬಾಲಿವುಡ್ ನಟರು, ಅಭಿಮಾನಿಗಳು ಮಾತ್ರವಲ್ಲ ಕ್ರಿಕೆಟ್ ತಾರೆಗಳು ಕೂಡ ಸುಶಾಂತ್ ಸಿಂಗ್ ಸಾವಿಗೆ ಆಘಾತ ವ್ಯಕ್ತಪಡಿಸಿ ಸಂತಾಪ ಸೂಚಿಸಿದ್ದಾರೆ.
ಹೀಗೆ ಕನ್ನಡಿಗ ಕೆಎಲ್ ರಾಹುಲ್ ಕೂಡ ಸುಶಾಂತ್ ಸಿಂಗ್ ಸಾವಿಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದರು. ಬಾಲಿವುಡ್ ಯುವ ನಟನ ಅಗಲಿಕೆಗೆ ಆಘಾತವನ್ನು ವ್ಯಕ್ತಪಡಿಸಿದ್ದರು. ಆದರೆ ಕೆಎಲ್ ರಾಹುಲ್ ಅವರ ನಡೆ ಕನ್ನಡ ಸಿನಿಮಾ ಪ್ರೇಮಿಗಳಿಗೆ ಮತ್ತು ಕರ್ನಾಟಕದ ರಾಹುಲ್ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಮಾತ್ರವಲ್ಲ ರಾಹುಲ್ ನಡೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಾರದ ಹಿಂದೆ ಕನ್ನಡ ಸಿನಿ ಲೋಕಕ್ಕೆ ಆಘಾತ
ಸುಶಾಂತ್ ಸಿಂಗ್ ಸಾವಿಗೆ ಸರಿಯಾಗಿ ಒಂದೇ ವಾರ ಹಿಂದೆ ಕನ್ನಡದ ಯುವ ನಾಯಕ ನಟ ಚಿರಂಜೀವಿ ಸರ್ಜಾ ಅಕಾಲಿಕ ಸಾವನ್ನಪ್ಪಿದ್ದರು. ಹೃದಯಾಘಾತದಿಂದ ಯುವ ನಟನ ಸಾವಿಗೆ ಇಡೀ ಕರ್ನಾಟಕ ಮರುಗಿತ್ತು. ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿಗೆ ಮರುಗಿದ ಕರ್ನಾಟಕದವರೇ ಆದ ರಾಹುಲ್ ಅಂದು ಕನ್ನಡಿಗ ಅಕಾಲಿಕ ಸಾವಿಗೆ ಸ್ಪಂದಿಸಿರಲಿಲ್ಲ. ಇದು ಕನ್ನಡ ಸಿನಿ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ನಾನು ನಿಮ್ಮ ಅಭಿಮಾನಿ ರಾಹುಲ್, ಆದರೆ ಬುಡ ಮರಿಬೇಡಿ
ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂತಾಪ ಸೂಚಿಸಿದ ಟ್ವೀಟ್‌ಗೆ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಪ್ರತಿಕ್ರಿಯಿಸಿ ರಾಹುಲ್ ನಡೆಗೆ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲಿ ಒಬ್ಬ ಅಭಿಮಾನಿ "ಕನ್ನಡದ ಪ್ರತಿಭಾವಂತ ನಟ ಚಿರಂಜೀವಿ ಸಾವಿಗೆ ನಿಮ್ಮಿಂದ ಒಂದು ಸಂತಾಪವೂ ಬಂದಿಲ್ಲ. ನಾನು ನಿಮ್ಮ ದೊಡ್ಡ ಅಭಿಮಾನಿ ರಾಹುಲ್, ಆದರೆ ಹಿಂದಿನ ದಿನಗಳನ್ನು ಮತ್ತು ನಿಮ್ಮ ಬೇರುಗಳನ್ನು ಮರೆಯಬೇಡಿ" ಎಂದು ಬೇಸರದಿಂದಲೇ ಟ್ವೀಟ್ ಮಾಡಿದ್ದಾರೆ.

ಕುಂಬ್ಳೆ ನೋಡಿ ಕಲಿಯಿರಿ
ಇನ್ನೋರ್ವ ಅಭಿಮಾನಿ ಕೂಡ ಹೀಗೆಯೇ ಪ್ರತಿಕ್ರಿಯಿಸಿದ್ದಾರೆ " ಅನಿಲ್ ಕುಂಬ್ಳೆ ಸರ್ ಅಷ್ಟು ದೊಡ್ಡ ಲೆಜೆಂಡ್ ಅಲ್ಲ, ಆದ್ರೂ ಹಿಂಗೆ. ಹೋಗಿ ಅನಿಲ್ ಸರ್ ಟ್ವೀಟ್ ನೋಡಿ ಬ್ರೋ. ಚಿರು ಸತ್ತಾಗ ಟ್ವೀಟ್ ಮಾಡಿದ್ದಾರೆ. ಕನ್ನಡ ಅಂದ್ರೆ ಅವರು ಎಷ್ಟು ಗೌರವಿಸುತ್ತಾರೆ ಎಂದು ಅವರನ್ನು ನೋಡಿ" ಎಂದು ಬರೆದುಕೊಂಡಿದ್ದಾರೆ.

ಬೇರಿನಿಂದ ಬೇರ್ಪಟ್ಟಿರುವುದಕ್ಕೆ ಸಾಕ್ಷಿ
ಚಿರಂಜೀವಿ ಸರ್ಜಾ ಸಾವಿಗೆ ಸ್ಪಂದಿಸದ ರಾಹುಲ್‌ಗೆ ಅಭಿಮಾನಿಗಳು ತರಾಟೆಗೆ ತೆಗೆದುಕೊಳ್ಳುತ್ತಿರುವುದನ್ನು ರಾಮಚಂದ್ರ ಎಂಬವರು ಪ್ರತಿಕ್ರಿಯಿಸಿದ್ದಾರೆ. ಕೆಎಲ್ ರಾಹುಲ್ ಅವರ ಈ ವರ್ತನೆ ತಮ್ಮ ಬೇರುಗಳಿಂದ ಅವರು ಬೇರ್ಪಟ್ಟಿದ್ದಾರೆ ಎಂಬುದನ್ನೇ ಉತ್ತಮ ಸಾಕ್ಷಿ ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ರಾಹುಲ್ ವರ್ತನೆಯನ್ನು ಖಂಡಿಸಿದ್ದಾರೆ.

ಚಿರಂಜೀವಿ ಸರ್ಜಾ ಸಾವಿಗೆ ಕುಂಬ್ಳೆ ಸಂತಾಪ
ಹಿಂದಿನ ಭಾನುವಾರ ಚಿರಂಜೀವಿ ಸರ್ಜಾ ತಮ್ಮ ಮನೆಯಲ್ಲಿ ಕುಸಿದು ಬಿದ್ದು ಬಳಿಕ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ವಿಧಿವಶರಾಗಿದ್ದರು. ಈ ಘಟನೆಗೆ ಕರ್ನಾಟಕದ ಎಲ್ಲಾ ಕ್ಷೇತ್ರಗಳ ಜನರೂ ತಮ್ಮ ದಿಗ್ಭ್ರಮೆಯನ್ನು ವ್ಯಕ್ತಪಡಿಸಿದ್ದರು. ದಿಗ್ಗಜ ಕ್ರಿಕೆಟಿಗ ಅನಿಲ್ ಕುಂಬ್ಳೆ ಕೂಡ ಚಿರಂಜೀವಿ ಸರ್ಜಾ ಅವರ ಅಕಾಲಿಕ ಮರಣಕ್ಕೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications