Virat kohli: ಟಿ20 ವಿಶ್ವಕಪ್ ತಂಡಕ್ಕೆ ನನ್ನನ್ನು ಪರಿಗಣಿಸಿ: ಆಯ್ಕೆದಾರರಿಗೆ ಸಂದೇಶ ರವಾನಿಸಿದ ಕೊಹ್ಲಿ
ಕೆಲವು ದಿನಗಳಿಂದ ಭಾರತೀಯ ಕ್ರಿಕೆಟ್ ರಂಗದಲ್ಲಿ ಎದ್ದಿರುವ ಪ್ರಶ್ನೆ ಒಂದೇ, ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕೊಹ್ಲಿ ಅವರನ್ನು ಟಿ20 ವಿಶ್ವಕಪ್‌ಗೆ ಆಯ್ಕೆ ಮಾಡಬೇಕಾ ಬೇಡವಾ ಎಂದು. ಈ ಬಗ್ಗೆ ಹಲವು ಪಂಡಿತರು ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ. ಇದಕ್ಕೆಲ್ಲಾ ಉತ್ತರವೆಂಬಂತೆ ವಿರಾಟ್ ಸಹ ಸಿಕ್ಕ ಅವಕಾಶವನ್ನು ಬಳಸಿಕೊಂಡು ತಾನು ಯಾವುದೇ ಫಾರ್ಮೆಟ್ ಸಹ ಆಡಲು ಸಿದ್ಧ ಎಂದು ಸಾರೀ ಹೇಳಿದ್ದಾರೆ.
ಬೆಂಗಳೂರಿನ ಎಂ.ಚಿನ್ನಸ್ವಾಮಿ ಅಂಗಳದಲ್ಲಿ ವಿರಾಟ್ ಕೊಹ್ಲಿ ಮಾಸ್ಟರ್ ಕ್ಲಾಸ್ ಆಟಕ್ಕೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ಎದುರಾಳಿ ತಂತ್ರವನ್ನು ಮಟ್ಟ ಹಾಕಿ, ಪ್ರತಿ ತಂತ್ರ ಹೆಣೆದು, ತಮ್ಮ ಆಟದ ಶೈಲಿಯನ್ನೇ ಕೊಂಚ ಬದಲಿಸಿಕೊಂಡು ಆಡಿದ ವಿರಾಟ್ ತಾನು ಯಾವುದೇ ಫಾರ್ಮೆಟ್‌ಗೆ ಸೂಟ್ ಆಗುವ ಪ್ಲೇಯರ್ ಎಂದು ತಿಳಿಸಿದ್ದಾರೆ. ಈ ಮೂಲಕ ಹಲವು ದಿನಗಳಿಂದ ಎದ್ದಿದ್ದ ಪ್ರಶ್ನೆಗೆ ಟೀಸರ್ ರೂಪದಲ್ಲಿ ಉತ್ತರ ನೀಡಿದ್ದಾರೆ.

ಆರಂಭದಲ್ಲೇ ಆರ್ಭಟ
ವಿರಾಟ್ ಕೊಹ್ಲಿ ಕ್ರೀಸ್‌ಗೆ ಬಂದಿದ್ದಾರೆ ಎಂದರೆ, ಅಲ್ಲಿ ತಡೆದು ಆಡುವ ರೀತಿ ಎದ್ದು ಕಾಣುತ್ತದೆ. ಆದರೆ ಪಂಜಾಬ್ ಕಿಂಗ್ಸ್ ವಿರುದ್ಧ ವಿರಾಟ್ ಕೊಹ್ಲಿ ಆಡಿದ ಧಾಟಿಯನ್ನು ಕಂಡರೆ, ಡ್ರೆಸ್ಸಿಂಗ್ ರೂಮ್‌ನಿಂದಲೇ ಸೆಟ್ಲ್ ಆಗಿ ಬಂದಂತೆ ಕಾಣುತ್ತಿತ್ತು. ತಮ್ಮ ಬ್ಯಾಟಿಂಗ್ ಶೈಲಿಗೆ ಭಿನ್ನವಾಗಿ ಬ್ಯಾಟ್ ಮಾಡಿದ ವಿರಾಟ್ ಅಭಿಮಾನಿಗಳಿಗೆ, ವೀರೇಂದ್ರ ಸೆಹ್ವಾಗ್ ನೆನಪು ತರಿಸಿದ್ದಂತು ಸುಳ್ಳಲ್ಲ. ಚಿನ್ನಸ್ವಾಮಿ ಅಂಗಳವನ್ನು ತಮ್ಮ ಎರಡನೇ ತವರು ಎಂದು ಕರೆಯುವ ವಿರಾಟ್, ತಮ್ಮ ಟೀಕೆಗಳಿಗೆ ಉತ್ತರ ನೀಡುವ ವೇದಿಕೆಯನ್ನಾಗಿ ಮಾರ್ಪಾಡು ಮಾಡಿಕೊಂಡರು.
ಸಖತ್ ಸ್ಟ್ರೈಕ್ ರೇಟ್
ವಿರಾಟ್ ಕೊಹ್ಲಿ ಸ್ಟ್ರೈಕ್ ರೇಟ್ ಟಿ20 ಫಾರ್ಮೆಟ್‌ಗೆ ಹೊಂದುವುದಿಲ್ಲ ಎಂದೇ ಟೀಕೆಗಳು ಕೇಳಿ ಬಂದಿದ್ದವು. ಆದರೆ ಪಂಜಾಬ್ ವಿರುದ್ಧ ವಿರಾಟ್ ಆಟದ ಮೋಡಿ ಟೀಕಾಕಾರರು ಹೇಳು ಹೇಸರಿಲ್ಲದಂತೆ ಓಡಿದರು. ಮೊಬೈಲ್ ಅಪ್‌ಡೇಟ್ ಆದಾಗ ಹೇಗೆ ವೇಗವಾಗಿ ಕೆಲಸ ಮಾಡುತ್ತದೋ ಹಾಗೆ ವಿರಾಟ್ ತಮ್ಮ ಆಟದಲ್ಲಿ ಚುರುಕು ತನ ಪ್ರದರ್ಶಿಸಿದರು. ಆರಂಭದಲ್ಲೇ ಜಬರ್ದಸ್ತ್ ಫುಟ್ ವರ್ಕ್ ಪ್ರದರ್ಶಿಸಿದ್ದ ವಿರಾಟ್ 157.14ರ ಸರಾಸರಿಯಲ್ಲಿ ರನ್ ಕಲೆ ಹಾಕಿದರು. ವಿರಾಟ್ ಒಟ್ಟು 77 ರನ್ ಸಿಡಿಸಿದ್ದಾರೆ. ಇದರಲ್ಲಿ ಬೌಂಡರಿ ಹಾಗೂ ಸಿಕ್ಸರ್ ಸಹಾಯದಿಂದಲೇ 56 ರನ್ ಬಂದಿವೆ. ಉಳಿದ 21 ರನ್‌ಗಳನ್ನು ವಿರಾಟ್ ಸ್ಟ್ರೈಕ್ ರೋಟೆಟ್ ಮಾಡಿ ತೆಗೆದುಕೊಂಡಿದ್ದಾರೆ.
ನನ್ನನ್ನು ಕಡೆಗಣನೆ ಮಾಡಬೇಡಿ
ವಿರಾಟ್ ಕೊಹ್ಲಿ ಸದ್ಯ ಭರ್ಜರಿ ಫಾರ್ಮ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬ್ಯಾಟಿಂಗ್ ಸ್ವರ್ಗ ಎಂದೇ ಕರಿಸಿಕೊಳ್ಳುವ ಎಂ.ಚಿನ್ನಸ್ವಾಮಿ ಅಂಗಳದಲ್ಲಿ ಅವರು ಬಿಗ್ ಇನ್ನಿಂಗ್ಸ್ ಆಡುವ ಕ್ಷಮತೆ ಇನ್ನು ನನ್ನಲಿ ಇದೆ ಎಂದು ಸಾರಿದರು. ವಿರಾಟ್ ಕೊಹ್ಲಿ ಅವರನ್ನು ಟಿ20 ವಿಶ್ವಕಪ್‌ನಲ್ಲಿ ಸೇರಿಸಿಕೊಳ್ಳಬೇಕಾ ಎಂಬ ಚಿಂತೆಯಲ್ಲಿ ತೊಡಗಿದ್ದ ಬಿಸಿಸಿಐ ಆಯ್ಕೆ ಸಮಿತಿಗೆ ವಿರಾಟ್ ಪರೋಕ್ಷ ಸಂದೇಶ ರವಾನಿಸಿದ್ದಾರೆ.

ಯುವಕರು ನಾಚುವಂತಹ ಬ್ಯಾಟಿಂಗ್
ವಿರಾಟ್ ಕೊಹ್ಲಿಗೆ ಈಗ ಭರ್ತಿ 35 ವರ್ಷಗಳು ತುಂಬಿವೆ. ಈ ವಯಸ್ಸಿನಲ್ಲೂ ಅವರ ಫಿಟ್ನೆಸ್ ಬೇರೆ ಆಟಗಾರರಿಗೆ ಮಾದರಿ. ಕೊಹ್ಲಿ ಎದುರು ಯಂಗ್ ಪ್ಲೇಯರ್ಸ್ ಸಹ ಡಲ್ ಎಂದು ಅನಿಸುತ್ತಾರೆ. ಯುವಕರ ಆಟ ಎಂದೇ ಪರಿಗಣಿಸಲ್ಪಟ್ಟಿರುವ ಟಿ20 ಕ್ರಿಕೆಟ್‌ನಲ್ಲಿ ನನಗೂ ಆಡವು ಅವಕಾಶವನ್ನು ನೀಡಿ ಎಂದು ಕೊಹ್ಲಿ ಸಾರಿ ಹೇಳಿದ್ದಾರೆ.
ಹೊಸ ಅಧ್ಯಾಯ ಎಂದರೆ ಇದೆನಾ?
ವಿರಾಟ್ ಕೊಹ್ಲಿ ಆರ್‌ಸಿಬಿ ಅನ್‌ಬಾಕ್ಸ್ ಇವೆಂಟ್‌ನಲ್ಲಿ ಆರ್‌ಸಿಬಿ ಹೊಸ ಅಧ್ಯಾಯ ಎಂದು ಹೇಳಿದ್ದರು. ಈ ಹೇಳಿಕೆಯನ್ನು ನಾನಾ ರೂಪಗಳಲ್ಲಿ ಅರ್ಥೈಸಲಾಗಿತ್ತು. ಪಂಜಾಬ್ ವಿರುದ್ಧ ವಿರಾಟ್ ಆಡಿದ ರೀತಿಯನ್ನು ಕಂಡರೆ ಹೊಸ ಅಧ್ಯಾಯ ಇದೇನಾ ಎಂಬಂತಿದೆ. ವಿರಾಟ್ ಕೊಹ್ಲಿ ಅಪ್‌ಡೇಟ್ ಆಗಿದ್ದಾರೆ ಎನ್ನುವದರಲ್ಲಿ ಎರಡು ಮಾತಿಲ್ಲ. ಅವರು ಕವರ್ ಡ್ರೈವ್ ಬಾರಿಸುವುದನ್ನು ಎಷ್ಟು ಇಷ್ಟ ಪಡುತ್ತಾರೋ, ಅಷ್ಟೇ ಬೇರೆ ಕ್ರಿಕಿಟಿಂಗ್ ಶಾಟ್ ಬಳಕೆಗೆ ಇಷ್ಟ ಪಡುತ್ತಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications