Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Yashasvi Jaiswal: ಯಶಸ್ವಿ ಔಟ್‌: ವಿವಾದ ಹುಟ್ಟಿಸಿರುವ ಅಂಪೈರ್ ನಿರ್ಣಯ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಸದ್ಯ ಸಂಕಷ್ಟದಲ್ಲಿದೆ. ಈ ವೇಳೆ ಭಾರತ ಗೆಲುವಿಗಾಗಿ ಹೋರಾಟವನ್ನು ನಡೆಸುತ್ತಿಲ್ಲ. ಡ್ರಾಗಾಗಿ ಟೀಮ್ ಇಂಡಿಯಾ ಈ ಪಂದ್ಯವನ್ನು ಆಡುತ್ತಿದ್ದಂತೆ ಕಾಣುತ್ತಿದೆ. ಈ ವೇಳೆ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್‌ಗಳ ಆಟ ಸಿಂಗಲ್‌ ಡಿಜಿಟ್‌ನಲ್ಲಿ ಮುಗಿಯಿತು. ಆದರೆ ಟೀಮ್ ಇಂಡಿಯಾದ ಯಶಸ್ವಿ ಜೈಸ್ವಾಲ್‌ ಮನಮೋಹಕ ಪ್ರದರ್ಶನ ನೀಡಿ ಗಮನ ಸೆಳೆದರು. ಆದರೆ ಮೂರನೇ ಅಂಪೈರ್‌ ನೀಡಿದ ಆ ಒಂದು ತೀರ್ಪು ಯಶಸ್ವಿ ಜೈಸ್ವಾಲ್‌ ಮುಖದಲ್ಲಿದ್ದ ಮಂದಹಾಸವನ್ನು ಅಳಿಸಿತು.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಾಲ್ಕನೇ ಟೆಸ್ಟ್‌ನ ಎರಡನೇ ಇನಿಂಗ್ಸ್‌ ರೋಚಕತೆ ಹುಟ್ಟಿಸಿತ್ತು. ಇದೇ ವೇಳೆ ರೋಹಿತ್ ಶರ್ಮಾ ಪಡೆ ಬೃಹತ್ ಮೊತ್ತದ ಬೆನ್ನುಹತ್ತಿತು. ಟೀಮ್ ಇಂಡಿಯಾದ ಯಾವ ಬ್ಯಾಟರ್‌ ಸಹ ನೆಲಕಚ್ಚಿ ನಿಂತು ಬ್ಯಾಟ್‌ ಮಾಡುವ ಸೂಚನೆ ನೀಡಲಿಲ್ಲ. ಆದರೆ ನಾಲ್ಕನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಕ್ಲಾಸಿಕ್ ಬ್ಯಾಟಿಂಗ್‌ ನಡೆಸಿದ್ದ ಯಶಸ್ವಿ ಜೈಸ್ವಾಲ್, ಎರಡನೇ ಇನಿಂಗ್ಸ್‌ನಲ್ಲೂ ಅಮೋಘ ಬ್ಯಾಟಿಂಗ್‌ ನಡೆಸಿದ್ದರು. ಆದರೆ ಇನಿಂಗ್ಸ್‌ನ 70ನೇ ಓವರ್‌ನ ಐದನೇ ಎಸೆತದಲ್ಲಿ ಲೆಗ್‌ ಸೈಡ್‌ನಲ್ಲಿ ಹೋಗುತ್ತಿದ್ದ ಚೆಂಡನ್ನು ಕಂಡು, ಬಿಗ್ ಹಿಟ್ ಬಾರಿಸುವ ಸೂಚನೆ ನೀಡಿದರು. ಆದರೆ ಚೆಂಡು ವಿಕೆಟ್‌ ಕೀಪರ್‌ ಕೈ ಸೇರಿತು.

Controversial DRS Decision Dismisses Jaiswal India Struggles in 4th Test

ಆಗಿದ್ದೇನು?

ಇದೇ ವೇಳೆ ಬೌಲರ್‌ ಪ್ಯಾಟ್‌ ಕಮಿನ್ಸ್‌ ಔಟ್‌ ಗಾಗಿ ಮನವಿ ಸಲ್ಲಿಸಿದರು. ಆದರೆ ಆನ್‌ ಫೀಲ್ಡ್‌ ಅಂಪೈರ್‌ ನಾಟೌಟ್ ನೀಡಿದರು. ಆದರೆ ಪ್ಯಾಟ್‌ ಕಮಿನ್ಸ್‌ ಹೆಚ್ಚು ಯೋಚನೆ ಮಾಡದೆ, ಡಿಆರ್‌ಎಸ್‌ ಪಡೆದರು. ಇದೇ ವೇಳೆ ಥರ್ಡ್‌ ಅಂಪೈರ್‌ ತೀರ್ಪನ್ನು ನೀಡುವ ಹೊಣೆಯನ್ನು ಹೊತ್ತುಕೊಂಡರು. ದೃಶ್ಯವನ್ನು ಪದೇ ಪದೇ ನೋಡಿದಾಗ ಥರ್ಡ್‌ ಅಂಪೈರ್‌ಗೆ ಇದು ಬ್ಯಾಟ್‌ ಅಥವಾ ಗ್ಲೌಸ್‌ಗೆ ತಾಗಿದಂತೆ ಕಂಡು ಬಂದಿತು. ಇದರಿಂದ ಈ ಎಸೆತದ ಫ್ರೇಮ್‌ನ್ನು ಸತತವಾಗಿ ಬದಲಾಯಿಸುತ್ತಾ ನೋಡುತ್ತಲೇ ಸಾಗಿದರು. ಸ್ಲೋ ಮೋಷನ್‌ನಲ್ಲಿ ವಿಡಿಯೋ ನೋಡಿದಾಗ ಈ ದೃಶ್ಯ ಬ್ಯಾಟ್‌ ಅಥವಾ ಗ್ಲೌಸ್‌ಗೆ ಬಡೆದಂತೆ ಕಂಡು ಬಂದಿತು.

ಈ ದೃಶ್ಯವನ್ನು ಕಂಡು ಥರ್ಡ್‌ ಅಂಪೈರ್‌ ಸ್ನಿಕೋ ಮೊರೆ ಹೋದರು. ಈ ವೇಳೆ ಸ್ನಿಕೋದಲ್ಲಿ ಬ್ಯಾಟ್ ಹಾಗೂ ಗ್ಲೌಸ್‌ಗೆ ಚೆಂಡು ಬಡಿಯದೇ ಇರುವುದು ಸ್ಪಷ್ಟವಾಗಿ ಕಾಣಿಸಿಕೊಂಡಿತು. ಆದರೂ ಥರ್ಡ್‌ ಅಂಪೈರ್‌ ಸ್ನಿಕೋದ ನಿರ್ಣವಯನ್ನು ಬಿಟ್ಟು, ಸ್ಲೋ ಮೋಷನ್‌ನಲ್ಲಿ ವಿಡಿಯೋ ನೋಡಿದರು. ಆಗ ಗ್ಲೌಸ್‌ಗೆ ಚೆಂಡು ಬಡಿದು ವಿಕೆಟ್‌ ಕೀಪರ್‌ ಕೈಗೆ ಸೇರಿದಂತೆ ಕಂಡು ಬಂದಿತು. ಆಗ ಥರ್ಡ್‌ ಅಂಪೈರ್‌ ಯಾವುದೇ ಹಿಂಜರಿಕೆ ಇಲ್ಲದೆ, ಆನ್‌ ಫೀಲ್ಡ್ ಅಂಪೈರ್‌ಗೆ ನಿಮ್ಮ ನಿರ್ಣಯವನ್ನು ಬದಲಿಸುವಂತೆ ಸೂಚಿಸಿದರು. ಟೆಕ್ನಾಲಜಿಯನ್ನು ಓವರ್‌ ಟೇಕ್‌ ಮಾಡಿದಂತೆ ಅಂಪೈರ್‌ ನಿರ್ಣಯ ಕಂಡು ಬಂದಿತು. ಅಲ್ಲದೆ ಈ ವಿಕೆಟ್‌ ಬಳಿಕ ವಿವಾದ ಹುಟ್ಟಿಕೊಂಡಿತು.

Story first published: Monday, December 30, 2024, 11:50 [IST]
Other articles published on Dec 30, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+