Women's T20 World Cup 2024: ವಿವಾದಾತ್ಮಕ ಅಂಪೈರ್ ನಿರ್ಧಾರದಿಂದ ಹರ್ಮನ್‌ಪ್ರೀತ್ ಪಡೆಗೆ ಆನ್ಯಾಯ
2024ರ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ ಗುಂಪು ಹಂತದ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಿವೆ. ಉಭಯ ತಂಡಗಳ ಪಂದ್ಯವೂ ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಕೆಟ್ಟ ಅಂಪೈರಿಂಗ್ ಕಾರಣದಿಂದ ಮೈದಾನದಲ್ಲೇ ಭಾರತ ತಂಡದ ವನಿತೆಯರು ಅಂಪೈರ್ ಜೊತೆ ವಾಗ್ವಾದ ನಡೆಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಭಾರತ ತಂಡದ ಅಭಿಮಾನಿಗಳು ಸಹಾ ಅಂಪೈರ್ ನಿರ್ಧಾರಕ್ಕೆ ಆಕ್ರೋಶ ಹೊರಹಾಕಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 160 ರನ್ ಕಲೆ ಹಾಕಿದೆ. ಕಿವೀಸ್ ಪರ ಸೋಫಿ ಡಿವೈನ್ ಅರ್ಧಶತಕ ಗಳಿಸಿ ತಂಡಕ್ಕೆ ಆಸರೆಯಾದರು. ಅವರು 36 ಎಸೆತಗಳಲ್ಲಿ 7 ಬೌಂಡರಿ ನೆರವಿನಿಂದ 57 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಟೀಮ್ ಇಂಡಿಯಾಕ್ಕೆ ರೇಣುಕಾ ಠಾಕೂರ್ ಸಿಂಗ್ 2 ವಿಕೆಟ್ ಪಡೆದರೆ, ಅರುಂಧತಿ ರೆಡ್ಡಿ ಮತ್ತು ಆಶಾ ಸೋಭಾನ ತಲಾ ಒಂದೊಂದು ವಿಕೆಟ್ ಕಬಳಿಸಿದರು. ಭಾರತದ ಗೆಲುವಿಗೆ ಈಗ 161 ರನ್‌ಗಳ ಅವಶ್ಯಕತೆಯಿದೆ.

ಆಗಿದ್ದೇನು?
ನ್ಯೂಜಿಲೆಂಡ್ ಬ್ಯಾಟಿಂಗ್ ಮಾಡುವ ವೇಳೆ 14ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ನ್ಯೂಜಿಲೆಂಡ್ ಯುವ ಬ್ಯಾಟರ್ ಅಮೆಲಿಯಾ ಕೆರ್ ರನ್ ಔಟ್ ಆಗಿರುವುದನ್ನು ತಿಳಿದು ಸ್ವತಃ ತಾವೇ ಪೆವಲಿಯನ್ ಕಡೆಗೆ ಸಾಗುತ್ತಿದ್ದರು. ತಕ್ಷಣ ಆನ್ ಫೀಲ್ಡ್ ಅಂಪೈರ್ ಯಾವುದೇ ಕಾರಣ ನೀಡದೆ ಅಮೆರಿಯಾ ಕೆರ್ ಅವರನ್ನು ವಾಪಸ್ ಕರೆದರು. ಇದನ್ನು ಪ್ರಶ್ನಿಸಿದ ಟೀಮ್ ಇಂಡಿಯಾ ಆಟಗಾರರಿಗೆ ಅಂಪೈರ್ ಅದು ಡೆಡ್ ಬಾಲ್ ಎಂದು ಹೇಳಿದರು. ಇದು ಟೀಮ್ ಇಂಡಿಯಾ ವನಿತೆಯರನ್ನು ಕೆರಳುವಂತೆ ಮಾಡಿತು.
ಡೆಡ್ ಬಾಲ್ ಅಲ್ಲ
ಟೀಮ್ ಇಂಡಿಯಾ ಸ್ಪಿನ್ನರ್ ದೀಪ್ತಿ ಶರ್ಮಾ ತಮ್ಮ ಓವರ್ ಅನ್ನು ಪೂರ್ಣಗೊಳಿಸಿದ ಬಳಿಕ ಅಂಪೈರ್ ಬಳಿಯಿದ್ದ ಕ್ಯಾಪ್ ಪಡೆದುಕೊಂಡರು. ಇತ್ತ ಕ್ರೀಸ್‌ನಲ್ಲಿದ್ದ ಸೋಫಿ ಡಿವೈನ್ ಮತ್ತು ಅಮೆಲಿಯಾ ಕೆರ್ ರನ್ ಗಳಿಸಲು ಓಡಿದರು. ಈ ವೇಳೆ ಹರ್ಮನ್‌ಪ್ರೀತ್ ಕೌರ್ ವಿಕೆಟ್ ಕೀಪರ್ ಕೈಗೆ ಚೆಂಡು ಎಸೆದರು. ಅಮೆಲಿಯಾ ಕೆರ್ ಕ್ರೀಸ್ ತಲುಪುವ ಮೊದಲೇ ರಿಚಾ ಘೋಷ್ ವಿಕೆಟ್ ಉರುಳಿಸಿದರು. ಆದರೆ ದೀಪ್ತಿ ಶರ್ಮಾ ಓವರ್ ಮುಗಿಸಿ ಕ್ಯಾಪ್ ಪಡೆದುಕೊಂಡ ನಂತರ ರನೌಟ್ ಆದ ಕಾರಣ ಅದು ಡೆಡ್ ಬಾಲ್ ಎಂದು ಅಂಪೈರ್ ತಿಳಿಸಿದ್ದಾರೆ.
ಸೋಫಿ ಡಿವೈನ್ ಮತ್ತು ಅಮೆಲಿಯಾ ಕೆರ್ ರನ್ ಗಳಿಸಲು ಪ್ರಯತ್ನಿಸುವಾಗ ಚೆಂಡು ಫೀಲ್ಡರ್ ಹರ್ಮನ್‌ಪ್ರೀತ್ ಕೌರ್ ಬಳಿ ಇತ್ತು. ಈ ಸಂದರ್ಭದಲ್ಲಿ ಅವರು ರನ್ ಗಳಿಸಲು ಮುಂದದಾಗ ರನೌಟ್‌ಗೆ ಬಲಿಯಾದರು. ಆದರೂ ಅಂಪೈರ್ ಅದನ್ನು ಡೆಡ್ ಬಾಲ್ ಎಂದು ಘೋಷಣೆ ಮಾಡಿದ್ದು, ಟೀಮ್ ಇಂಡಿಯಾ ವನಿತೆಯರ ಕೆಂಗಣ್ಣಿಗೆ ಗುರಿಯಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications