For Quick Alerts
ALLOW NOTIFICATIONS  
For Daily Alerts
 

IPL 2025: ಪಂದ್ಯದ ಫಲಿತಾಂಶವನ್ನೇ ಬದಲಿಸಿದ ಅಂಪೈರ್‌ಗಳ ಕೆಟ್ಟ ತೀರ್ಪು

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲೂ ಕಳಪೆ ಅಂಪೈರಿಂಗ್ ಕಾಣಿಸಿಕೊಂಡಿದೆ. ಇದು ಪಂದ್ಯದ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರಿದೆ. ಮೈದಾನದಲ್ಲಿ ಅಂಪೈರ್‌ಗಳು ನೀಡಿದ ನಿರ್ಣಯಗಳು ಚರ್ಚೆಗೆ ಹಲವು ಬಾರಿ ಆಹಾರವಾಗಿವೆ. ಇನ್ನು ಬರೀ ಅಂಪೈರಿಂಗ್ ತೀರ್ಪುಗಳು ಅಷ್ಟೇ ಅಲ್ಲ ಗುಣ ಮಟ್ಟದ ಬಗ್ಗೆಯೂ ಚರ್ಚೆಗಳು ಆಗುತ್ತಲೇ ಇವೆ. ಐಪಿಎಲ್‌ನಲ್ಲಿ ಅಂಪೈರ್‌ಗಳು ನೀಡಿರುವ ಕೆಲವು ಅಸಾಮಾಧನಿತ ತೀರ್ಪಿನ ಮೇಲೆ ವರದಿ ಇಲ್ಲಿದೆ.

ಐಪಿಎಲ್‌ನಲ್ಲಿ ಕೂಲ್‌ ಕ್ಯಾಪ್ಟನ್‌ ಮಹೇಂದ್ರ ಸಿಂಗ್ ಧೋನಿ ಸಹ ಒಮ್ಮೆ ತಾಳ್ಮೆ ಕಳೆದುಕೊಂಡಿದ್ದಾರೆ. ಅಷ್ಟೇ ಏಕೆ ದಕ್ಷಿಣ ಆಫ್ರಿಕಾದ ಹೆನ್ರಿಕ್ ಕ್ಲಾಸೆನ್ ಸಹ ಸಂಯಮ ಕಳೆದುಕೊಂಡಿದ್ದಾರೆ. ಈ ಬಗ್ಗೆ ವರದಿ ಇಲ್ಲಿದೆ.

Controversial Umpiring Decisions in IPL That Changed Match Outcomes

ಆರ್‌ಸಿಬಿ, ಮುಂಬೈ ಪಂದ್ಯದ ವೇಳೆಯೂ ನಡೆದಿದ ಕಹಿ ಘಟನೆ

ಬೆಂಗಳೂರಿನಲ್ಲಿ ಪಂದ್ಯ ನಡೆದಿತ್ತು. ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 187 ರನ್‌ ಸೇರಿಸಿತು. ಈ ವೇಳೆ ರೋಹಿತ್ ಶರ್ಮಾ 48 ರನ್ ಬಾರಿಸಿ ಅಬ್ಬರಿಸಿದ್ರು. ಇದೇ ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿಗೆ ಕೊನೆಯ ಓವರ್‌ನಲ್ಲಿ 17 ರನ್‌ಗಳ ಅವಶ್ಯಕತೆ ಇತ್ತು. ಕ್ರೀಸ್‌ನಲ್ಲಿ ಎಬಿಡಿ ಹಾಗೂ ಶಿವಂ ದುಬೆ ಇದ್ರು, ಇದೇ ಓವರ್‌ನಲ್ಲಿ ಲಸಿತ್ ಮಲಿಂಗ್‌ ನೋ ಬಾಲ್ ಮಾಡಿದ್ದು ನೀಟ್‌ ಆಗಿ ಕಾಣುತ್ತಿತ್ತು. ಆದ್ರೆ ಫೀಲ್ಡ್ ಅಂಪೈರ್ ಎಸ್‌ ರವಿ ನೋಬಾಲ್ ನೀಡುವಲ್ಲಿ ವಿಫಲರಾದ್ರು. ಇದೇ ಪಂದ್ಯದಲ್ಲಿ ಶಿವಂ ದುಬೆ ರನ್‌ ಬಾರಿಸುವಲ್ಲಿ ವಿಫಲರಾದ್ರು.

ಈ ಪಂದ್ಯ ಮುಗಿದ ಬಳಿಕ ವಿರಾಟ್‌ ಕೊಹ್ಲಿ ತಮ್ಮ ಸಿಟ್ಟನ್ನು ಹೊರ ಹಾಕಿದ್ರು. "ನಾವು ಇಲ್ಲಿ ಕ್ಲಬ್ ಕ್ರಿಕೆಟ್ ಆಡುತ್ತಿಲ್ಲ. ಐಪಿಎಲ್‌ ಮಟ್ಟದ ಕ್ರಿಕೆಟ್ ಆಡುತ್ತಿದ್ದೇವೆ. ಅಂಪೈರ್‌ಗಳು ತಮ್ಮ ಕಣ್ಣುಗಳನ್ನು ತೆರೆದಿಟ್ಟುಕೊಂಡು ಕೆಲಸ ಮಾಡಬೇಕು ಎಂದು ತಿಳಿಸಿದ್ದಾರೆ.

Controversial Umpiring Decisions in IPL That Changed Match Outcomes

ರನ್ ಶಾಟ್

ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಲೀಗ್‌ ಹಂತದಲ್ಲಿ ಕಾದಟ ನಡೆಸಿದವು. ಈ ಪಂದ್ಯದಲ್ಲಿ ಅಂಪೈರ್ ನೀಡಿದ್ದ ಆ ಒಂದು ರನ್‌ ಶಾರ್ಟ್‌ ನಿರ್ಣಯ ಪಂದ್ಯದ ಗತಿಯನ್ನೇ ಬದಲಿಸಿತು. ಅಂತಿಮವಾಗಿ ಪಂದ್ಯ ಸೂಪರ್‌ ಓವರ್‌ನತ್ತ ಸಾಗುವಂತೆ ಮಾಡಿತು. ಕೊನೆಯಲ್ಲಿ ಗೆಲ್ಲ ಬೇಕಾದ ಪಂಜಾಬ್‌ ತಂಡ ಪಂದ್ಯವನ್ನು ಕೈ ಚೆಲಿತು.

19ನೇ ಓವರ್‌ನ್ನು ರಬಾಡ್‌ ಬೌಲ್ ಮಾಡಿದ್ರು. ಈ ವೇಳೆ ಮಯಾಂಕ್‌ ಅಗರ್‌ವಾಲ್ ಎರಡನೇ ಎಸೆತವನ್ನು ಮಿಡ್-ಆನ್ ಕಡೆಗೆ ಟ್ಯಾಪ್ ಮಾಡಿ ಎರಡು ರನ್ ಗಳಿಸಿದಾಗ ಈ ಘಟನೆ ಸಂಭವಿಸಿತು. ಸ್ಕ್ವೇರ್ ಲೆಗ್‌ನಲ್ಲಿ ನಿಂತಿದ್ದ ಅಂಪೈರ್ ಮೆನನ್, ಕ್ರಿಸ್ ಜೋರ್ಡಾನ್ ಅವರು ಒಂದು ರನ್‌ ಶಾರ್ಟ್‌ ಮಾಡಿದ್ದಾರೆ ಎಂದು ತಿಳಿಸಿದ್ರು. ಇವರ ಈ ನಿರ್ಧಾರದಿಂದ ಸ್ಕೋರ್‌ ಬೋರ್ಡ್‌ನಲ್ಲಿ ಕೇವಲ ಒಂದು ರನ್ ಸೇರಿಸಲಾಗಿತು.

ಟಿವಿ ಮರು ಪ್ರಸಾರದಲ್ಲಿ ಜೋರ್ಡಾನ್ ಮೊದಲ ರನ್‌ಗಾಗಿ ತನ್ನ ಬ್ಯಾಟ್ ಅನ್ನು ಕ್ರೀಸ್‌ನೊಳಗೆ ತಳ್ಳಿದ ನಂತರವೇ ಎರಡನೇ ರನ್‌ಗಾಗಿ ಓಡಿದು ಕಂಡು ಬಂದಿತು. ಈ ವೇಳೆಯೂ ಮಯಾಂಕ್‌ ತಾಳ್ಮೆ ಕಳೆದುಕೊಳ್ಳಲಿಲ್ಲ. ಕೊನೆಯ ಮೂರು ಎಸೆತದಲ್ಲಿ 1 ರನ್ ಅವಶ್ಯಕತೆ ಇದ್ದಾಗ ಮಾರ್ಕಸ್ ಸ್ಟೋಯಿನಿಸ್ ಎರಡು ವಿಕೆಟ್ ಪಡೆದ್ರು. ಪರಿಣಾಮ ಸೂಪರ್‌ ಓವರ್‌ನತ್ತ ಮುಖ ಮಾಡಿತು. ಡೆಲ್ಲಿ ಸುಲಭವಾಗಿ ಪಂದ್ಯ ಗೆದ್ದಿತು.

Controversial Umpiring Decisions in IPL That Changed Match Outcomes

ಅಂಪೈರ್‌ ನಿರ್ಣಯ ಚರ್ಚೆಗೆ ಆಹಾರ

2021ರಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಈ ಪಂದ್ಯದಲ್ಲಿ ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ಆರಂಭಿಕ ದೇವದತ್ ಪಡಿಕ್ಕಲ್‌ ಅವರ ಬ್ಯಾಟ್‌ಗೆ ತಗುಲಿದ ಚೆಂಡು ವಿಕೆಟ್‌ ಕೀಪರ್‌ ಕೈ ಸೇರಿತು. ಬೌಲರ್‌ಗಳು ಅಪೀಲ್ ಮಾಡಿದ್ರು. ಆದ್ರೆ ಫೀಲ್ಡ್‌ ಅಂಪೈರ್‌ ನಾಟೌಟ್ ಎಂದು ನೀಡಿದ ಬಳಿಕ, ಮೇಲ್ಮನವಿ ಸಲ್ಲಿಸಲಾಯಿತು.

ಮೇಲ್ಮನವಿಯಲ್ಲಿ ಪರೀಕ್ಷಿಸುವಾಗಿ ದೇವದತ್ ಪಡೀಕ್ಕಲ್‌ ಅವರ ಬ್ಯಾಟ್‌ಗೆ ಚೆಂಡು ತಾಗಿರುವುದು ಅಲ್ಟ್ರಾ ಎಡ್ಜ್‌ ವೇಳೆ ಸ್ಪಷ್ಟವಾಗಿ ಕಾಣಿಸಿತು. ಆನ್-ಫೀಲ್ಡ್ ಅಂಪೈರ್ ಕೆ. ಶ್ರೀನಿವಾಸನ್ ಅವರ ನಿರ್ಧಾರವನ್ನು ಮೂರನೇ ಅಂಪೈರ್ ಕೆ.ಎನ್. ಅನಂತಪದ್ಮನಾಭನ್ ಎತ್ತಿಹಿಡಿದರು. ಈ ತೀರ್ಪು ಚರ್ಚೆಗೆ ಎಡೆ ಮಾಡಿ ಕೊಟ್ಟಿತು. ಇದೇ ವೇಳೆ ಕೆಎಲ್ ರಾಹುಲ್‌ ಅಂಪೈರ್‌ ಜೊತೆ ವಾಗ್ವಾದ ಸಹ ನಡೆಸಿದ್ರು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಆರ್‌ಸಿಬಿ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 164 ರನ್‌ ಸೇರಿಸಿತು. ಈ ವೇಳೆ ಆರ್‌ಸಿಬಿ ಪರ ಗ್ಲೇನ್ ಮ್ಯಾಕ್ಸ್‌ವೆಲ್ 57 ರನ್‌ ಬಾರಿಸಿ ಅಬ್ಬರಿಸಿದ್ರು. ಗುರಿಯನ್ನು ಹಿಂಬಾಲಿಸಿದ ಪಂಜಾಬ್‌ 6 ರನ್‌ಗಳಿಂದ ಪಂದ್ಯವನ್ನು ಸೋತಿತು.

ತಾಳ್ಮೆ ಕಳೆದುಕೊಂಡ ಕೂಲ್ ಕ್ಯಾಪ್ಟನ್

ಯಾವಗಲೂ ತಮ್ಮ ಶಾಂತ ಸ್ವಭಾವ ಹಾಗೂ ಕೂಲ್ ಮನಸ್ಥಿತಿಯಿಂದ ಹೆಸರುವಾಸಿಯಾದ ಮಹೇಂದ್ರ ಸಿಂಗ್ ಧೋನಿ, ಅಂಪೈರ್‌ ಜೊತೆಗೆ ವಾಗ್ವಾದ ನಡೆಸಿದ ಪಂದ್ಯ ಇದು. ಏಪ್ರಿಲ್‌ 11, 2019 ಈ ಪಂದ್ಯ ಜೈಪುರ್‌ನಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್‌ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 151 ರನ್‌ ಸೇರಿಸಿತು. ಈ ವೇಳೆ ರಾಜಸ್ಥಾನ ರಾಯಲ್ಸ್‌ ಪರ ಬೆನ್ ಸ್ಟೋಕ್ಸ್ 28 ಹಾಗೂ ಜೋಸ್ ಬಟ್ಲರ್ 23 ರನ್‌ ಬಾರಿಸಿ ತಂಡಕ್ಕೆ ಆಧಾರವಾದ್ರು.

ಗುರಿಯನ್ನು ಹಿಂಬಾಲಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭ ಸಹ ಕಳಪೆಯಾಗಿತ್ತು. ಟಾಪ್‌ ಆರ್ಡರ್ ಬ್ಯಾಟರ್‌ಗಳು ಸಿಂಗಲ್‌ ಡಿಜಿಟ್‌ನಲ್ಲಿ ಆಟ ಮುಗಿಸಿದರು. ಅಂಬಟಿ ರಾಯುಡು (57) ಹಾಗೂ ಮಹೇಂದ್ರ ಸಿಂಗ್ ಧೊನಿ (58) ಅಗತ್ಯ ರನ್ ಕಲೆ ಹಾಕಿ ತಂಡಕ್ಕೆ ಅಧಾರವಾದ್ರು. ಈ ಪಂದ್ಯ ಕೊನೆಯ ಓವರ್‌ನ್ನು ಬೆನ್ ಸ್ಟೋಕ್ಸ್ ಬೌಲ್ ಮಾಡಿದ್ರು. ಈ ಓವರ್‌ನ ಮೂರನೇ ಎಸೆತ ಫುಲ್ ಟಾಸ್ ಆಗಿತ್ತು. ಆಗ ಅಂಪೈರ್ ಉಲ್ಹಾಸ್ ಗಾಂಧೆ ಆರಂಭದಲ್ಲಿ ಎತ್ತರಕ್ಕೆ ನೋ-ಬಾಲ್ ನೀಡುವ ಸೂಚನೆ ನೀಡಿದರು, ಆದರೆ ಲೆಗ್ ಅಂಪೈರ್ ಬ್ರೂಸ್ ಆಕ್ಸೆನ್‌ಫೋರ್ಡ್ ಈ ನಿರ್ಧಾರವನ್ನು ತಳ್ಳಿಹಾಕಿದರು. ಬಳಿಕ ಮಾಹಿ ಅಂಗಳಕ್ಕೆ ಆಗಮಿಸಿ ಲೆಗ್‌ ಅಂಪೈರ್ ಜೊತೆ ವಾದ ವಿವಾದ ನಡೆಸಿದ್ರು. ಮರು ಪ್ರಸಾರದಲ್ಲೂ ನೋ ಬಾಲ್‌ ಎನ್ನುವುದು ಸ್ಪಷ್ಟವಾಗಿತ್ತು. ಆದ್ರೆ ಲೆಗ್ ಅಂಪೈರ್‌ ತಮ್ಮ ತೀರ್ಪಿಗೆ ಸ್ಟಿಕ್ ಆನ್ ಆಗಿದ್ರು. ಕೊನೆಯ ಎಸೆತದಲ್ಲಿ ಮಿಚೆಲ್ ಸ್ಯಾಂಟ್ನರ್‌ ಸಿಕ್ಸರ್ ಬಾರಿಸಿ ಚೆನ್ನೈಗೆ ಗೆಲುವಿನ ಮಾಲೆ ತೊಡಿಸಿದರು.

ನೋಬಾಲ್‌ ತೀರ್ಪು

ಸನ್‌ ರೈಸರ್ಸ್ ಹೈದ್ರಾಬಾದ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವಣ ಪಂದ್ಯ ನಡೆದಿತ್ತು. ಈ ವೇಳೆ ಎಸ್‌ಆರ್‌ಎಚ್‌ ತಂಡದ ಬ್ಯಾಟರ್‌ ಹ್ಯಾನ್ರಿಕ್‌ ಕ್ಲಾಸೆನ್ ಬ್ಯಾಟ್ ಮಾಡುವಾಗ, ಆವೇಶ್ ಖಾನ್‌ ಬೌಲ್ ಮಾಡಿದ ಒಂದು ಎಸೆತ, ಸೊಂಟದ ಎತ್ತರದ ಎಸೆತಕ್ಕೆ ಬಿದ್ದಿತು. ಆರಂಭದಲ್ಲಿ ನೋ-ಬಾಲ್ ನೀಡಲಾಯಿತು. ಲಕ್ನೋ ತಂಡ ನಿರ್ಧಾರವನ್ನು ಪರಿಶೀಲಿಸಲು ಡಿಆರ್‌ಎಸ್‌ ಮನವಿಗೆ ಹೋದ್ರು. ಆಗ ಟಿವಿ ಅಂಪೈರ್‌ ಯಶ್ವಂತ್ ಬಾರ್ಡೆ ಆನ್-ಫೀಲ್ಡ್ ಆದೇಶವನ್ನು ರದ್ದುಗೊಳಿಸಿದರು.

ಈ ನಿರ್ಧಾರವು ಕ್ಲಾಸೆನ್ ಮತ್ತು SRH ಆಡಳಿತ ಮಂಡಳಿಗೆ ನಿರಾಸೆ ಮೂಡಿಸಿತು. ಪಂದ್ಯ ಮುಗಿದ ಬಳಿಕ ಕ್ಲಾಸೆನ್ ಸಾಮಾಜಿಕ ತಾಣದಲ್ಲಿ ಕಳಪೆ ಅಂಪೈರಿಂಗ್‌ ಟೀಕಿಸಿದರು. ಇವರು ಟೀಕಿಸಿದಕ್ಕಾಗಿ ಇವರಿಗೆ ಶೇಕಡಾ 10 ರಷ್ಟು ದಂಡವನ್ನು ಸಹ ವಿಧಿಸಲಾಯಿತು.

Story first published: Thursday, March 20, 2025, 7:07 [IST]
Other articles published on Mar 20, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+