For Quick Alerts
ALLOW NOTIFICATIONS  
For Daily Alerts
 

ಭಾರತದ ಆಟಗಾರ್ತಿ ಹಾಗೂ ಇಂಗ್ಲೆಂಡ್ ಆಟಗಾರರಿಗೆ ICC ದಂಡ: ಏಕೆ?

ಭಾರತ ಪುರುಷರ, ಕಿರಿಯರ ತಂಡ ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿದೆ. ಇದೇ ವೇಳೆ ಮಹಿಳಾ ತಂಡ ಸಹ ಇಂಗ್ಲೆಂಡ್ ವನಿತೆಯರ ವಿರುದ್ಧ ಸೀಮಿತ ಓವರ್‌ಗಳ ಪಂದ್ಯಗಳನ್ನು ಆಡುತ್ತಿದೆ. ಮೊದಲು ನಡೆದ ಟಿ20 ಸರಣಿಯನ್ನು ಭಾರತ 2-1 ರಿಂದ ಗೆದ್ದುಕೊಂಡಿದೆ. ಈಗ ಏಕದಿನ ಸರಣಿ ನಡೆಯುತ್ತಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 4 ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಆದರೆ ಈ ಪಂದ್ಯದಲ್ಲಿ ಐಸಿಸಿ ನೀತಿ ಸಂಹಿತಿಯನ್ನು ಗಾಳಿಗೆ ತೂರಿದಕ್ಕಾಗಿ ಭಾರತದ ಆರಂಭಿಕ ಆಟಗಾರ್ತಿಗೆ ದಂಡದ ಬಿಸಿ ಬಿಟ್ಟಿದೆ.

ಭಾರತದ ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್‌ ಅವರು ಲೆವೆಲ್ ಒನ್‌ ಉಲ್ಲಂಘನೆಯನ್ನು ಮಾಡಿದ್ದಕ್ಕಾಗಿ ಅವರಿಗೆ ಪಂದ್ಯದ ಶುಲ್ಕದ ಶೇಕಡಾ 10 ರಷ್ಟು ದಂಡ ವಿಧಿಸಲಾಗಿದೆ. ಅಲ್ಲದೆ ಅವರ ಖಾತೆಗೆ ಒಂದು ಡಿಮೆರಿಟ್‌ ಅಂಕವನ್ನು ಸಹ ಸೇರಿಸಲಾಗಿದೆ. ಪ್ರತಿಕಾ ವಿರುದ್ಧ ಐಸಿಸಿ ದಂಡದ ಶೀಕ್ಷೆಯನ್ನು ವಿಧಿಸಿದ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

Controversy in England Tour India s Pratika Rawal Fined for Breaching ICC Code

ಭಾರತ ಗುರಿಯನ್ನು ಬೆನ್ನಟ್ಟಿದಾಗ ಪ್ರತಿಕಾ, ಸ್ಮೃತಿ ಯೊಂದಿಗೆ ಆರಂಭಿಕರಾಗಿ ಕಣಕ್ಕೆ ಇಳಿದರು. ಈ ವೇಳೆ 18ನೇ ಓವರ್‌ನಲ್ಲಿ ಸಿಂಗಲ್‌ ರನ್‌ ಕದಿಯುವ ವೇಳೆ ಪ್ರತೀಕಾ, ಇಂಗ್ಲೆಂಡ್ ಬೌಲರ್‌ ಲಾರೆನ್‌ ಫೈಲರ್‌ಗೆ ಡಿಕ್ಕಿ ಹೊಡೆದಿದ್ದಾರೆ. ಇದನ್ನು ಅವರು ತಪ್ಪಿಸಬೇಕಿತ್ತು. ಅಲ್ಲದೆ ಇವರು ಔಟ್ ಆದ ಬಳಿಕ ಪೆವಿಲಿಯನ್‌ಗೆ ಮರಳುವಾಗಲೂ ಬೌಲರ್ ಸೋಫಿ ಎಕ್ಲೆಸ್ಟೋನ್‌ಗೆ ಡಿಕ್ಕಿ ಹೊಡೆದರು. ಹೀಗಾಗಿಯೇ ಪ್ರತಿಕಾ ಅವರ ಈ ವರ್ತನೆಗೆ ಒಂದು ಡಿಮೆರಿಟ್‌ ಅಂಕವನ್ನು ನೀಡಲಾಗಿದೆ. ಏಕೆಂದರೆ 2 ವರ್ಷದ ಅವಧಿಯಲ್ಲಿ ಪ್ರತಿಕಾ ಅವರ ಮೊದಲ ಅಪರಾಧ ಇದಾಗಿದೆ.

ಇನ್ನು ಇದೇ ತಂಡದಲ್ಲಿ ಇಂಗ್ಲೆಂಡ್ ತಂಡಕ್ಕೂ ಶೀಕ್ಷೆ ವಿಧಿಸಲಾಗಿದೆ. ಇಂಗ್ಲೆಂಡ್ ವನಿತೆಯರು ಸ್ಲೋ ಓವರ್ ರೇಟ್‌ ಮಾಡಿದಕ್ಕಾಗಿ ದಂಡಕ್ಕೆ ಗುರಿಯಾಗಿದ್ದಾರೆ. ಇಂಗ್ಲೆಂಡ್ ತಂಡಕ್ಕೆ ಐಸಿಸಿ ಅವರ ಪಂದ್ಯ ಶುಲ್ಕದ ಐದು ಪ್ರತಿಶತದಷ್ಟು ದಂಡ ವಿಧಿಸಿದೆ. ಮ್ಯಾಚ್‌ ರೆಫರಿ ಸಾರಾ ಬಾರ್ಟ್ಲೆಟ್ ಅವರ ಮುಂದೆ ಇಂಗ್ಲೆಂಡ್ ನಾಯಕಿ ಹಾಗೂ ಭಾರತದ ಪ್ರತಿಕಾ ರಾವಲ್‌ ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ.

Controversy in England Tour India s Pratika Rawal Fined for Breaching ICC Code

ಪಂದ್ಯದ ಫಲಿತಾಂಶ

ಮೊದಲ ಏಕದಿನ ಪಂದ್ಯದಲ್ಲಿ ಟಾಸ್‌ ಗೆದ್ದು ಇಂಗ್ಲೆಂಡ್ ಮೊದಲು ಬ್ಯಾಟ್ ಮಾಡಿತು. ಇಂಗ್ಲೆಂಡ್ ತಂಡದ ಭರವಸೆಯ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾದರು. ಆದರೆ ಸೋಫಿಯಾ ಡಂಕ್ಲಿ (83), ಆಲಿಸ್ ಡೇವಿಡ್ಸನ್-ರಿಚರ್ಡ್ಸ್ (53) ಅರ್ಧಶತಕ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ಇಂಗ್ಲೆಂಡ್ 50 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 258 ರನ್‌ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಇನ್ನು 10 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿದೆ. ಟೀಮ್ ಇಂಡಿಯಾದ ಭರವಸೆಯ ಆಟಗಾರ್ತಿ ದೀಪ್ತಿ ಶರ್ಮಾ 64 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 62 ರನ್ ಬಾರಿಸಿ ತಂಡದ ಜಯದಲ್ಲಿ ಮಿಂಚಿದರು.

Story first published: Friday, July 18, 2025, 17:25 [IST]
Other articles published on Jul 18, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+