Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Washington Sundar: ಮತ್ತೆ ವಿವಾದ ಕಿಚ್ಚು ಹಚ್ಚಿಸಿದ ಸ್ನಿಕೋ

ಬಾರ್ಡರ್‌ ಗವಾಸ್ಕರ್‌ ಸರಣಿಯಲ್ಲಿ ಟೆಕ್ನಾಲಜಿ ಹಲವು ಬಾರಿ ಟೀಕೆಗೆ ಗುರಿಯಾಗುತ್ತಿದೆ. ಈ ಟೂರ್ನಿಯ ಐದನೇ ಪಂದ್ಯದ ವೇಳೆಯೂ ತಂತ್ರಜ್ಞಾನದ ಲೋಪ ಕಂಡು ಬಂದಿದ್ದು, ಇದರ ಲಾಭ ಆತಿಥೇಯ ತಂಡದ ಆಟಗಾರರಿಗೆ ಆಗಿದೆ. ಮೆಲ್ಬೋರ್ನ್‌ ಅಂಗಳದಲ್ಲಿ ಆದ ಲೋಪವೇ, ಸಿಡ್ನಿ ಅಂಗಳದಲ್ಲಿ ಭಿನ್ನ ಮಗಲ್ಲನ್ನು ಪಡೆದುಕೊಂಡಿದೆ. ಈ ಬಾರಿಯೂ ರಿಸಲ್ಟ್‌ ಸೇಮ್‌ ಆದರೆ ಪ್ಲೇಯರ್ ಮಾತ್ರ ಬೇರೆ ಬೇರೆ. ಹಾಗಿದ್ದರೆ ಆಗಿದ್ದೇನು ಎಂಬ ಬಗ್ಗೆ ವರದಿ ಇಲ್ಲಿದೆ.

ಶುಕ್ರವಾರದಿಂದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್‌ ಸರಣಿಯ ಐದನೇ ಟೆಸ್ಟ್‌ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ಎದ ಭಾರತ ಮೊದಲು ಬ್ಯಾಟಿಂಗ್ ಮಾಡಲು ಮುಂದಾಗಿದೆ. ಈ ವೇಳೆ ಟೀಮ್ ಇಂಡಿಯಾದ ಕಳಪೆ ಬ್ಯಾಟಿಂಗ್ ಮತ್ತೊಮ್ಮೆ ಅನಾವರಣವಾಗಿದೆ. ಆದರೆ ಸಿಡ್ನಿ ಅಂಗಳದಲ್ಲೂ ತಂತ್ರಜ್ಞನಾ ಚರ್ಚೆಗೆ ಗ್ರಾಸವಾಗಿದೆ.

Controversy Strikes Again Questionable Technology in Border-Gavaskar Series Fifth Test

ಕೈ ಕೊಟ್ಟ ಸ್ನಿಕೋ

ಮೆಲ್ಬೋರ್ನ್‌ನಲ್ಲಿ ಟೀಮ್ ಇಂಡಿಯಾ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಯಶಸ್ವಿ ಜೈಸ್ವಾಲ್‌ ಅವರಿಗೆ ಟಿವಿ ಅಂಪೈರ್ ಔಟ್ ನೀಡಿದ್ದು ನಿಮಗೆಲ್ಲಾ ನೆನಪಿರಬೇಕು. ಐದನೇ ಪಂದ್ಯದಲ್ಲೂ ಇಂತಹದ್ದೇ ಒಂದು ತಪ್ಪು ನಡೆದಿದೆ. ಆದರೆ ಈ ಬಾರಿ ಬಲಿಯಾಗಿದ್ದು ಯಶಸ್ವಿ ಜೈಸ್ವಾಲ್ ಅಲ್ಲ, ಬದಲಿಗೆ ವಾಷಿಂಗ್ಟನ್ ಸುಂದರ್.

ಆಗಿದ್ದೇನು?

ಪ್ಯಾಟ್‌ ಕಮಿನ್ಸ್‌ ಇನಿಂಗ್ಸ್‌ನ 66ನೇ ಓವರ್‌ ಬೌಲ್ ಮಾಡಿದರು. ಈ ವೇಳೆ ಪ್ಯಾಟ್ ಕಮಿನ್ಸ್ ಎಸೆದ ಶಾರ್ಟ್‌ ಆಫ್‌ ಲೆಂಥ್ ಎಸೆತವನ್ನು ವಾಷಿಂಗ್ಟನ್‌ ಸುಂದರ್ ಲೆಗ್‌ ಸೈಡ್‌ನಲ್ಲಿ ಬಿಗ್ ಹಿಟ್ ಬಾರಿಸಲು ಹೋದರು. ಈ ವೇಳೆ ಚೆಂಡು ಹೋಗಿ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಕೈ ಸೇರಿತು. ಈ ವೇಳೆ ಫೀಲ್ಡ್‌ ಅಂಪೈರ್‌ ನಾಟೌಟ್ ಎಂದು ತೀರ್ಪು ನೀಡಿದರು. ಕಮಿನ್ಸ್ ತಡಮಾಡದೇ ಡಿಆರ್‌ಎಸ್‌ಗಾಗಿ ಮನವಿಯನ್ನು ಮಾಡಿದರು. ಈ ವೇಳೆ ಟಿವಿ ಅಂಪೈರ್‌ ಇದರ ನಿರ್ಣಯವನ್ನು ನೀಡುವ ಹೊಣೆಯನ್ನು ಹೊತ್ತುಕೊಂಡರು.

ಚೆಂಡು ಬಂದು ಬ್ಯಾಟ್‌ಗೆ ತಾಗುವ ಮುನ್ನವೇ ಸ್ನಿಕೋದಲ್ಲಿ ತರಂಗಗಳು ಕಾಣಿಸಿಕೊಂಡವು. ಚೆಂಡು, ಬ್ಯಾಟ್‌ನ ಸಮಿಪದಲ್ಲಿ ಪಾಸ್ ಆಗುತ್ತಿದ್ದಂತೆ ಈ ಚಿತ್ರದಲ್ಲಿ ಯಾವುದೇ ವ್ಯತ್ಯಾಸ ಕಾಣಿಸಲಿಲ್ಲ. ಆದರೆ ಚೆಂಡು ಗ್ಲೌಸ್ ಸಮಿಕ್ಕೆ ಬರುತ್ತಲೆ ಕೊಂಚ ಚಿತ್ರಣ ಬದಲಾಯಿತು. ಟಿವಿಯಲ್ಲಿ ನೋಡ್ತಾ ಇದ್ದ ವೀಕ್ಷಕರಿಗೆ ಈ ಚೆಂಡು ಬ್ಯಾಟ್‌ಗೆ ತಾಗೇ ಇಲ್ಲ ಎಂದು ನಿಶ್ಚಿತವಾಗಿ ತಿಳಿದಿತ್ತು. ಏಕೆಂದರೆ ಸ್ನಿಕೋದಲ್ಲಿ ಮೊದಲಿನಿಂದಲೂ ಕಾಣಿಸಿಕೊಳ್ಳುವ ರೇಖೆಗಳಿಗೆ ಹಾಗೂ ನಂತರ ಕಂಡು ಬಂದ ರೇಖೆಗಳಲ್ಲಿ ಹೆಚ್ಚಿನ ವ್ಯತ್ಯಾಸ ಏನು ಕಾಣಿಸಲಿಲ್ಲ. ಆದರೆ ಈ ಬಾರಿ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದರು.

ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡುತ್ತಿದ್ದಂತೆ ಮೈದಾನದಲ್ಲಿ ವಾಷಿಂಗ್ಟನ್‌ ಸುಂದರ್‌ ಸಹ ಚಕಿತರಾದರು. ಆದರೆ ಬೇರೆ ವಿಧಿಯಿಲ್ಲದೆ ಪೆವಿಲಿಯನ್‌ ನತ್ತ ಹೆಜ್ಜೆ ಹಾಕಿದರು. ಜಸ್ಪ್ರಿತ್ ಬುಮ್ರಾ ಸಹ ಬಂದು ಅಂಪೈರ್ ಜೊತೆಗೆ ಇದೇ ವಿಷಯದ ಬಗ್ಗೆ ಮಾತನಾಡಿದಂತೆ ಕಂಡು ಬಂದಿತು.

Story first published: Friday, January 3, 2025, 15:13 [IST]
Other articles published on Jan 3, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+