Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೂಚ್ ಬೆಹಾರ್ ಟ್ರೋಫಿ: ಮೈಸೂರಿನಲ್ಲಿ ಮಗನ ಆಟ ಕಣ್ತುಂಬಿಕೊಂಡ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್!

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಮೈಸೂರು ವಲಯ ಆಶ್ರಯದಲ್ಲಿ ನಡೆಯುತ್ತಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 19 ವರ್ಷದೊಳಗಿನವರ ಕೂಚ್ ಬೆಹಾರ್ ರಾಷ್ಟ್ರೀಯ ಕ್ರಿಕೆಟ್ ಟೂರ್ನಿಗೆ ಮೈಸೂರಿನಲ್ಲಿ ಚಾಲನೆ ದೊರೆಯಿತು.

ಶುಕ್ರವಾರದಿಂದ ಮೈಸೂರಿನ ಮಾನಸಗಂಗೋತ್ರಿ ಕ್ರೀಡಾಂಗಣದಲ್ಲಿ ನಡೆಯಲಿರುವ ನಾಲ್ಕು ದಿನಗಳ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ತಂಡವು ಉತ್ತರಾಖಂಡ ತಂಡವನ್ನು ಎದುರಿಸಲಿದೆ.

Cooch Behar Trophy 2023: Team India Coach Rahul Dravid Watched His Son Play Cricket in Mysuru


ಇದೇ ವೇಳೆ ಕರ್ನಾಟಕ ಮತ್ತು ಉತ್ತರಾಖಂಡ ನಡುವಿನ ಕೂಚ್ ಬೆಹಾರ್ ಟ್ರೋಫಿ ಪಂದ್ಯದಲ್ಲಿ ತಮ್ಮ ಮಗ ಸಮಿತ್ ದ್ರಾವಿಡ್ ಆಡುವುದನ್ನು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಅವರ ಪತ್ನಿ ವಿಜೇತಾ ವೀಕ್ಷಿಸಿದರು.

2023ರ ಏಕದಿನ ವಿಶ್ವಕಪ್ ನಂತರ ರಾಹುಲ್ ದ್ರಾವಿಡ್ ತನ್ನ ಕುಟುಂಬದೊಂದಿಗೆ ಸಮಯ ಕಳೆಯುವುದನ್ನು ಮುಂದುವರೆಸಿರುವ ಕಾರಣ, ಎನ್‌ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರು ಸದ್ಯ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಹಂಗಾಮಿ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Cooch Behar Trophy 2023: Team India Coach Rahul Dravid Watched His Son Play Cricket in Mysuru

ಆಲ್‌ರೌಂಡರ್ ಆಗಿರುವ ಸಮಿತ್ ದ್ರಾವಿಡ್, ಮೊದಲ ದಿನದ ಸ್ಟಂಪ್‌ಗೆ ಮುನ್ನ ಐದು ಓವರ್‌ಗಳ ಕೋಟಾದಲ್ಲಿ ಎರಡು ಮೇಡನ್‌ಗಳು ಸೇರಿದಂತೆ 0/11 ಅಂಕಿಅಂಶಗಳೊಂದಿಗೆ ಮುಗಿಸಿದರು.

ನಾಯಕ ಆರವ್ ಮಹಾಜನ್ 236 ಎಸೆತಗಳಲ್ಲಿ 18 ಬೌಂಡರಿ ಸೇರಿದಂತೆ 127 ರನ್ ಗಳಿಸಿದ ಶತಕದಿಂದಾಗಿ ಉತ್ತರಾಖಂಡ 90 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 232 ರನ್ ಗಳಿಸಿ ದಿನದಾಟವನ್ನು ಮುಗಿಸಿತು.

ಇದಕ್ಕೂ ಮುನ್ನ ಕೂಚ್ ಬೆಹಾರ್ ಟ್ರೋಫಿಯಲ್ಲಿ ಹಿಮಾಚಲ ಪ್ರದೇಶದ ವಿರುದ್ಧ ಸಮಿತ್ ದ್ರಾವಿಡ್ 55 ಎಸೆತಗಳಲ್ಲಿ 84) ರನ್ ಮತ್ತು ಐದು ಎಸೆತಗಳಲ್ಲಿ ಎರಡು ವಿಕೆಟ್‌ ಕಬಳಿಸಿದ್ದರು ಮತ್ತು ಕರ್ನಾಟಕವು ಆ ಪಂದ್ಯವನ್ನು ಐದು ವಿಕೆಟ್‌ಗಳಿಂದ ಗೆಲುವು ಸಾಧಿಸಿತ್ತು. ದೆಹಲಿ ವಿರುದ್ಧ ಕರ್ನಾಟಕ ಸೋತ ಪಂದ್ಯದಲ್ಲಿ ಸಮಿತ್ ದ್ರಾವಿಡ್ 122 ಎಸೆತಗಳಲ್ಲಿ 51 ರನ್ ಗಳಿಸಿದ್ದರು.

ಕರ್ನಾಟಕ ಹಾಗೂ ಭಾರತ ತಂಡದ ಮಾಜಿ ನಾಯಕನೂ ಆಗಿರುವ ರಾಹುಲ್ ದ್ರಾವಿಡ್‌ಗೆ ಇಬ್ಬರು ಮಕ್ಕಳಿದ್ದು, ಅವರೂ ಕರ್ನಾಟಕ ತಂಡಕ್ಕಾಗಿ ವೃತ್ತಿಪರ ಕ್ರಿಕೆಟ್‌ನಲ್ಲಿ ಆಡುತ್ತಿದ್ದಾರೆ.

ದ್ರಾವಿಡ್ ಅವರ ಹಿರಿಯ ಮಗ ಸಮಿತ್ ಈ ವರ್ಷದ ಆರಂಭದಲ್ಲಿ 18 ವರ್ಷಕ್ಕೆ ಕಾಲಿಟ್ಟರು, ವಿನೂ ಮಂಕಡ್ ಟ್ರೋಫಿಯಲ್ಲಿ ಕರ್ನಾಟಕ ಪರ ಆಡಿದ್ದರು. ಮತ್ತೊಂದೆಡೆ, ಅವರ ಕಿರಿಯ ಮಗ ಅನ್ವಯ್ ಕೂಡ ಕರ್ನಾಟಕ ಅಂಡರ್-14 ತಂಡದ ನಾಯಕನಾಗಿ ನೇಮಕಗೊಂಡಿದ್ದಾರೆ.

ವಿಶ್ವಕಪ್ ಪಂದ್ಯಾವಳಿ ಮುಗಿದ ನಂತರ, ಟೀಮ್ ಇಂಡಿಯಾ ಮುಖ್ಯ ಕೋಚ್ ಅವಧಿ ವಿಸ್ತರಣೆಗೆ ರಾಹುಲ್ ದ್ರಾವಿಡ್ ಒಪ್ಪಿಕೊಂಡಿದ್ದಾರೆ. ಸದ್ಯ ತೀವ್ರ ಕ್ರಿಕೆಟ್ ಋತುವಿನಲ್ಲಿ ತಂಡದಿಂದ ದೂರವಿರಲು ಬಿಸಿಸಿಐ ಅನುಮತಿ ನೀಡಿದೆ. ಹೀಗಾಗಿ ಅವರ ಕುಟುಂಬದ ರಾಹುಲ್ ಸಮಯ ಕಳೆಯುತ್ತಿದ್ದಾರೆ.

ಭಾರತದ ಹಿರಿಯ ರಾಷ್ಟ್ರೀಯ ಪುರುಷರ ತಂಡದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ಅವಧಿಯು ವಿಶ್ವಕಪ್ 2023ರ ಅಭಿಯಾನದ ಕೊನೆಯಲ್ಲಿ ಮುಕ್ತಾಯಗೊಂಡಿತು. ಆದರೆ ಭಾರತದ ಮಾಜಿ ನಾಯಕನೊಂದಿಗಿನ ಬಿಸಿಸಿಐ ಮಾತುಕತೆಯ ನಂತರ ಅವರ ಒಪ್ಪಂದವನ್ನು ವಿಸ್ತರಿಸಿದೆ.

Story first published: Saturday, December 2, 2023, 10:28 [IST]
Other articles published on Dec 2, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+