For Quick Alerts
ALLOW NOTIFICATIONS  
For Daily Alerts
 

ಅಜೇಯ 404 ರನ್: ಭಾರತೀಯ ಕ್ರಿಕೆಟ್‌ನಲ್ಲಿ ಮೊದಲ ಐತಿಹಾಸಿಕ ಸಾಧನೆ ಮಾಡಿದ ಕರ್ನಾಟಕ ಪ್ಲೇಯರ್

ಸೋಮವಾರ, ಜನವರಿ 15ರಂದು ಕರ್ನಾಟಕ ತಂಡದ ಯುವ ಬ್ಯಾಟರ್ ಪ್ರಖರ್ ಚತುರ್ವೇದಿ ಮುಂಬೈ ವಿರುದ್ಧದ ಕೂಚ್ ಬೆಹಾರ್ ಟ್ರೋಫಿ ಫೈನಲ್‌ನಲ್ಲಿ ಅದ್ಭುತ ಸಾಧನೆ ಮಾಡಿದರು.

ಅಂಡರ್-19 ಕ್ರಿಕೆಟಿಗರಿಗೆ ವಾರ್ಷಿಕ ನಾಲ್ಕು ದಿನಗಳ ಪಂದ್ಯಾವಳಿಯಾದ ಕೂಚ್ ಬೆಹಾರ್ ಟ್ರೋಫಿಯ ಫೈನಲ್‌ನಲ್ಲಿ ಮುಂಬೈ ವಿರುದ್ಧ ಕರ್ನಾಟಕ ತಂಡವನ್ನು ಪ್ರತಿನಿಧಿಸುವ ಪ್ರಖರ್ ಚತುರ್ವೇದಿ, ಅಂಡರ್-19 ಕ್ರಿಕೆಟ್‌ನಲ್ಲಿ 400 ರನ್‌ಗಳ ಗಡಿಯನ್ನು ಮೀರಿದ ಭಾರತದ ಏಕೈಕ ಆಟಗಾರನಾಗುವ ಮೂಲಕ ಗಮನಾರ್ಹ ಸಾಧನೆ ಮಾಡಿದರು.

ಅಸಾಧಾರಣ ಬ್ಯಾಟಿಂಗ್ ಪರಾಕ್ರಮ ತೋರಿದ ಪ್ರಖರ್ ಚತುರ್ವೇದಿ ಪ್ರಶಸ್ತಿ ಹಣಾಹಣಿಯ ಮೊದಲ ಇನ್ನಿಂಗ್ಸ್‌ನಲ್ಲಿ ಅಜೇಯ 404 ರನ್ ಗಳಿಸಿದರು. ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಸ್ಥಾಪಿಸಿದ್ದಲ್ಲದೆ, ಯುವ ಕ್ರಿಕೆಟ್ ಟೂರ್ನಿಯಲ್ಲಿ ಗಮನಾರ್ಹ ಛಾಪು ಮೂಡಿಸಿದರು.

Cooch Behar Trophy: Karnatakas Prakhar Chaturvedi Made the Historic Achievement in Indian Cricket

ಶಿವಮೊಗ್ಗದ ಕೆಎಸ್‌ಸಿಎ ನವುಲೆ ಸ್ಟೇಡಿಯಂನಲ್ಲಿ ಕರ್ನಾಟಕ 8 ವಿಕೆಟ್‌ಗೆ 890 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡಾಗ, ಪ್ರಖರ್ ಚತುರ್ವೇದಿ 638 ಎಸೆತಗಳಲ್ಲಿ 46 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಮೇತ 404 ರನ್ ಬಾರಿಸಿ ಅಜೇಯರಾಗಿ ಉಳಿದರು.

ಈ ಸಾಧನೆಯು ವಿಶೇಷವಾಗಿದೆ, ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಿಗ ಬ್ರಿಯಾನ್ ಲಾರಾ ತಮ್ಮ ವೃತ್ತಿಜೀವನದ ಕೊನೆಯಲ್ಲಿ ಟೆಸ್ಟ್ ಸ್ವರೂಪದಲ್ಲಿ ಅವರ ಸಾಧನೆಯನ್ನು ಪ್ರತಿಧ್ವನಿಸುತ್ತದೆ.

ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ 510 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದ್ದು, ನಾಲ್ಕನೇ ದಿನ ಡಿಕ್ಲೇರ್ ಆದ ಕೂಡಲೇ ಎರಡೂ ತಂಡಗಳು ಡ್ರಾ ಗೊಳಿಸಿಕೊಳ್ಳಲು ನಿರ್ಧರಿಸಿದವು. ಮೊದಲ ಇನಿಂಗ್ಸ್ ಮುನ್ನಡೆ ಆಧಾರದ ಮೇಲೆ ಕರ್ನಾಟಕ ಚಾಂಪಿಯನ್ ಪಟ್ಟ ಅಲಂಕರಿಸಿತು.

ಪಂದ್ಯದ ಬಗ್ಗೆ ಕುರಿತು ಹೇಳುವುದಾದರೆ, ಕರ್ನಾಟಕ ತಂಡವು ಶಿವಮೊಗ್ಗದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಆಯುಷ್ ಮ್ಹಾತ್ರೆ ಅವರು 145 ರನ್ ಗಳಿಸಿ ತಮ್ಮ ತಂಡವನ್ನು 380 ರನ್‌ಗಳ ಬೃಹತ್ ಮೊತ್ತಕ್ಕೆ ಮುನ್ನಡೆಸುವ ಮೂಲಕ ಮುಂಬೈ ತಂಡಕ್ಕೆ ನೆರವಾದರು.

ಕರ್ನಾಟಕ ಪರ ಹಾರ್ದಿಕ್ ರಾಜ್ 80 ರನ್‌ಗಳಿಗೆ 4 ವಿಕೆಟ್ ಪಡೆಯುವ ಮೂಲಕ ಮಿಂಚಿದರೆ, ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಮತ್ತು ಸಮರ್ಥ್ ಎನ್ ಕೂಡ ತಲಾ ಎರಡು ವಿಕೆಟ್ ಪಡೆದರು.

ಆದಾಗ್ಯೂ, ಪ್ರಖರ್ ಚತುರ್ವೇದಿ ಅವರ 404 ರನ್‌ಗಳ ಐತಿಹಾಸಿಕ ಇನ್ನಿಂಗ್ಸ್ ಎಲ್ಲ ಲೆಕ್ಕಾಚಾರಗಳಿಂದ ಹೊರಗುಳಿಯುವಂತೆ ಮಾಡಿತು. ಈ ಮೂಲಕ ಕರ್ನಾಟಕ ತಂಡವು ಫೈನಲ್‌ನಲ್ಲಿ ಹಿಡಿತ ಸಾಧಿಸಿತು.

ಕೂಚ್ ಬೆಹಾರ್ ಪಂದ್ಯಾವಳಿಯ ಫೈನಲ್‌ನಲ್ಲಿ 400ಕ್ಕೂ ಅಧಿಕ ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪ್ರಖರ್ ಚತುರ್ವೇದಿ ಪಾತ್ರರಾದರು.

ಕರ್ನಾಟಕ ಪರ ಹರ್ಷಿಲ್ ಧರ್ಮಾನಿ ಕೂಡ 169 ರನ್ ಬಾರಿಸಿದರು. ಆದರೆ ಪ್ರಖರ್ ಚತುರ್ವೇದಿ ಅವರ ಅಮೋಘ ಇನ್ನಿಂಗ್ಸ್ ಮುಂದೆ ಹರ್ಷಿಲ್ ಪ್ರದರ್ಶನ ಮರೆಯಾಯಿತು.

Story first published: Monday, January 15, 2024, 18:12 [IST]
Other articles published on Jan 15, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+