Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಶತಕ ಪೂರೈಸಲು ನೆರವಾದ ಬೂಮ್ರಾಗೆ ಧನ್ಯವಾದ ಹೇಳಿದ ಅಲೆಸ್ಟರ್ ಕುಕ್

Cook thanks Jasprit Bumrah for gifting him a century with overthrow

ಲಂಡನ್, ಸೆಪ್ಟೆಂಬರ್ 11: ಲಂಡನ್ ನ ಕೆನ್ನಿಂಗ್ಟನ್ ಓವಲ್ ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಶತಕ ಪೂರೈಸಲು ಕಾರಣರಾಗಿದ್ದಕ್ಕೆ ಭಾರತದ ಜಸ್ ಪ್ರೀತ್ ಬೂಮ್ರಾಗೆ ಇಂಗ್ಲೆಂಡ್ ಆಟಗಾರ ಅಲೆಸ್ಟರ್ ಕುಕ್ ಧನ್ಯವಾದ ಹೇಳಿದ್ದಾರೆ.

ಭಾರತದೆದುರು 5ನೇ ಮತ್ತು ಕೊನೆಯ ಪಂದ್ಯ ಆಡುತ್ತಿರುವ ಇಂಗ್ಲೆಂಡ್ ತಂಡದ ಕುಕ್ ಈ ಪಂದ್ಯದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಲಿದ್ದಾರೆ. ಅಂತಿಮ ಪಂದ್ಯದಲ್ಲಿ ಕುಕ್ 147 ರನ್ ಬಾರಿಸಿದ್ದು, ವಿದಾಯ ಪಂದ್ಯಕ್ಕೆ ಅರ್ಥ ಲಭಿಸಿತ್ತು.

5ನೇ ಟೆಸ್ಟ್ ನ 4ನೇ ದಿನದಾಟ ಮುಗಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಲೆಸ್ಟರ್ ಕುಕ್, 'ಅಂತಿಮ ಪಂದ್ಯದಲ್ಲಿ ಶತಕ ಪೂರೈಸುವ ಆಶೆ ಬಹುಶಃ ಹೆಚ್ಚಿನ ಆಟಗಾರರಿಗಿರುತ್ತೆ. ನಾನು ಶತಕ ಪೂರೈಸಲು ಸಾಧ್ಯವಾಗಿದ್ದಕ್ಕೆ ಬೂಮ್ರಾ ಅವರ ಓವರ್ ಥ್ರೋ ಕೂಡ ಒಂದು ಕಾರಣಾನೆ' ಎಂದು ಹೇಳಿದರು.

ರವೀಂದ್ರ ಜಡೇಜಾ ಅವರ ಓವರ್ ವೇಳೆ ಕುಕ್ 97 ರನ್ ಗಳಿಸಿದ್ದರು. ಆಂಗ್ಲ ಆಟಗಾರರನ್ನು ರನ್ ಔಟ್ ಮಾಡುವ ಭರದಲ್ಲಿ ಬೂಮ್ರಾ ಎಸೆದ ಥ್ರೋ ಬೌಂಡರಿ ಲೈನ್ ತಲುಪಿತು. ಅಷ್ಟರಲ್ಲಿ ಕುಕ್ ವಿದಾಯ ಪಂದ್ಯದಲ್ಲಿ ಶತಕ ಪೂರೈಸಿದ್ದರು.

Story first published: Tuesday, September 11, 2018, 18:35 [IST]
Other articles published on Sep 11, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+