IPL 2024: ನಿವೃತ್ತಿಯ ಬಳಿಕವೂ ಯುವಕರನ್ನು ನಾಚಿಸುವಂತಹ ಜೋಶ್
ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ.. ನಿವೃತ್ತಿ ಹೊಂದಿ ವರ್ಷಗಳೇ ಕಳೆದಿವೆ. ಈಗ ಅವರು ಬರೀ ಐಪಿಎಲ್‌ನಲ್ಲಿ ಮಾತ್ರ ಚೆನ್ನೈ ಸೂಪರ್ ಕಿಂಗ್ಸ್ ಪರ ಅಖಾಡಕ್ಕೆ ಇಳಿಯುತ್ತಾರೆ. ಈ ಇಳಿ ವಯಸ್ಸಿನಲ್ಲೂ ಮಾಹಿ ಅವರ ಫಿಟ್ನೆಸ್ ನೋಡಿದ ಅಭಿಮಾನಿಗಳು, ಯುಕವರು ಫುಲ್ ಸ್ಟನ್..
ಧೋನಿ ಅಂದ್ರೆನೇ ಹಾಗೆ.. ಮೈದಾನದಲ್ಲಿ ಯಾವಾಗಲೂ ಉತ್ಸಾಹದ ಚಿಲುಮೆ. ಅವರು ಭಾರತದ ಪರ ಬ್ಲ್ಯೂ ಜೆರ್ಸಿ ತೊಟ್ಟು ಮೈದಾನಕ್ಕೆ ಇಳಿದಾಗ ಅವರ ಜೋಶ್ ಕಂಡು ಎಲ್ಲರೂ ಮೆಚ್ಚುಗೆ ವ್ಯಕ್ಯ ಪಡಿಸಿದ್ದರು. ಇವರು ಆಗ ತಮ್ಮ ಫಿಟ್ನೆಸ್ ನಿಂದಲೇ ಸುದ್ದಿಯಲ್ಲಿದ್ದರು. ಈಗ ಮಾಹಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ 2024 ಗಾಗಿ ಸಿದ್ಧತೆಗಳು ಪ್ರಾರಂಭವಾಗಿವೆ. ವರದಿಗಳ ಪ್ರಕಾರ ಐಪಿಎಲ್ ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ವಿಡಿಯೋವೊಂದು ಇದೀಗ ಹೊರಬಿದ್ದಿದೆ. ಇದರಲ್ಲಿ ಅವರು ಬ್ಯಾಟಿಂಗ್ ಅಭ್ಯಾಸ ಮಾಡುತ್ತಿರುವುದನ್ನು ಕಾಣಬಹುದು. ಐಪಿಎಲ್ 2024ಕ್ಕೆ ಧೋನಿ ಸಿದ್ಧತೆ ಆರಂಭಿಸಿದ್ದಾರೆ. ಆದಾಗ್ಯೂ, ಧೋನಿ ಅವರ ವೀಡಿಯೊವನ್ನು ಚೆನ್ನೈ ಸೂಪರ್ ಕಿಂಗ್ಸ್ ಅಥವಾ ಯಾವುದೇ ಅಧಿಕೃತ ಸಾಮಾಜಿಕ ಹ್ಯಾಂಡಲ್ ಹಂಚಿಕೊಂಡಿಲ್ಲ.
ಧೋನಿಯ ವೀಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ. ಇದರಲ್ಲಿ ಅವರು ಬ್ಯಾಟಿಂಗ್ ಅಭ್ಯಾಸ ಮಾಡುತ್ತಿರುವುದನ್ನು ಕಾಣಬಹುದು. ಐಪಿಎಲ್ 2024ಕ್ಕೆ ಧೋನಿ ಸಿದ್ಧತೆ ಆರಂಭಿಸಿದ್ದಾರೆ ಎಂದು ಹೇಳಲಾಗುತ್ತಿದೆ. ವೀಡಿಯೊದಲ್ಲಿ ಧೋನಿ ಉತ್ತಮ ಲಯದಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ಋತುವಿನಲ್ಲಿ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಆಗಿತ್ತು. ಅಂತಿಮ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸಿದರು. ಕೊನೆಯ ಪಂದ್ಯದ ಮೇಲೆ ಮಳೆಯಿಂದಾಗಿ ಹೆಚ್ಚಿನ ಪರಿಣಾಮ ಉಂಟಾಗಿತ್ತು.

ಧೋನಿಗೆ 42 ವರ್ಷ. ಆದರೆ ಬ್ಯಾಟಿಂಗ್ ಇನ್ನೂ ಉತ್ತಮವಾಗಿದೆ. ಅವರ ಒಟ್ಟಾರೆ ದಾಖಲೆಯನ್ನು ಗಮನಿಸಿದರೆ ಅದು ಪರಿಣಾಮಕಾರಿಯಾಗಿದೆ. ಧೋನಿ ಇದುವರೆಗೆ ಆಡಿರುವ 250 ಐಪಿಎಲ್ ಪಂದ್ಯಗಳಲ್ಲಿ 5082 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಧೋನಿ 24 ಅರ್ಧಶತಕಗಳನ್ನು ಗಳಿಸಿದ್ದಾರೆ. ಐಪಿಎಲ್‌ನಲ್ಲಿ ಔಟಾಗದೆ 82 ರನ್ ಗಳಿಸಿದ್ದು ಅವರ ಅತ್ಯುತ್ತಮ ಸ್ಕೋರ್.
ಐಪಿಎಲ್‌ನಲ್ಲಿ ಧೋನಿ 239 ಸಿಕ್ಸರ್ ಹಾಗೂ 349 ಬೌಂಡರಿಗಳನ್ನು ಬಾರಿಸಿದ್ದಾರೆ. ಸ್ಟಂಪ್‌ಗಳ ಹಿಂದೆ ಇದ್ದಾಗಲೂ ಅವರು ತಂಡಕ್ಕೆ ನೆರವಾಗಿದ್ದಾರೆ. ಮಾಹಿ 142 ಕ್ಯಾಚ್‌ಗಳನ್ನು ತೆಗೆದುಕೊಂಡಿದ್ದಾರೆ ಮತ್ತು 42 ಸ್ಟಂಪ್‌ಗಳನ್ನು ಸಹ ಮಾಡಿದ್ದಾರೆ. ಇಷ್ಟೇ ಅಲ್ಲ ಡಿಆರ್‌ಎಸ್ ಪಡೆಯುವಲ್ಲೂ ಧೋನಿಗೆ ಅವರೇ ಸಾಠಿ..
ಮಹೇಂದ್ರ ಸಿಂಗ್ ಧೋನಿ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಸರಿದಿದ್ದಾರೆ. ಐಪಿಎಲ್ ನಲ್ಲೂ ಧೋನಿ ಅವರಿಗೆ ಇದು ಕೊನೆಯ ಚಾನ್ಸ್ ಎಂದು ಹೇಳಲಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications