ಐಪಿಎಲ್ ರದ್ದಾದರೆ ಬಿಸಿಸಿಐಗಾಗುವ ನಷ್ಟ ಎಷ್ಟು ಸಾವಿರ ಕೋಟಿ ಗೊತ್ತಾ!?

ಕೊರೊನಾ ಭೀತಿಗೆ ಜಗತ್ತು ನಲುಗಿದೆ. ಕ್ರೀಡಾಲೋಕವು ಇದರಿಂದ ಹೊರತಾಗಿಲ್ಲ. ಆಯೋಜನೆಯಾಗಿರುವ ಹೆಚ್ಚಿನ ಎಲ್ಲಾ ಪ್ರಮುಖ ಕ್ರೀಡಾಕೂಟಗಳನ್ನು ರದ್ದುಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ. ಇನ್ನು ಭಾರತದಲ್ಲಿ ಸದ್ಯ ಐಪಿಎಲ್‌ಅನ್ನು ಕೂಡ ಮುಂದೂಡುವ ನಿರ್ಧಾರವನ್ನು ಬಿಸಿಸಿಐ ತೆಗೆದುಕೊಂಡಿದೆ.
ಇದೇ ತಿಂಗಳ 29ಕ್ಕೆ ಆರಂಭವಾಗಬೇಕಾಗಿದ್ದ ಐಪಿಎಲ್ ಕ್ರೀಡಾಕೂಟವನ್ನು ಏಪ್ರಿಲ್ 15ರ ವರೆಗೆ ಮುಂದೂಡಿದೆ ಬಿಸಿಸಿಐ. ಕೊರೊನಾ ವೈರಸ್ ಸಾರ್ವಜನಿಕರಿಗೆ ಅಥವಾ ಆಟಗಾರರಿಗೆ ಹಬ್ಬುವ ಭೀತಿಯಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಸದ್ಯ ಬಿಸಿಸಿಐ ಐಪಿಎಲ್‌ಎನ್ನು ಮುಂದೂಡುವ ನಿರ್ಧಾರವನ್ನಷ್ಟೇ ತೆಗೆದುಕೊಂಡಿದೆ . ಆದರೆ ಅದನ್ನು ರದ್ದುಗೊಳಿಸಲೇಬೇಕಾದ ಪರಿಸ್ಥಿತಿ ಬಂದರೆ ಸಾವಿರಾರು ಕೋಟಿ ರುಪಾಯಿ ನಷ್ಟ ಬಿಸಿಸಿಐಗೆ ಉಂಟಾಗಲಿದೆ.

ಐಪಿಎಲ್ ಆರಂಭದ ಬಗ್ಗೆ ನಿಖರತೆಯಿಲ್ಲ
ಸದ್ಯ ಬಿಸಿಸಿಐ ಐಪಿಎಲ್ ಆರಂಭವನ್ನು ಏಪ್ರಿಲ್ 15ನೇ ತಾರೀಕಿನವರೆಗೆ ಮುಂದೂಡಲಾಗಿದೆ ಎಂದು ತಿಳಿಸಿದೆ. ಆದರೆ ಇದರರ್ಥ 15ನೇ ತಾರೀಕನಂದು ಐಪಿಎಲ್ ಆರಂಭವಾಗುತ್ತೆ ಎಂಬುದಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಐಪಿಎಲ್ ಆರಂಭದ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರವನ್ನು ತೆಗೆದುಕೊಳ್ಳಲು ಬಿಸಿಸಿಐ ಸಾಧ್ಯವಾಗಿಲ್ಲ.

ಏಪ್ರಿಲ್15ಕ್ಕೆ ಆರಂಭವಾದರೆ ಓಕೆ, ಇಲ್ಲಾಂದ್ರೆ..
ಕೊರೊನಾ ವೈರಸ್ ಭೀತಿಯಿಂದ ಐಪಿಎಲ್‌ನ್ನು ಅನಿವಾರ್ಯವಾಗಿ ಮುಂದೂಡಲೇಬೇಕಾದ ಇಕ್ಕಟ್ಟಿಗೆ ಸಿಲುಕಿದೆ ಬಿಸಿಸಿಐ. ಆದರೆ ಹೇಗಾದರೂ ಐಪಿಎಲ್ ಅನ್ನು ನಡೆಸಲೇ ಬೇಕು ಎನ್ನುವ ಮನಸ್ಥಿತಿ ಬಿಸಿಸಿಐಗೆ ಇದೆ. ಇದಕ್ಕೆ ಕಾರಣ ಬಿಸಿಸಿಐಗಾಗುವ ನಷ್ಟ. ಈ ಟೂರ್ನಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಲಾಭ ಮಾಡಿಕೊಳ್ಳುವ ಬಿಸಿಸಿಐ, ರದ್ದಾದರೆ ಭಾರೀ ಪ್ರಮಾಣದ ನಷ್ಟಕ್ಕೆ ಒಳಗಾಗಲಿದೆ. ಇದು ಐಪಿಎಲ್ ಆಯೋಜಕರು ಮತ್ತು ಫ್ರಾಂಚೈಸಿಗಳ ಆತಂಕಕ್ಕೆ ಕಾರಣವಾಗಿದೆ.

ಎಷ್ಟು ಸಾವಿರ ಕೋಟಿ ನಷ್ಟ ಗೊತ್ತಾ?
ಸದ್ಯ ಮುಂದೂಡಿಕೆಯಾಗಿರುವ ಐಪಿಎಲ್ ಅನ್ನು ಸಂಪೂರ್ಣವಾಗಿ ರದ್ದುಗೊಳಿಸಿದರೆ ಬಿಸಿಸಿಐ ಸರಿಸುಮಾರು 10,000 ಕೋಟಿ ರೂಪಾಯಿ ನಷ್ಟಕ್ಕೆ ಒಳಗಾಗಲಿದೆ ಎನ್ನಲಾಗ್ತಿದೆ. ಈ ಬಗ್ಗೆ ಕೆಲ ಆರ್ಥಿಕ ವಿಶ್ಲೇಷಕರು ಅಧ್ಯಯನ ನಡೆಸಿದ್ದು ನಷ್ಟದ ಪ್ರಮಾಣವನ್ನು ಅಂದಾಜಿಸಿದ್ದಾರೆ.

ಯಾರಿಗೆಲ್ಲಾ ನಷ್ಟವಾಗಲಿದೆ?
ಐಪಿಎಲ್ ರದ್ದುಗೊಳಿಸುವುದರಿಂದ ಅದು ಕೇವಲ ಬಿಸಿಸಿಐಗೆ ಮಾತ್ರವೇ ನಷ್ಟವಾಗುತ್ತದೆ ಅಂದುಕೊಂಡಿದ್ದರೆ ಅದು ತಪ್ಪು. ಫ್ರಾಂಚೈಸಿಗಳಿಂದ ಪ್ರಾಯೋಜಕರು, ಮೀಡಿಯಾ ರೈಟ್ಸ್, ಆಟಗಾರರವರೆಗೆ ಎಲ್ಲರೂ ನೇರವಾಗಿ ನಷ್ಟಕ್ಕೆ ತುತ್ತಾಗಲಿದ್ದಾರೆ.

ವಿದೇಶಿ ಆಟಗಾರರ ವೀಸಾ ಕ್ಯಾನ್ಸಲ್
ಬಿಸಿಸಿಐ ಐಪಿಎಲ್ ಮುಂದೂಡುವ ನಿರ್ಧಾರವನ್ನು ಪ್ರಕಟಿಸುವ ಮುನ್ನವೇ ಕೇಂದ್ರ ಸರ್ಕಾರ ವಿದೇಶಿ ಆಟಗಾರರಿಗೆ ಏಪ್ರಿಲ್ 15ರ ವರೆಗೆ ವೀಸಾ ರದ್ದುಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿತ್ತು. ಆದರೆ ಅದಾಗಲೆ ಶೇಕಡಾ 35 ಆಟಗಾರರು ಮತ್ತು ತಾಂತ್ರಿಕ ಸಿಬ್ಬಂದಿ ಭಾರತಕ್ಕೆ ಕಾಲಿಟ್ಟಾಗಿದೆ. ಹೀಗಾಗಿ ಅವರೆಲ್ಲಾ ಮರಳಬೇಕಾಗಿದೆ.

ನಿರ್ಧಾರ ಬದಲಿಸಿದ ಬಿಸಿಸಿಐ
ಆರಂಭದಲ್ಲಿ ಬಿಸಿಸಿಐ ಪ್ರೇಕ್ಷಕರಿಲ್ಲದೆ ಐಪಿಎಲ್ ಆಡಿಸುವ ಬಗ್ಗೆ ಯೋಚನೆಯನ್ನು ಮಾಡಿತ್ತು. ಈ ಮೂಲಕ ಆಗುವ ನಷ್ಟ ಪ್ರಮಾಣವನ್ನು ತಗ್ಗಿಸುವ ಯೋಚನೆ ಹೊಂದಿತ್ತು ಬಿಸಿಸಿಐ. ಆದರೆ ಬಳಿಕ ನಡೆದ ಮಹತ್ವದ ಸಬೆಯಲ್ಲಿ ಸದ್ಯದ ಮಟ್ಟಿಗೆ ಮುಂದೂಡುವ ನಿರ್ಧಾರವನ್ನು ಕೈಗೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications