ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಫ್ರಾಂಚೈಸಿ ಮಾಲಕರಿಗಾಗಿ ಕರೆದಿದ್ದ ಸಭೆ ರದ್ದುಗೊಳಿಸಿದ ಬಿಸಿಸಿಐ

Coronavirus: BCCI cancels conference call with IPL franchise owners

ನವದೆಹಲಿ, ಮಾರ್ಚ್ 24: ಮಾರ್ಚ್ 29ರಿಂದ ಆರಂಭವಾಗಬೇಕಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಈಗಾಗಲೇ ಏಪ್ರಿಲ್ 15ರ ಬಳಿಕ ಮುಂದೂಡಲ್ಪಟ್ಟಿದೆ. ಐಪಿಎಲ್ ಫ್ರಾಂಚೈಸಿ ಮಾಲಕರಿಗಾಗಿ ಕರೆಯಲಾಗಿದ್ದ ಸಭೆಯನ್ನೂ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ರದ್ದುಗೊಳಿಸಿದೆ.

ಕೊರೊನಾವೈರಸ್ ಭೀತಿ: ಟೋಕಿಯೋ ಒಲಿಂಪಿಕ್ಸ್ 2021ಕ್ಕೆ ಮುಂದೂಡಿಕೆಕೊರೊನಾವೈರಸ್ ಭೀತಿ: ಟೋಕಿಯೋ ಒಲಿಂಪಿಕ್ಸ್ 2021ಕ್ಕೆ ಮುಂದೂಡಿಕೆ

2020ರ ಕ್ರೀಡಾ ಕ್ಯಾಲೆಂಡರ್‌ನಲ್ಲಿದ್ದ ಪ್ರಮುಖ ಕ್ರೀಡಾಕೂಟಗಳೆಲ್ಲಾ ಈಗಾಗಲೇ ರದ್ದು ಇಲ್ಲವೆ ಮುಂದೂಡಲ್ಪಟ್ಟಿವೆ. ಮಾರಕ ಕೊರನಾವೈರಸ್ ಸೋಂಕಿನಿಂದಾಗಿ ಐಪಿಎಲ್ ಕೂಡ ರದ್ದಾಗುವುದರಲ್ಲಿದೆ. ಕೋವಿಡ್ 19 ಕಾರಣ ಭಾರತದಲ್ಲಿ ಮಾರ್ಚ್ 31ರ ವರೆಗೆ ಲಾಕ್‌ಡೌನ್ ವಿಧಿಸಲಾಗಿದೆ.

ಎರಡನೇ ಮಗುವಿನ ಖುಷಿಯಲ್ಲಿ ಸುರೇಶ್ ರೈನಾ-ಪ್ರಿಯಾಂಕಾ ರೈನಾ ದಂಪತಿಎರಡನೇ ಮಗುವಿನ ಖುಷಿಯಲ್ಲಿ ಸುರೇಶ್ ರೈನಾ-ಪ್ರಿಯಾಂಕಾ ರೈನಾ ದಂಪತಿ

'ಮನುಷ್ಯತ್ವ ಮೊದಲು ಉಳಿದೆಲ್ಲವೂ ಅನಂತರ ಬರುತ್ತದೆ. ಈಗಿನ ಸಂದರ್ಭ ಗಮನಿಸಿದರೆ ಪರಿಸ್ಥಿತಿ ಬೇಗ ಸುಧಾರಿಸುವ ಲಕ್ಷಣ ಕಾಣುತ್ತಿಲ್ಲ. ಈ ಬಗ್ಗೆ ಮಾತನಾಡುವಂತೆಯೇ ಇಲ್ಲ. ಒಂದು ವೇಳೆ ಐಪಿಎಲ್ ನಡೆಸಲು ಸಾಧ್ಯವಾಗದಿದ್ದರೆ ಐಪಿಎಲ್ ನಡೆಯಲಾರದು,' ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ಸಹ ಮಾಲಕ ನೆಸ್ ವಾಡಿಯಾ ಪಿಟಿಐ ಜೊತೆ ಹೇಳಿದ್ದಾರೆ.

ಐಪಿಎಲ್ ರದ್ದಾದರೆ ವಿಶ್ವಕಪ್‌ಗೆ ಸ್ಥಾನವನ್ನು ಗಳಿಸೋದೇ ಇಲ್ಲ ಈ 4 ಆಟಗಾರರುಐಪಿಎಲ್ ರದ್ದಾದರೆ ವಿಶ್ವಕಪ್‌ಗೆ ಸ್ಥಾನವನ್ನು ಗಳಿಸೋದೇ ಇಲ್ಲ ಈ 4 ಆಟಗಾರರು

'ಇಡೀ ದೇಶವೇ ಲಾಕ್‌ಡೌನ್‌ನಲ್ಲಿರುವಾಗ ಈ ಬಗ್ಗೆ ಚರ್ಚೆ ನಡೆಸಲು ಸಾಧ್ಯವೇ ಇಲ್ಲ. ಐಪಿಎಲ್‌ಗಿಂತ ಪ್ರಮುಖ ವಿಚಾರವೊಂದನ್ನು ನಾವೀಗ ನಿಭಾಯಿಸಬೇಕಿದೆ,' ಎಂದು ಹೆಸರು ಹೇಳಲಿಚ್ಛಿಸದ ಮತ್ತೊಂದು ಫ್ರಾಂಚೈಸಿ ಮಾಲಕರು ತಿಳಿಸಿದ್ದಾರೆ. ವಿಶ್ವದಾದ್ಯಂತ ಸುಮಾರು 381761 ಮಂದಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ. ಸುಮಾರು 16558 ಮಂದಿ ಈಗಾಗಲೇ ಸಾವಿಗೀಡಾಗಿದ್ದಾರೆ.

Story first published: Sunday, May 3, 2020, 22:25 [IST]
Other articles published on May 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X