ಬಿಸಿಸಿಐಯು ಈ ತಿಂಗಳ ಮಧ್ಯೆ 'ಐಪಿಎಲ್ 2020' ನಡೆಸುವ ಸಾಧ್ಯತೆ ಹೆಚ್ಚು!

ಮುಂಬೈ, ಮಾರ್ಚ್ 18: ಕೊರೊನಾವೈರಸ್‌ನಿಂದಾಗಿ ಮುಂದೂಡಲ್ಪಟ್ಟಿರುವ ಐಪಿಎಲ್, ಏಪ್ರಿಲ್ ಅರ್ಧದಿಂದ ಶುರುವಾಗಲಿದೆಯಾ? ಮುಂಬರಲಿರುವ ತಿಂಗಳ ಅಂತ್ಯಕ್ಕಾದರೂ ಕೊರೊನಾವೈರಸ್ ಹತೋಟಿಗೆ ಬರುವ ಸಾಧ್ಯತೆಯಿದೆಯಾ? ಇಲ್ಲ. ಮುಂಬರುವ ತಿಂಗಳಲ್ಲಿ ಮಾರಕ ಸೋಂಕು ಹತೋಟಿಗೆ ಬರುವ ಸಾಧ್ಯತೆ ತುಂಬಾ ಕಡಿಮೆಯಿದೆ. ಹಾಗಂತ ಮಹತ್ವದ ಟೂರ್ನಿಯೊಂದು ಸಮಸ್ಯೆಯ ಸುಳಿಯಲ್ಲಿ ಸಿಲುಕಿದರೆ ಅದಕ್ಕೆ ಪ್ಲ್ಯಾನ್ 'ಬಿ' ಇದ್ದೇ ಇದೆ.
ಮಾರ್ಚ್ 29ರಿಂದ ಮೇ 24ರ ಒಳಗೆ ಭಾರತದ ಅದ್ದೂರಿ ಕ್ರಿಕೆಟ್ ಹಬ್ಬ ಐಪಿಎಲ್ ನಡೆಸಲು ಬಿಸಿಸಿಐ ಈ ಮೊದಲು ನಿರ್ಧರಿಸಿತ್ತು. ಆದರೆ ಕೊರೊನಾವೈರಸ್‌ನಿಂದಾಗಿ ಟೂರ್ನಿಯನ್ನು ಏಪ್ರಿಲ್ 15ರ ಬಳಿಕ ನಡೆಸುವುದಾಗಿ ಬಿಸಿಸಿಐ ಹೇಳಿತ್ತು.
ಹಾಗಾದರೆ ನಿಜಕ್ಕೂ ಐಪಿಎಲ್ ಯಾವಾಗ ಆರಂಭಗೊಳ್ಳಲಿದೆ? ಬಿಸಿಸಿಐ ತಲೆಯಲ್ಲಿರುವ ಪ್ಲ್ಯಾನ್ 'ಬಿ' ಏನು?

ಬಿಸಿಸಿಐಯ ಪ್ಲ್ಯಾನ್ 'ಬಿ'
ಐಪಿಎಲ್ ಟೂರ್ನಿಯನ್ನು ಅಧಿಕೃತವಾಗಿ ಮುಂದೂಡಿದ ಬಳಿಕ ಶನಿವಾರ (ಮಾರ್ಚ್ 14) ಐಪಿಎಲ್ ಗರ್ವನಿಂಗ್ ಕೌನ್ಸಿಲ್, ಬಿಸಿಸಿಐ ಮತ್ತು ಎಲ್ಲಾ ಫ್ರಾಂಚೈಸಿ ಮಾಲಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ಪ್ಲ್ಯಾನ್ 'ಬಿ' ತಯಾರಾಗಿತ್ತು. ಅದರ ಪ್ರಕಾರ ಟೂರ್ನಿಯನ್ನು ಕೊಂಚ ಕಾಲ ಮುಂದೂಡಿ, ಎಣಿಕೆಗಿಂತ ಕಡಿಮೆ ಅವಧಿಯಲ್ಲಿ ಟೂರ್ನಿ ಮುಗಿಸಲು ಯೋಜಿಸಲಾಗಿತ್ತು.

ಪ್ಲ್ಯಾನ್ ಬಿ ನಡೆಯಲ್ಲ
ಈಗಿನ ಮಾಹಿತಿ ಪ್ರಕಾರ ಬಿಸಿಸಿಐಯು ಪ್ಲ್ಯಾನ್ 'ಬಿ'ಯ ಮೊರೆ ಹೋಗುತ್ತಿಲ್ಲ. ಬದಲಿಗೆ ಪ್ಲ್ಯಾನ್ 'ಎ'ಯನ್ನೇ ಪ್ರಯೋಗಿಸುವ ಯೋಜನೆಯಲ್ಲಿದೆ. ಅಂದರೆ ಟೂರ್ನಿಯ ದಿನಗಳು ಕಡಿತಗೊಳ್ಳಲ್ಲ, ಪಂದ್ಯಗಳು ಕಡಿಮೆಯಾಗೋಲ್ಲ. ಪೂರ್ಣ 60 ಪಂದ್ಯಗಳನ್ನೂ ನಡೆಸುವ ಹಿಂದಿನದ್ದೇ ಯೋಜನೆಯೀಗ ಬಿಸಿಸಿಐ ತಲೆಯಲ್ಲಿದೆ ಎನ್ನಲಾಗುತ್ತಿದೆ.

ಪ್ಲ್ಯಾನ್ 'ಎ' ಹೇಗೆ ಸಾಧ್ಯ?
ಪ್ಲ್ಯಾನ್ 'ಎ' ಎಂದರೆ ಟೂರ್ನಿಯ ದಿನಾಂಕ ಬದಲಾದರೂ ಟೂರ್ನಿಯ ಪಂದ್ಯಗಳಲ್ಲಿ, ದಿನಗಳಲ್ಲಿ ಬದಲಾವಣೆಯಿರೋಲ್ಲ. ಅಂದರೆ, ಈಗ ಟೂರ್ನಿ ನಡೆಸಲಾಗದಿದ್ದರೆ ಕೊಂಚ ಮುಂದೆ, ಭಾರತದಲ್ಲಿ ಟೂರ್ನಿ ನಡೆಸಲಾಗದಿದ್ದರೆ ವಿದೇಶದಲ್ಲಿ, ಎಲ್ಲಾ ಆಟಗಾರರು ಲಭ್ಯರಿರದಿದ್ದರೆ ಲಭ್ಯ ಇರುವ ಕೆಲವರಷ್ಟೇ ಇರುತ್ತಾರೆ. ಹೀಗೆ.

ಯಾವಾಗ ಶುರು ಐಪಿಎಲ್?
2020ರ ಕ್ರಿಕೆಟ್ ಕ್ಯಾಲೆಂಡರ್ ಪ್ರಕಾರ, ಜುಲೈಯಿಂದ ಸೆಪ್ಟೆಂಬರ್ ಮಧ್ಯೆ ಅಂಥ ದೊಡ್ಡ ಟೂರ್ನಿಯೇನಿಲ್ಲ. ಸೆಪ್ಟೆಂಬರ್‌ನಲ್ಲಿ ಏಷ್ಯಾಕಪ್ ಮತ್ತೆ ಒಂದೆರಡು ಟೂರ್ನಿಗಳಿವೆಯಷ್ಟೇ. ಹೀಗಾಗಿ ಬೇರೆ ಟೂರ್ನಿಗಳಿಗೆ ಕ್ಲ್ಯಾಶ್ ಆಗದಂತೆ ಹೊಂದಾಣಿಕೆ ಮಾಡಿಕೊಂಡರೆ ಈ ಅವಧಿಯಲ್ಲಿ ಐಪಿಎಲ್ ನಡೆಸಲು ಅವಕಾಶವಿದೆ. ಆದ್ದರಿಂದ ಬಿಸಿಸಿಐಯು ಜುಲೈಯಿಂದ ಸೆಪ್ಟೆಂಬರ್ ಮಧ್ಯೆ ಐಪಿಎಲ್ ನಡೆಸಿದರೂ ಅಚ್ಚರಿಯಿಲ್ಲ. ಇದೇ ಯೋಜನೆ ಬಿಸಿಸಿಐ ತಲೆಯಲ್ಲಿದೆ ಎಂದು ಹೇಳಲಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications