Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೊರೊನಾ ವೈರಸ್ ಸಂಕಷ್ಟ: ಜೀವನೋಪಾಯಕ್ಕೆ ತರಕಾರಿ ಮಾರಲು ಆರಂಭಿಸಿದ ಫುಟ್ಬಾಲ್ ಕೋಚ್

Coronavirus- Football Coach Now Sells Vegetables To Make Ends Meet

ಕೊರೊನಾ ವೈರಸ್ ಇಡೀ ವಿಶ್ವವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಕೆಲ ದೇಶಗಳಲ್ಲಿ ತನ್ನ ಪ್ರಭಾವವನ್ನು ಕಡಿಮೆಗೊಳಿಸಿದರೂ ಭಾರತದಂತಾ ದೇಶಗಳಲ್ಲಿ ಈಗ ಈ ಡೆಡ್ಲಿ ವೈರಸ್ ಭಾಯಾನಕ ರೂಪವನ್ನು ತೋರಿಸುತ್ತಿದೆ. ಹೀಗಾಗಿ ಎಲ್ಲಾ ವರ್ಗದ ಜನರೂ ಸಾಕಷ್ಟು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಆರ್ಥಿಕವಾಗಿ ನಲುಗಿ ಹೋಗಿದ್ದಾರೆ.

ಹೀಗಾಗಿ ಜೀವನೋಪಾಯಕ್ಕೆ ಅನಿವಾರ್ಯವಾಗಿ ಬೇರೆ ಮಾರ್ಗಗಳನ್ನು ನೋಡಬೇಕಾದ ಪರಿಸ್ಥಿತಿಯಿದೆ. ಹೀಗೆ ಮುಂಬೈನಲ್ಲಿ ಫುಟ್ಬಾಲ್ ಕೊಚ್ ಒಬ್ಬರು ತರಕಾರಿ ಮಾರಾಟಕ್ಕೆ ಇಳಿದಿದ್ದಾರೆ. ದಿನನಿತ್ಯದ ಅವಶ್ಯಕತೆಗಳನ್ನು ಪೂರೈಸಲು ಹಣಕಾಸಿನ ತೊಂದರೆಗೊಳಗಾಗಿರುವ ಕಾರಣ ಅನಿವಾರ್ಯವಾಗಿ ಈ ಮಾರ್ಗವನ್ನು ಕಂಡುಕೊಳ್ಳಬೇಕಾಯಿತು ಎಂದು ಪರಿಸ್ಥಿತಿಯನ್ನು ಸುದ್ದಿ ಸಂಸ್ಥೆ ಎಎನ್‌ಐ ಜೊತೆಗೆ ಮಾತನಾಡುತ್ತಾ ವಿವರಿಸಿದ್ದಾರೆ.

ಪ್ರಸಾದ್ ಭೋಸಾಲೆ ಎಂಬ ಮುಂಬೈ ಮೂಲದ ಫುಟ್ಬಾಲ್ ಕೋಚ್ ಹಣಕಾಸಿನ ಸಂಪಾದನೆಗಾಗಿ ಮುಂಬೈನ ಕಂಡಿವಾಲಿನಲ್ಲಿ ತರಕಾರಿ ಮಾರಾಟಕ್ಕೆ ಇಳಿದಿದ್ದಾರೆ. ಕಳೆದ ಎರಡು ತಿಂಗಳಿನಿಂದ ಈ ಫುಟ್ಬಾಲ್ ಕೋಚ್ ತರಕಾರಿ ಮಾರಾಟವನ್ನು ಮಾಡಿ ಜೀವನ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ಎದುರಿಸಿದ ಸವಾಲುಗಳನ್ನು ಕೂಡ ಹೇಳಿಕೊಂಡಿದ್ದಾರೆ.

ಆರಂಭದಲ್ಲಿ ಬೀದಿಬದಿಯಲ್ಲಿ ತರಕಾರಿ ಮಾರಾಟವನ್ನು ನಡೆಸಿದೆ. ಆದರೆ ಅದಕ್ಕೆ ಸ್ಥಳೀಯಾಡಳಿತ ಅವಕಾಶವನ್ನು ನೀಡಲಿಲ್ಲ. ಹೀಗಾಗಿ ತಿಂಗಳಿಗೆ ಆರು ಸಾವಿರ ಬಾಡಿಗೆಗೆ ಅಂಗಡಿಯೊಂದನ್ನು ಪಡೆದು ಇಲ್ಲಿ ರೆಕಾರಿ ಮಾರಾಟವನ್ನು ನಡೆಸುತ್ತಿದ್ದೇನೆ. ನನ್ನ ಬಳಿ ಹಣ ಸಂಪಾದನೆಗೆ ಇದೊಂದೆ ದಾರಿ ಉಳಿದಿತ್ತು. ಈ ಯೋಚನೆಯನ್ನು ನನ್ನ ಗೆಳೆಯನೊಬ್ಬ ನನಗೆ ನೀಡಿದ ಎಂದು ವಿವರಿಸಿದ್ದಾರೆ.

ಕಳೆದ ಐದು ವರ್ಷಗಳಿಂದ ನಾನು ವೃತ್ತಿಪರ ಕೋಚ್ ಆಗಿ ಇಲ್ಲಿನ ಶಾಲೆಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಅಲ್ಲಿ ತಿಂಗಳಿಗೆ 25 ಸಾವಿರ ದುಡಿಯುತ್ತಿದ್ದೆ. ಆದರೆ ಈಗ ಎಲ್ಲವೂ ಮುಚ್ಚಿದ್ದರಿಂದ ಜೀವನ ನಡೆಸಲು ಬೇರೆ ದಾಯಿಲ್ಲ. ದೈಹಿಕ ಶಿಕ್ಷಣದಲ್ಲಿ ಪದವಿಧರನಾಗಿ ಆರಂಭದಲ್ಲಿ ತರಕಾರಿಯನ್ನು ಮಾರಾಟಮಾಡಲು ಮುಜುಗರಪಟ್ಟೆ. ಆದರೆ ನನ್ನ ಬಳಿ ಬೇರೆ ದಾರಿಯಿರಿಲಿಲ್ಲ. ಈಗ ನಾನು ದಿನಕ್ಕೆ 500-600 ರೂಪಾಯಿ ದುಡಿಯುತ್ತಿದ್ದೇನೆ ಎಂದು ತಮ್ಮ ಬದುಕನ್ನು ಪ್ರಸಾದ್ ಭೋಸಲೆ ಬಿಚ್ಚಿಟ್ಟರು.

Story first published: Friday, July 17, 2020, 10:10 [IST]
Other articles published on Jul 17, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+