ಕೊರೊನಾ ಭೀತಿಯಲ್ಲಿ ಐಪಿಎಲ್: ಧೋನಿ ಭವಿಷ್ಯ ಡೋಲಾಯಮಾನ

ಸುನಿಲ್ ಜೋಶಿ ನೇತೃತ್ವದ ಬಿಸಿಸಿಐನ ಹೊಸ ಆಯ್ಕೆ ಸಮಿತಿ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭವಿಷ್ಯ ನಿರ್ಧರಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈ ಬಗ್ಗೆ ಯಾವ ಸ್ಪಷ್ಟನೆಯನ್ನೂ ನೀಡದೇ ಹಳೇ ಕಥೆಯನ್ನೇ ಸಮಿತಿ ರಿವೈಂಡ್ ಮಾಡಿದೆ.
ಹೊಸ ಸಮಿತಿಗೆ ಆಯ್ಕೆ ಮಾಡುವಾಗ, ಸಂದರ್ಶನಕ್ಕೆ ಬಂದಿದ್ದ ಐವರು ಅಭ್ಯರ್ಥಿಗಳಲ್ಲಿ, ಧೋನಿಯ ಬಗ್ಗೆ ಪ್ರಶ್ನೆಯನ್ನು ಕೇಳಲಾಗಿತ್ತು ಎಂದು ಸುದ್ದಿಯಾಗಿತ್ತು. ದಕ್ಷಿಣ ಆಫ್ರಿಕಾ ಸರಣಿಗೆ ತಂಡವನ್ನು ಆಯ್ಕೆ ಮಾಡಿದ ನಂತರ, ಧೋನಿ ಬಗ್ಗೆ ಕೇಳಲಾದ ಪ್ರಶ್ನೆಗೆ ಸರಿಯಾದ ಉತ್ತರವನ್ನು ಸಮಿತಿ ಕೊಡಲಿಲ್ಲ.
ಈ ಹಿಂದೆ ಹೇಳಿದಂತೆ, ಐಪಿಎಲ್ ನಲ್ಲಿ ಉತ್ತಮ ಸಾಧನೆಯನ್ನು ಧೋನಿ ಮಾಡಬೇಕು ಎಂದು ಬಿಸಿಸಿಐ ಅಧಿಕಾರಿಗಳು ಮತ್ತೊಮ್ಮೆ ಸ್ಪಷ್ಟ ಪಡಿಸಿದ್ದಾರೆ. ಕಳೆದ ವರ್ಷ ಜುಲೈನಲ್ಲಿ ವಿಶ್ವಕಪ್ ಸೆಮಿಫೈನಲ್ ನಲ್ಲಿ ಭಾರತ ಸೋತ ನಂತರ, ಧೋನಿ ಯಾವುದೇ ಅಂತರಾಷ್ಟ್ರೀಯ ಪಂದ್ಯವನ್ನು ಆಡಲಿಲ್ಲ.
ಬಿಸಿಸಿಐ ಆಯ್ಕೆ ಸಮಿತಿ ಬದಲಾಗಿರುವಾಗ ಎಂಎಸ್ ಧೋನಿಯ ಭವಿಷ್ಯದಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆಯೇ ಎನ್ನುವ ಕುತೂಹಲ ಕ್ರಿಕೆಟ್ ಪ್ರೇಮಿಗಳಲ್ಲಿ ಸಹಜವಾಗಿಯೇ ಇತ್ತು. ಧೋನಿ ಮರು ಆಯ್ಕೆಗೆ ಐಪಿಎಲ್ ಪ್ರಮುಖವಾಗಿದೆ. ಆದರೆ, ಕೊರೊನಾ ಭೀತಿ, ಐಪಿಎಲ್ ಗೆ ಕಾಡುತ್ತಿದೆ.

ಜೋಶಿ ನೇತೃತ್ವದ ಆಯ್ಕೆ ಸಮಿತಿಯಿಂದ ತಂಡ ಪ್ರಕಟ
ಮಾರ್ಚ್ ಹನ್ನೆರಡರಂದು ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ಸರಣಿಗೆ ಭಾರತ ತಂಡವನ್ನು ಭಾನುವಾರ (ಮಾ 8) ಅಹಮದಾಬಾದ್ ನಲ್ಲಿ ಜೋಶಿ ನೇತೃತ್ವದ ಸಮಿತಿ ಸಭೆ ಸೇರಿ, ಹದಿನೈದು ಆಟಗಾರರ ತಂಡವನ್ನು ಪ್ರಕಟಿಸಿತ್ತು. ಆ ವೇಳೆ, ಮುಂಬರುವ ಟಿ20 ವಿಶ್ವಕಪ್ ಅಥವಾ ಎಂ.ಎಸ್.ಧೋನಿ ಬಗ್ಗೆ ಯಾವ ಪ್ರಸ್ತಾವನೆಯೂ ಇರಲಿಲ್ಲ.

ಐಪಿಎಲ್ ನಿಗದಿತ ವೇಳೆಯಲ್ಲಿ ಆರಂಭವಾಗುವುದು ಅನುಮಾನ
ಈ ಮಾಸಾಂತ್ಯದಲ್ಲಿ ಆರಂಭವಾಗುವ ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಧೋನಿಯ ಪ್ರದರ್ಶನದ ಮೇಲೆ ಅವರ ಆಯ್ಕೆ ನಿಂತಿದೆ ಎಂದು ಹೇಳಲಾಗುತ್ತಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಐಪಿಎಲ್ ಟೂರ್ನಮೆಂಟ್ ನಿಗದಿತ ವೇಳೆಯಲ್ಲಿ ಆರಂಭವಾಗುವುದು ಅನುಮಾನ ಎನ್ನುವ ಸುದ್ದಿ ಹರಿದಾಡುತ್ತಿದೆ.

ಕೊರೊನೊ ವೈರಸ್ ಭೀತಿ
ವಿಶ್ವದಾದ್ಯಂತ ಕೊರೊನೊ ವೈರಸ್ ಭೀತಿ ಹೆಚ್ಚಾಗುತ್ತಿರುವುದರಿಂದ, ಐಪಿಎಲ್ ಮುಂದೂಡಲ್ಪಡುವ ಸಾಧ್ಯತೆಯಿಲ್ಲದಿಲ್ಲ. ಈಗಾಗಲೇ ಹಲವು ರಾಜ್ಯಗಳು ಈ ಟೂರ್ನಮೆಂಟ್ ಮುಂದೂಡುವಂತೆ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದೆ. ಬಹುದೊಡ್ಡ ಮತ್ತು ದೀರ್ಘಾವಧಿಗೆ ಈ ಕ್ರಿಕೆಟ್ ಟೂರ್ನಿ ನಡೆಯುವುದರಿಂದ, ಮುಂಜಾಗೃತಾ ಕ್ರಮವಾಗಿ ಐಪಿಎಲ್ ಮುಂದಕ್ಕೆ ಹೋಗುವ ಸಾಧ್ಯತೆಯಿದೆ.

ಐಪಿಎಲ್ ಮತ್ತು ಧೋನಿಯ ಭವಿಷ್ಯ ಕೂಡಾ ನಿಂತಿದೆ
ಒಂದು ವೇಳೆ ಈ ಟೂರ್ನಮೆಂಟ್ ಮುಂದಕ್ಕೆ ಹೋದರೆ, ಐಪಿಎಲ್ ಪ್ರದರ್ಶನವೇ ಧೋನಿಗೆ ಪ್ರಮುಖವಾಗಿರುವಾಗ, ರಾಂಚಿ ಆಟಗಾರನ ಭವಿಷ್ಯ ಐಪಿಎಲ್ ಮೇಲೆ ನಿಂತಿದೆ. ಐಪಿಎಲ್ ಆರಂಭವಾಗಲು ಇನ್ನೂ ಎರಡು ವಾರ ಇರುವುದರಿಂದ, ಈ ವೈರಸ್ ಭೀತಿ ಯಾವ ರೀತಿ ಹರಡಲಿದೆ ಎನ್ನುವುದರ ಮೇಲೆ ಐಪಿಎಲ್ ಮತ್ತು ಧೋನಿಯ ಭವಿಷ್ಯ ಕೂಡಾ ನಿಂತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications