ಕೊರೊನಾ ವೈರಸನ್ನು ಟ್ರೇಸರ್ ಬುಲೆಟ್‌ಗೆ ಹೋಲಿಸಿದ ರವಿ ಶಾಸ್ತ್ರಿ

ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಬೆಂಬಲವನ್ನು ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ದೇಶಾದ್ಯಂತ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಇಂತಾ ಸಂದರ್ಭದಲ್ಲಿ ಪ್ರತಿಯೊಬ್ಬ ನಾಗರೀಕರೂ ಈ ಆದೇಶವನ್ನು ಪಾಲಿಸಬೇಕು ಎಂದು ಹೇಳಿಕೆಯನ್ನು ನೀಡಿದ್ದಾರೆ.
ವಿಶ್ವಾದ್ಯಂತ ಟ್ರೇಸರ್ ಬುಲ್ಲೆಟ್‌ನಂತೆ ನುಗ್ಗುವ ಏಕೈಕ ವಿಷಯವೆಂದರೆ ಅದು ಭಯಾನಕ ಕೊರೊನಾ ಎಂದು ಟೀಮ್ ಇಂಡಿಯಾದ ಕೋಚ್ ಆಗಿರುವ ರವಿ ಶಾಸ್ತ್ರಿ ಹೇಳಿಕೊಂಡಿದ್ದಾರೆ. ಹೀಗಾಗಿ ಈ ಬಗ್ಗೆ ಎಲ್ಲರೂ ಎಚ್ಚರಿಕೆಯನ್ನು ವಹಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಪ್ರತಿಯೊಬ್ಬರೂ ಮನೆಯೊಳಗೆ ಇರಿ, ಅದು ಅತ್ಯಂತ ನಿರ್ಣಾಯಕ ಸಂದರ್ಭ. ಭಯಾನಕ ಕೊರೊನಾ ವಿಶ್ವಾದ್ಯಂತ ಅತ್ಯಂತ ವೇಗವಾಗಿ ಟ್ರೇಸರ್ ಬುಲೆಟ್‌ನಂತೆ ನುಗ್ಗುತ್ತಿದೆ. ನಿಮ್ಮನ್ನು ವಶಪಡಿಸಿಕೊಳ್ಳುವ ಮುನ್ನ ಒಳಗಿರಿ' ಎಂದು ರವಿ ಶಾಸ್ತ್ರಿ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಇದಕ್ಕೂ ಮುನ್ನ ರವಿ ಶಾಸ್ತ್ರಿ ಆಟಗಾರರಿಗೆ ನಿರಂತರ ಕ್ರಿಕೆಟ್ ಮಧ್ಯೆ ಸಿಕ್ಕ ಈ ಬಿಡುವು ಸ್ವಾಗತಾರ್ಹ ಎಂದು ಹೇಳಿಕೊಂಡಿದ್ದರು. ಇದು ಸ್ವಲ್ಪ ಕಷ್ಟವಿರಬಹುದು ಆದರೆ ಆಟಗಾರರ ದೃಷ್ಟಿಯಿಂದ ಇದು ಅಗತ್ಯವಾಗಿತ್ತು ಎಂದು ರವಿ ಶಾಸ್ತ್ರಿ ಹೇಳಿದ್ದರು.
ಕೊರೊನಾ ವೈರಸ್ ಭೀತಿಯಿಂದ ಕೇಂದ್ರ ಸರ್ಕಾರ ಮೂರು ವಾರಗಳ ಲಾಕ್‌ಡೌನ್ ಘೋಷಿಸಿದೆ. ಈವರೆಗೆ ಈ ಸಾಂಕ್ರಾಮಿಕ ರೋಗಕ್ಕೆ ದೇಶದಲ್ಲಿ 25ಕ್ಕೂ ಹೆಚ್ಚು ಜನರು ಬಲಿಯಾಗಿದ್ದು ಸಾವಿರಕ್ಕೂ ಅಧಿಕ ಜನರು ಕೊರೊನಾ ವೈರಸ್‌ಗೆ ತುತ್ತಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications