Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2020ರ ಟಿಕೆಟ್‌ಗಳ ಮಾರಾಟ ನಿಷೇಧಿಸಿದ ಮಹಾರಾಷ್ಟ್ರ!

Coronavirus: Maharashtra bans sale of IPL tickets in Mumbai
Maharashtra Govt Bans Ticket Sales For Mumbai Matches After Coronavirus Threat | IPL 2020

ಮುಂಬೈ, ಮಾರ್ಚ್ 12: ಮಹಾರಾಷ್ಟ್ರ ರಾಜ್ಯ ಕ್ಯಾಬಿನೆಟ್ ಬುಧವಾರ (ಮಾರ್ಚ್ 12) ಸಭೆ ನಡೆಸಿ, ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 13ನೇ ಆವೃತ್ತಿಯ ಪಂದ್ಯಗಳ ಟಿಕೆಟ್ ಮಾರಾಟವನ್ನು ನಿಷೇಧಿಸಲು ಕರೆ ನೀಡಿದೆ. ಕೊರೊನಾ ವೈರಸ್‌ಗೆ ಮುನ್ನೆಚ್ಚರಿಕೆಯಾಗಿ ಒಂದೆಡೆ ಜನ ಸೇರುವುದನ್ನು ತಪ್ಪಿಸಲು ಈ ನಿರ್ಧಾರ ತಾಳಿದೆ.

'ಜನರಿಂದ ಜನರಿಗೆ ಕೊರೊನಾ ವೈರಸ್ ಹರಡುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಳಾಗಿದೆ,' ಎಂದು ಸರ್ಕಾರದ ಮೂಲವೊಂದು ತಿಳಿಸಿದೆ. ಇದರರ್ಥ ಐಪಿಎಲ್ ಉದ್ಘಾಟನಾ ಪಂದ್ಯದ ವೇಳೆ ಮುಂಬೈಯ ವಾಂಖೆಡೆ ಸ್ಟೇಡಿಯಂ ಖಾಲಿ ಖಾಲಿಯಾಗಿ ಕಾಣಿಸಲಿದೆ.

ಮಾರ್ಚ್ 29ರಂದು ನಡೆಯಲಿರುವ ಐಪಿಎಲ್ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್‌ ತಂಡಗಳು ಕಾದಾಡಲಿವೆ. ಮಾಹಿತಿಯ ಪ್ರಕಾರ ಮಹಾರಾಷ್ಟ್ರ ಸರ್ಕಾರ ಮುಂಬೈಯಲ್ಲಿನ ಐಪಿಎಲ್ ಟಿಕೆಟ್‌ಗಳ ಮಾರಾಟ ನಿಷೇಧಿಸಲಿದೆ.

ಐಪಿಎಲ್ ಮುಂದೂಡುವ ಸಾಧ್ಯತೆ?
ಕೊರೊನಾ ವೈರಸ್ ಕಾರಣದಿಂದಾಗಿ ಐಪಿಎಲ್ ಪಂದ್ಯಾವಳಿ ನಿಗದಿತ ದಿನಾಂಕದಂದು ಆರಂಭವಾಗುವ ಸಾಧ್ಯತೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ ಎಂದು ಮೂಲಗಳು ಹೇಳುತ್ತಿವೆ, ಅಥವಾ ಪಂದ್ಯಗಳ ಸಂಖ್ಯೆ ಕಡಿಮೆಯಾಗುವ ಸಂಭವವೂ ಇದೆ. ಒಟ್ಟಿನಲ್ಲಿ ಮಾರ್ಚ್ ಕೊನೆಯಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ಲಭಿಸಲಿದೆ.

ವಿದೇಶಿಗರು ಆಡೋದು ಅನುಮಾನ
ಐಪಿಎಲ್ ಆಕರ್ಷಣೀಯ ಅನ್ನಿಸಿದ್ದೇ ವಿದೇಶಿ ಆಟಗಾರರು ಪಾಲ್ಗೊಳ್ಳುವಿಕೆಯಿಂದ. ಆದರೆ ಈ ಬಾರಿ ವಿದೇಶಿ ಆಟಗಾರರು ಟೂರ್ನಿಯಲ್ಲಿ ಪಾಲ್ಗೊಳ್ಳೋದು ಅನುಮಾನ ಎಂಬಂತಾಗಿದೆ. ಕರೊನಾ ವೈರಸ್‌ನಿಂದಾಗಿ ಹೊಸ ವೀಸಾಗಳಿಗೆ ನಿರ್ಬಂಧ ಹೇರಲಾಗಿರುವುದರಿಂದ ಪ್ರಮುಖ ವಿದೇಶಿ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದು ಅನುಮಾನವೆನಿಸಿದೆ.

Story first published: Thursday, March 12, 2020, 10:38 [IST]
Other articles published on Mar 12, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+