For Quick Alerts
ALLOW NOTIFICATIONS  
For Daily Alerts
 

ಕೊರೊನಾ ವೈರಸ್ ಹಾವಳಿಕೆ ಬರೊಬ್ಬರಿ 8 ಕ್ರಿಕೆಟಿಗರ ಮದುವೆ ಮುಂದಕ್ಕೆ!

coronavirus Marriage of 8 Australian Players Including Maxwell Adam Zampa Forced To Delay

ಜಗತ್ತಿನಲ್ಲಿ ಸಾಂಕ್ರಾಮಿಕ ರೋಗವಾಗಿ ಹರಡಿರುವ ಕರೋನಾ ವೈರಸ್‌ನ ಭೀತಿಗೆ ಸದ್ಯ ಜಗತ್ತೇ ಸ್ಥಬ್ಧವಾದಂತಿದೆ. ಈ ಕೊರೊನಾ ವೈರಸ್‌ನ ಭೀತಿಯಿಂದಾಗಿ ಅನೇಕ ಕ್ರೀಡಾಕೂಟಗಳನ್ನು ರದ್ದುಗೊಳಿಸಲಾಗಿದೆ.ಒಲಿಂಪಿಕ್ಸ್ ಗೇಮ್ಸ್, ಯುರೋಕಪ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ನಂತಾ ಕ್ರೀಡಾಕೂಟಗಳೂ ಮುಂದೂಡಿಕೆಯಾಗಿದೆ.

ಈ ಕಾರಣದಿಂದ ಆಟಗಾರರ ವೈಯಕ್ತಿಕ ಜೀವನ ಕೂಡ ಸ್ಥಗಿತಗೊಂಡಂತಾಗಿದೆ. ಅವರೆಲ್ಲರೂ ತಮ್ಮ ತಮ್ಮ ಮನೆಗಳಲ್ಲೇ ಲಾಕ್ಡೌನ್ ಆಗಿದ್ದಾರೆ. ಈ ಮಧ್ಯೆ ಈ ಏಪ್ರಿಲ್‌ನಲ್ಲಿ ಮದುವೆಯಾಗಲು ನಿರ್ದರಿಸಿದ್ದ 8 ಕ್ರಿಕೆಟಿಗರ ಮದುವೆಗೆ ಕೊರೊನಾ ವೈರಸ್ ಅಡ್ಡಿಯಾಗಿದೆ.

ಕೊರೊನಾ ವೈರಸ್ ಕಾರಣದಿಂದಾಗಿ 8 ಕ್ರಿಕೆಟಿಗರು ತಮ್ಮ ಮದುವೆಯನ್ನು ಮುಂದೂಡಿದ್ದಾರೆ. ಯಾರು ಆ ಕ್ರಿಕೆಟಿಗರು ಮುಂದೆ ಓದಿ..

ಆಸ್ಟ್ರೇಲಿಯಾದ ಕ್ರಿಕೆಟಿಗರೇ ಹೆಚ್ಚು

ಆಸ್ಟ್ರೇಲಿಯಾದ ಕ್ರಿಕೆಟಿಗರೇ ಹೆಚ್ಚು

ಏಪ್ರಿಲ್ ತಿಂಗಳು ಕ್ರಿಕೆಟ್ ಸೀಸನ್ ಅಂತ್ಯಗೊಳ್ಳುವ ಸಮಯ. ಈ ಸಂದರ್ಭದಲ್ಲಿ ಮದುವೆಯಾಗಲು ಆಸ್ಟ್ರೇಲಿಯಾದ ಹಲವು ಅವಿವಾಹಿತ ಆಟಗಾರರು ಸಮಯವನ್ನು ನಿಗದಿಗೊಳಿಸಿದ್ದರು, ಆದರೆ ಸಧ್ಯದ ಪರಿಸ್ಥಿತಿಯಲ್ಲಿ ಆ ಎಲ್ಲಾ ಮದುವೆಗಳು ಮುಂದೂಡಿಕೆಯಾಗಿವೆ.

ಅನಿವಾರ್ಯವಾಗಿ ಮುಂದೂಡಿಕೆ

ಅನಿವಾರ್ಯವಾಗಿ ಮುಂದೂಡಿಕೆ

ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಆಡಮ್ ಜಂಪಾ, ವೇಗಿ ಜಾಕ್ಸನ್ ಬರ್ಡ್, ಓಪನರ್ ಡಿ'ಆರ್ಸಿ ಶಾರ್ಟ್, ಇನ್ನಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲಿರುವ ಮಿಚೆಲ್ ಸ್ವೆಪ್ಸನ್, ಅಲೆಸ್ಟರ್ ಮೆಕ್‌ಡರ್ಮೊಟ್, ಆಂಡ್ರ್ಯೂ ಟೈ, ಜೆಸ್ ಜೊನಾಸ್ಸೆನ್ ಮತ್ತು ಕ್ಯಾಟ್ಲಿನ್ ಫ್ರೈಯೆಟ್ ಅವರು ಕೊರೋನವೈರಸ್ ಕಾರಣಕ್ಕೆ ಏಕಾಏಕಿ ತಮ್ಮ ಮದುವೆಯನ್ನು ಮುಂದೂಡಿದ್ದಾರೆ.

ದ,ಆಫ್ರಿಕಾ ಆಟಗಾರ್ತಿಯ ಮದುವೆಯೂ ಮುಂದೂಡಿಕೆ

ದ,ಆಫ್ರಿಕಾ ಆಟಗಾರ್ತಿಯ ಮದುವೆಯೂ ಮುಂದೂಡಿಕೆ

ಸುಮಾರು ನಾಲ್ಕೂವರೆ ವರ್ಷಗಳಿಂದ ಡೇಟಿಂಗ್‌ ನಡೆಸುತ್ತಾ ಸುದ್ದಿಯಲ್ಲಿರುವ ದಕ್ಷಿಣ ಆಫ್ರಿಕಾದ ಮಹಿಳಾ ಕ್ರಿಕೆಟ್ ಆಟಗಾರ್ತಿ ಲಿಜೆಲ್ ಲೀ ಮತ್ತು ಪ್ರಿಯಕರ ತಂಜ ಕ್ರೊಂಜೆ ಅವರು ಏಪ್ರಿಲ್ 10 ಮದುವೆಯಾಗುವ ನಿರ್ದಾರವಾಗಿತ್ತು. ಆದರೆ ಅವರು ತಮ್ಮ ಮದುವೆಯನ್ನು ಮುಂದೂಡಬೇಕಾಯಿತು.

ಗ್ಲೆನ್ ಮ್ಯಾಕ್ಸ್‌ವೆಲ್ ಅವರ ವಿವಾಹವೂ ವಿಳಂಬ

ಗ್ಲೆನ್ ಮ್ಯಾಕ್ಸ್‌ವೆಲ್ ಅವರ ವಿವಾಹವೂ ವಿಳಂಬ

ಇತ್ತೀಚೆಗೆ, ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಭಾರತೀಯ ಮೂಲದ ಗೆಳತಿ ವಿನ್ನಿ ರಾಮನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ಮಾರ್ಚ್‌ನಲ್ಲಿ ಮ್ಯಾಕ್ಸ್‌ವೆಲ್‌ ಮತ್ತು ವಿನ್ನಿ ಜೋಡಿ ಭಾರತೀಯ ಸಮಪ್ರದಾಯದ ಪ್ರಕಾರ ನಿಶ್ಚಿತಾರ್ಥವನ್ನು ನೆರವೇರಿಸಿಕೊಂಡಿದ್ದರು. ಕರೋನಾ ವೈರಸ್‌ನಿಂದಾಗಿ ಅವರ ಮದುವೆ ಕೂಡ ವಿಳಂಬವಾಗಲಿದೆ.

ಐಪಿಎಲ್ ಹೀರೋನ ಮದುವೆಯೂ ಮುಂದಕ್ಕೆ

ಐಪಿಎಲ್ ಹೀರೋನ ಮದುವೆಯೂ ಮುಂದಕ್ಕೆ

ಐಪಿಎಲ್‌ನಲ್ಲಿ ದಾಖಲೆ ಮೊತ್ತಕ್ಕೆ ಹರಾಜಾದ ಆಸ್ಟ್ರೇಲಿಯಾದ ಆಟಗಾರ ಪ್ಯಾಟ್ ಕಮ್ಮಿನ್ಸ್ ಕೂಡ ತಡವಾಗಿ ಮದುವೆಯಾಗುವ ಆಟಗಾರರಲ್ಲಿ ಒಬ್ಬರು. ಇವರು ಕೂಡ ಈ ಬಾರಿ ಮದುವೆಯಾಗಲು ನಿರ್ಧರಿಸಿದ್ದರು. ಮ್ಯಾಕ್ಸ್‌ವೆಲ್ ಜೋಡಿ ಮತ್ತು ಪ್ಯಾಟ್ ಕಮ್ಮಿನ್ಸ್ ಜೋಡಿ ಮದುವೆಯ ದಿನಾಂಕವನ್ನು ನಿಗದಿಗೊಳಿಸಿರಲಿಲ್ಲ. ಆದರೆ ಸದ್ಯಕ್ಕಂತು ಮದುವೆ ಮಾಡಿಕೊಳ್ಳುವ ಪರಿಸ್ಥಿತಿ ಇಲ್ಲ.

Story first published: Monday, April 6, 2020, 14:29 [IST]
Other articles published on Apr 6, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+