ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕುಟುಂಬದಲ್ಲಿ ಕೊರೊನಾ ವೈರಸ್ ಭೀತಿ!

Coronavirus scare in BCCI president Sourav Gangulys family

ನವದೆಹಲಿ: ಮಾರಕ ಕೊರೊನಾವೈರಸ್ ಸೋಂಕು ವಿಶ್ವದಾದ್ಯಂತ ಹಬ್ಬುತ್ತಿದೆ. ಟೀಮ್ ಇಂಡಿಯಾದ ಮಾಜಿ ನಾಯಕ, ಬೋರ್ಡ್ ಆಫ್ ಕಂಟ್ರೋಫ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಕುಟುಂಬಕ್ಕೂ ಈಗ ಕೋವಿಡ್-19 ಭೀತಿ ಎದುರಾಗಿದೆ. ಗಂಗೂಲಿ ಕುಟುಂಬದ ಕೆಲವರಿಗೆ ಈಗಾಗಲೇ ಕೊರೊನಾವೈರಸ್ ತಗುಲಿರುವುದಾಗಿ ವರದಿಯಾಗಿದೆ. ಭಾರತದಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಏರುತ್ತಲೇ ಇದ್ದು, ಭಾರತೀಯ ಕ್ರಿಕೆಟ್‌ ರಂಗಕ್ಕೆ ವೈರಸ್‌ನ ಆತಂಕ ಹೆಚ್ಚಾಗಿದೆ.

ಪಾಕ್‌ ವಿರುದ್ಧ ತೆಂಡೂಲ್ಕರ್ ಅದ್ಭುತ ಇನ್ನಿಂಗ್ಸ್‌ ಸ್ಮರಿಸಿದ ವಾಕರ್ ಯೂನಿಸ್ಪಾಕ್‌ ವಿರುದ್ಧ ತೆಂಡೂಲ್ಕರ್ ಅದ್ಭುತ ಇನ್ನಿಂಗ್ಸ್‌ ಸ್ಮರಿಸಿದ ವಾಕರ್ ಯೂನಿಸ್

ಸೌರವ್ ಗಂಗೂಲಿ ಕುಟುಂಬದ ಮೂವರಿಗೆ ಸದ್ಯ ಕೊರೊನಾವೈರಸ್ ಇರುವುದಾಗಿ ವರದಿಯಾಗಿದೆ. ಅಲ್ಲದೆ ಗಂಗೂಲಿ ಸಹೋದರ ಸ್ನೇಹಸಿಶ್ ಗಂಗೂಲಿ ಮನೆಯಲ್ಲೂ ಕೊರೊನಾವೈರಸ್ ರೋಗನಿರ್ಣಯ ಮಾಡಲಾಗಿದೆ ಎನ್ನಲಾಗಿದೆ.

ಎಂಎಸ್ ಧೋನಿ vs ವಿರಾಟ್ ಕೊಹ್ಲಿ: ಭಾರತ ಹೆಚ್ಚು ಗೆದ್ದಿದ್ದು ಯಾರ ನಾಯಕತ್ವದಲ್ಲಿ?!ಎಂಎಸ್ ಧೋನಿ vs ವಿರಾಟ್ ಕೊಹ್ಲಿ: ಭಾರತ ಹೆಚ್ಚು ಗೆದ್ದಿದ್ದು ಯಾರ ನಾಯಕತ್ವದಲ್ಲಿ?!

ಗಂಗೂಲಿ ಸಹೋದರ (ಅಣ್ಣ), ಮಾಜಿ ಪ್ರಥಮದರ್ಜೆ ಕ್ರಿಕೆಟರ್ ಸ್ನೇಹಸಿಶ್ ಅವರನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆಯಾದರೂ ಅವರ ಫಲಿತಾಂಶ ನೆಗೆಟಿವ್ ಎಂದು ಬಂದಿದೆ. ಅವರನ್ನು ಹೋಮ್ ಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗಿದೆ.

ನಾಲ್ಕು ದೂರುಗಳು ಬಂದಿದ್ದವು

ನಾಲ್ಕು ದೂರುಗಳು ಬಂದಿದ್ದವು

'ಗಂಗೂಲಿ ಕುಟುಂಬದ ನಾಲ್ವರೂ ಕೆಲವು ಆರೋಗ್ಯ ಸಮಸ್ಯೆಗಳ ಬಗ್ಗೆ ದೂರು ನೀಡಿದ್ದರು. ಈ ದೂರುಗಳು COVID-19ನ ರೋಗಲಕ್ಷಣಗಳನ್ನು ಹೋಲುತ್ತದೆ. ಆದರೆ ಅವರು ಮತ್ತೊಂದು ನಿವಾಸದಲ್ಲಿದ್ದಾಗ ಈ ದೂರುಗಳು ಬಂದಿದ್ದವೇ ಹೊರತು ಬೆಹಾಲಾದ ಗಂಗೂಲಿಯ ಪೂರ್ವಜರ ಮನೆಯಲ್ಲಿ ಇದ್ದಾಗ ಅಲ್ಲ,' ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಮೂವರು ಆಸ್ಪತ್ರೆಗೆ ದಾಖಲು

ಮೂವರು ಆಸ್ಪತ್ರೆಗೆ ದಾಖಲು

ಕೊರೊನಾ ಪರೀಕ್ಷೆ ನಡೆಸಿದ ಗಂಗೂಲಿ ಕುಟುಂಬಸ್ಥರಲ್ಲಿ ಮೂವರಿಗೆ (ಗಂಗೂಲಿ ಸಹೋದರ ಸ್ನೇಹಸಿಶ್ ಪತ್ನಿಗೆ ಮತ್ತು ಪತ್ನಿಯ ಹೆತ್ತವರಿಗೆ) ಸೋಂಕು ತಗುಲಿದ್ದು, ಅವರು ಖಾಸಗಿ ನರ್ಸಿಂಗ್‌ ಹೋಮ್‌ನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂದ್ಹಾಗೆ, ಸ್ನೇಹಶಿಶ್ ಸದ್ಯ ಕ್ರಿಕೆಟ್‌ ಅಸೋಸಿಯೇಶನ್‌ ಆಫ್ ಬೆಂಗಾಲ್‌ (ಸಿಎಬಿ) ಕಾರ್ಯದರ್ಶಿಯಾಗಿದ್ದಾರೆ.

ಪರೀಕ್ಷೆಯ ಮೇಲೆ ನಿರ್ಧರಿಸಲಾಗುತ್ತದೆ

ಪರೀಕ್ಷೆಯ ಮೇಲೆ ನಿರ್ಧರಿಸಲಾಗುತ್ತದೆ

'ಸೋಂಕಿಗೀಡಾದವರ ಹೆಚ್ಚಿನ ಪರೀಕ್ಷೆಗಳನ್ನು ಶನಿವಾರ ಮಾಡಲಾಗುವುದು, ಅದರ ಆಧಾರದ ಮೇಲೆ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕೆ ಅಥವಾ ಬೇಡವೇ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 'ಅವರನ್ನು ಬಿಡುಗಡೆ ಮಾಡಲಾಗುತ್ತದೆಯೋ ಇಲ್ಲವೋ ಎಂಬುದು ಪರೀಕ್ಷೆಗಳ ಫಲಿತಾಂಶವನ್ನು ಅವಲಂಬಿಸಿರುತ್ತದೆ,' ಎಂದು ನರ್ಸಿಂಗ್‌ಹೋಮ್‌ನ ಅಧಿಕಾರಿಗಳು ಹೇಳಿದ್ದಾರೆ.

ಕೊರೊನಾ ವಿರುದ್ಧ ಸಹಾಯ ನೀಡಿದ್ದ ದಾದ

ಕೊರೊನಾ ವಿರುದ್ಧ ಸಹಾಯ ನೀಡಿದ್ದ ದಾದ

ದಾದಾ ಗಂಗೂಲಿ, ಕೊರೊನಾವೈರಸ್ ಭಾರತದಲ್ಲಿ ಹಬ್ಬಲಾರಂಭಿಸಿದಾಗಿನಿಂದಲೂ ಸಾಮಾಜಿಕವಾಗಿ ಸಹಾಯ ನೀಡುತ್ತಾ ಬಂದಿದ್ದಾರೆ. 50 ಲಕ್ಷ ರೂ. ದೇಣಿಗೆ ನೀಡಿದ್ದ ಗಂಗೂಲಿ, ಅಕ್ಕಪಕ್ಕದ ಊರಿನ ಬಡವರಿಗೆ 2000 ಕೆಜಿ ಅಕ್ಕಿ ವಿತರಿಸಿದ್ದರು. ಜೂನ್ 20ರ ಶನಿವಾರದ ವೇಳೆಗೆ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,95,048ಕ್ಕೆ ಏರಿತ್ತು.

Story first published: Saturday, June 20, 2020, 20:35 [IST]
Other articles published on Jun 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X