Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

350 ಬಡ ಕುಟುಂಬಗಳಿಗೆ ನೆರವೀಯಲಿದ್ದಾರೆ ಕ್ರಿಕೆಟರ್ ಶಹಬಾಝ್ ನದೀಮ್

Coronavirus: Shahbaz Nadeem helping 350 needy families

ರಾಂಚಿ, ಏಪ್ರಿಲ್ 3: ದೇಸಿ ಕ್ರಿಕೆಟ್‌ನಲ್ಲಿ ಝಾರ್ಖಂಡ್‌ ತಂಡದಲ್ಲಿ ಮುಂಚೂಣಿ ಬೌಲರ್ ಆಗಿರುವ ಶಹಬಾಝ್ ನದೀಮ್, ಕೊರೊನಾವೈರಸ್ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೀಡಾಗಿರುವ ಸುಮಾರು 350 ಕುಟುಂಬಗಳಿಗೆ ನೆರವಿನ ಹಸ್ತ ಚಾಚಿದ್ದಾರೆ. 16 ವರ್ಷಗಳ ವೃತ್ತಿಬದುಕು ಕಂಡಿರುವ ನದೀಮ್, ಕೊರೊನಾ ವಿರುದ್ಧದ ಹೋರಾಟಕ್ಕೆ ಜೊತೆಯಾಗಿದ್ದಾರೆ.

ಸದ್ಯ ಧನ್‌ಬಾದ್‌ನ ಝರಿಯಾದಲ್ಲಿ ವಾಸವಿರುವ ಶಹಬಾಝ್ ನದೀಮ್, ಲಾಕ್‌ ಡೌನ್‌ನಿಂದಾಗಿ ತೊಂದರೆಗೊಳಗಾಗಿರುವ ಕುಟುಂಬಗಳ ನೆರವಿಗೆ ನಿಂತಿದ್ದಾರೆ. ತನ್ನ ಮನೆಯ ಆಸುಪಾಸಿನಲ್ಲಿ, ತನ್ನ ಏರಿಯಾದಲ್ಲಿ ವಾಸವಿರುವ ಸುಮಾರು 350 ಕುಟುಂಬಗಳಿಗೆ ಅಕ್ಕಿ, ಸಿರಿಧಾನ್ಯ, ತರಕಾರಿ ಮತ್ತು ಸಕ್ಕರೆ ವಿತರಿಸುತ್ತಿದ್ದಾರೆ.

'ಈವರೆಗೂ ನಾವು ಸುಮಾರು 150 ಕುಟುಂಬಗಳಿಗೆ ಅಗತ್ಯ ಆಹಾರ ವಸ್ತುಗಳನ್ನು ವಿತರಿಸಲು ಸಾಧ್ಯವಾಗಿದೆ. ಇನ್ನೂ ಸುಮಾರು 200 ಹೆಚ್ಚಿನ ಕುಟುಂಬಗಳಿಗೆ ನೆರವೀಯಬೇಕಿದೆ. ನೆರವಿನ ಅಗತ್ಯವಿರುವವರು ಇಲ್ಲಿ ಬಹಳಷ್ಟು ಮಂದಿಯಿದ್ದಾರೆ,' ಎಂದು 30ರ ಹರೆಯದ ನದೀಮ್ ಹೇಳಿಕೊಂಡಿದ್ದಾರೆ.

'ನೇರ ನೆರವು ನೀಡುವುದರಲ್ಲಿ ನನಗೆ ಹೆಚ್ಚಿನ ನಂಬಿಕೆಯಿದೆ. ಹೀಗಾಗಿಯೇ ನಾವು ಬೆಳಗ್ಗಿನ ಹೊತ್ತಿನಲ್ಲಿ ಅಗತ್ಯದವರಿಗೆ ತಲುಪಿಸಬೇಕಾದ ವಸ್ತುಗಳ ಪ್ಯಾಕೇಜಿಂಗ್‌ನಲ್ಲಿ ಬ್ಯುಸಿಯಾಗುತ್ತಿದ್ದೇವೆ,' ಎಂದು ನದೀಮ್ ವಿವರಿಸಿದರು. ಐಪಿಎಲ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡುವ ಸ್ಪಿನ್ನರ್ ನದೀಮ್ 62 ಐಪಿಎಲ್ ಇನ್ನಿಂಗ್ಸ್‌ಗಳಲ್ಲಿ 42 ವಿಕೆಟ್ ಮುರಿಸಿದ್ದಾರೆ.

Story first published: Friday, April 3, 2020, 17:55 [IST]
Other articles published on Apr 3, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+