ರನ್ ನೀಡಲು ಇಲ್ಲ ಜಿಪುಣತನ: ಇವರೇ ಭಾರತದ ಪರ ಒಂದು ಪಂದ್ಯದಲ್ಲಿ ಹೆಚ್ಚು ರನ್ ನೀಡಿದ ಬೌಲರ್ಸ್
ಟಿ20 ಕ್ರಿಕೆಟ್‌ನಲ್ಲಿ ಬೌಲರ್‌ಗಳು ರನ್‌ಗಳಿಗೆ ಕಡಿವಾಣ ಹಾಕುವುದು ಯಾವಾಗಲೂ ಸವಾಲೇ. ಒಂದು ವೇಳೆ ಎದುರಾಳಿ ತಂಡದಲ್ಲಿ ಸ್ಫೋಟಕ ಬ್ಯಾಟರ್‌ಗಳು ಇದ್ದರೆ ಚಿಂತೆಗಳು ಡಬಲ್ ಆಗುತ್ತವೆ. ಐಸಿಸಿ ಟಿ20 ವಿಶ್ವಕಪ್‌ನಲ್ಲೂ ಟೀಮ್ ಇಂಡಿಯಾದ ಅನುಭವಿ ಬೌಲರ್ ರನ್‌ಗಳನ್ನು ಎರಡೂ ಕೈಗಳಿಂದ ನೀಡಿ ದುಬಾರಿಯಾಗಿದ್ದಾರೆ.
ಟಿ20 ವಿಶ್ವಕಪ್ ನಂಬರ್ 1 ಬೌಲರ್ ವರುಣ್ ಚಕ್ರವರ್ತಿ ಮುಂಬೈನಲ್ಲಿ ನಡೆದ ವಾಂಖೆಡೆ ಅಂಗಳದಲ್ಲಿ ತುಂಬಾ ದುಬಾರಿಯಾದರು. ಇವರು ನಾಲ್ಕು ಓವರ್ ಬೌಲ್ ಮಾಡಿ 64 ರನ್ ನೀಡಿದ್ದಾರೆ. ಈ ಮೂಲಕ ಟಿ20 ವಿಶ್ವಕಪ್‌ನ ಇತಿಹಾಸದಲ್ಲಿ ಭಾರತದ ಪರ ದುಬಾರಿ ಸ್ಪೆಲ್ ಇದಾಗಿದೆ. ಆದರೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದು ಎರಡನೇ ಸ್ಥಾನದಲ್ಲಿದೆ. ಭಾರತದ ಪರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದುಬಾರಿಯಾದ ಬೌಲರ್‌ಗಳ ಪಟ್ಟಿ ಇಲ್ಲಿದೆ.

ಪ್ರಸಿದ್ಧ್ ಕೃಷ್ಣ 68 ರನ್
ಕರ್ನಾಟಕದ ಸ್ಟಾರ್ ಆಟಗಾರ ಪ್ರಸಿದ್ಧ್ ಕೃಷ್ಣ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಆಟಗಾರ. ಇವರು 2023ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯದಲ್ಲಿ 4 ಓವರ್ ಬೌಲ್ ಮಾಡಿ 68 ರನ್ ನೀಡಿ ದುಬಾರಿಯಾದರು. ಈ ಪಂದ್ಯದ ಕೊನೆಯ ಓವರ್‌ನಲ್ಲಿ ಆಸ್ಟ್ರೇಲಿಯಾ ಬ್ಯಾಟರ್‌ಗಳು 23 ರನ್ ಚಚ್ಚಿದರು.
ವರುಣ್ ಚಕ್ರವರ್ತಿ 64 ರನ್
ಸ್ಪಿನ್ ಬೌಲರ್ ವರುಣ್ ಚಕ್ರವರ್ತಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಎರಡನೇ ಪ್ಲೇಯರ್. ಇವರು ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ರನ್‌ಗಳಿಗೆ ಕಡಿವಾಣ ಹಾಕುವಲ್ಲಿ ಎಡವಿದರು. ಹೀಗಾಗಿ ಇವರ ಈ ಸ್ಪೆಲ್ ಬಹುದುಬಾರಿಯಾಗಿತ್ತು.
ಯಜುವೇಂದ್ರ ಚಹಾಲ್ 64 ರನ್
ಟೀಮ್ ಇಂಡಿಯಾದ ಲೆಗ್ ಸ್ಪಿನ್ ಬೌಲರ್ ಯಜುವೇಂದ್ರ ಚಹಾಲ್ ಸಹ ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ ರನ್‌ಗಳನ್ನು ನೀಡಿದ್ದರು. ಇವರು 2018ರಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ 64 ರನ್ ಕೊಟ್ಟಿದ್ದರು. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟರ್‌ಗಳು ಇವರನ್ನು ಟಾರ್ಗೆಟ್ ಮಾಡಿ ದಂಡಿಸಿದ್ದರು.
ಅರ್ಶದೀಪ್ - 62 ರನ್
ಟೀಮ್ ಇಂಡಿಯಾದ ಎಡಗೈ ವೇಗಿ ಅರ್ಶದೀಪ್ ಸಹ ದುಬಾರಿಯಾಗಿದ್ದಾರೆ. ಇವರು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 62 ರನ್ ನೀಡಿ ಭಾರೀ ದುಬಾರಿಯಾಗಿದ್ದರು. ಈ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ ಆಸೀಸ್ ಬ್ಯಾಟರ್‌ಗಳು 22 ರನ್ ಚಚ್ಚಿದ್ದರು.
ಜಸ್ಪ್ರೀತ್ ಬುಮ್ರಾ - 58 ರನ್
ಟೀಮ್ ಇಂಡಿಯಾದ ಯಾರ್ಕರ್ ಸ್ಪೆಷಲಿಸ್ಟ್ ಖ್ಯಾತಿಯ ಜಸ್ಪ್ರೀತ್ ಬುಮ್ರಾ ಸಹ ಒಂದು ಪಂದ್ಯದಲ್ಲಿ 58 ರನ್ ನೀಡಿ ಕೈ ಸುಟ್ಟುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications