For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ನಲ್ಲಿ ವಿಶೇಷ ದಾಖಲೆ ಬರೆದ ಆಸೀಸ್‌ನ ನೇಥನ್‌ ಕೌಲ್ಟರ್‌ ನೈಲ್‌!

ICC World Cup 2019 : ಆಸ್ಟ್ರೇಲಿಯಾಕೆ ಅಚ್ಚರಿ ನೀಡಿದ ಆಸ್ಟ್ರೇಲಿಯಾ ಆಟಗಾರ..? | Oneindia Kannada
Coulter-Niles 92 highest for No. 8 batsman in WC

ನಾಟಿಂಗ್‌ಹ್ಯಾಮ್‌, ಜೂನ್‌ 06: ಆಸ್ಟ್ರೇಲಿಯಾ ತಂಡದ ವೇಗದ ಬೌಲರ್‌ ನೇಥನ್‌ ಕೌಲ್ಟರ್‌ ನೈಲ್‌ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಇಲ್ಲಿನ ಟ್ರೆಂಟ್‌ಬ್ರಿಡ್ಜ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದ ವೆಸ್ಟ್‌ ಇಂಡೀಸ್‌ ವಿರುದ್ಧದ ವಿಶ್ವಕಪ್‌ ಲೀಗ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಪರ ಅಕ್ಷರಶಃ ಹೀರೊ ಆದ ಬಲಗೈ ವೇಗಿ ನೇಥನ್‌ ಕೌಲ್ಟರ್‌ ನೈಲ್‌ ಮಿಂಚಿದ್ದು ಬೌಲಿಂಗ್‌ನಲ್ಲ, ಬದಲಾಗಿ ಬ್ಯಾಟಿಂಗ್‌ನಲ್ಲಿ.

ತಂಡ 147ಕ್ಕೆ 6 ವಿಕೆಟ್‌ಗಳನ್ನು ಕಳೆದುಕೊಂಡು 200ರ ಗಡಿಯೊಳಗೆ ಆಲ್‌ಔಟ್‌ ಆಗುವ ಆತಂಕದಲ್ಲಿದ್ದಾಗ ಕ್ರೀಸ್‌ಗೆ ಬಂದ 31 ವರ್ಷದ ಅನುಭವಿ ಆಟಗಾರ ನೇಥನ್‌, ಕೇವಲ 60 ಎಸೆತಗಳಲ್ಲಿ 92 ರನ್‌ಗಳನ್ನು ಚೆಚ್ಚಿ ತಂಡಕ್ಕೆ 288 ರನ್‌ಗಳ ಸವಾಲಿನ ಮೊತ್ತ ತಂದುಕೊಟ್ಟರು. ಅಲ್ಲದೆ ಮಾಜಿ ನಾಯಕ ಸ್ಟೀವನ್‌ ಸ್ಮಿತ್‌ ಜೊತೆಗೂಡಿ 7ನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿ ಗಮನ ಸೆಳೆದರು.

ಅಂದಹಾಗೆ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು 92 ರನ್‌ಗಳನ್ನು ಸಿಡಿಸಿರುವುದು ವಿಶ್ವಕಪ್‌ ಇತಿಹಾಸದಲ್ಲಿ ಹೊಸ ದಾಖಲೆಯಾಗಿದೆ. ಇನ್ನು ಆಸ್ಟ್ರೇಲಿಯಾ ತಂಡದ ಪರ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲೂ 8ನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಗಳಿಸಿರುವ ಗರಿಷ್ಠ ಮೊತ್ತ ಇದಾಗಿದೆ.

ಏಕದಿನ ಕ್ರಿಕೆಟ್‌ ವೃತ್ತಿಬದುಕಿನಲ್ಲಿ ಚೊಚ್ಚಲ ಅರ್ಧಶತಕ ದಾಖಲಿಸಿದ ನೇಥನ್‌, ಪ್ರಥಮದರ್ಜೆ ಮತ್ತು ಲಿಸ್ಟ್‌ 'ಎ' ಕ್ರಿಕೆಟ್‌ ಎರಡರಿಂದಲೂ ಈವರೆಗೆ ಗಳಿಸಿರುವುದು ಕೇವಲ 5 ಅರ್ಧಶತಕಗಳನ್ನು ಮಾತ್ರ. ಇದೀಗ ಆಸ್ಟ್ರೇಲಿಯಾ ತಂಡಕ್ಕೆ ಅತ್ಯಂತ ಅನಿವಾರ್ಯದ ಸಂದರ್ಭದಲ್ಲಿ ತಮ್ಮ ಬ್ಯಾಟ್‌ ಬೀಸುವ ಮೂಲಕ 8 ಫೋರ್‌ ಮತ್ತು 4 ಭರ್ಜರಿ ಸಿಕ್ಸರ್‌ಗಳನ್ನು ಒಳಗೊಂಡ ಅವಿಸ್ಮರಣೀಯ ಇನಿಂಗ್ಸ್‌ ಆಡಿದರು.

ಆಸ್ಟ್ರೇಲಿಯಾದ ಬಲಿಷ್ಠ ಬ್ಯಾಟಿಂಗ್‌ ವಿಭಾಗವನ್ನು 38 ರನ್‌ಗಗಳಿಗೆ 4 ವಿಕೆಟ್‌ ಪಡೆದು ಗಮನ ಸೆಳದಿದ್ದ ವೆಸ್ಟ್‌ ಇಂಡೀಸ್‌ ಬೌಲರ್‌ಗಳು ಅಂತಿಮವಾಗಿ ಕೌಲ್ಟರ್‌ ನೈಲ್‌ ಅವರ ಅಬ್ಬರಕ್ಕೆ ಬೆಚ್ಚು ಬಿದ್ದಿತ್ತು.

8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು ಅಬ್ಬರಿಸಿದ ಐವರು ಬ್ಯಾಟ್ಸ್‌ಮನ್‌ಗಳ ವಿವರ ಇಂತಿದೆ.

1. ಕ್ರಿಸ್‌ ವೋಕ್ಸ್‌ (ಇಂಗ್ಲೆಂಡ್‌); 95* ರನ್‌, ಎದುರಾಳಿ: ಶ್ರೀಲಂಕಾ (2016)

2. ನೇಥನ್‌ ಕೌಲ್ಟರ್‌ ನೈಲ್‌ (ಆಸ್ಟ್ರೇಲಿಯಾ); 92 ರನ್‌, ಎದುರಾಳಿ: ವೆಸ್ಟ್‌ ಇಂಡೀಸ್‌ (2019)

3. ಥಾಮಸ್‌ ಒಡೊಯೊ (ಕೀನ್ಯಾ); 84 ರನ್‌, ಎದುರಾಳಿ: ಬಾಂಗ್ಲಾದೇಶ (2006)

4. ಲ್ಯಾನ್ಸ್‌ ಕ್ಲೂಸ್ನರ್‌ (ದಕ್ಷಿಣ ಆಫ್ರಿಕಾ); 83 ರನ್‌, ಎದುರಾಳಿ, ಆಸ್ಟ್ರೇಲಿಯಾ (2002)

5. ಡೇನಿಯೆಲ್‌ ವೆಟೋರಿ (ನ್ಯೂಜಿಲೆಂಡ್‌); 83 ರನ್‌, ಎದುರಾಳಿ: ಆಸ್ಟ್ರೇಲಿಯಾ (2005)

Story first published: Thursday, June 6, 2019, 22:47 [IST]
Other articles published on Jun 6, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+