Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021: ವಾಂಖೆಡೆ ಸ್ಟೇಡಿಯಂನ ಸಿಬ್ಬಂದಿಗಳಿಗೆ ಕೊರೊನಾ

COVID-19 Scare in IPL 2021: Groundsmen at Wankhede Stadium Test Positive For COVID-19 Positive

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿ ಆರಂಭಕ್ಕೂ ಮುನ್ನವೇ ಭಾರತದ ಅದ್ದೂರಿ ಕ್ರಿಕೆಟ್ ಟೂರ್ನಿಗೆ ಕೊರೊನಾವೈರಸ್ ಭೀತಿ ಶುರುವಾಗಿದೆ. ಮುಂಬೈಯ ಪ್ರಸಿದ್ಧ ವಾಂಖೆಡೆ ಸ್ಟೇಡಿಯಂನಲ್ಲಿ ಕೆಲಸ ಮಾಡುವ ಒಟ್ಟು 8 ಮಂದಿ ಗ್ರೌಂಡ್ಸ್‌ಮೆನ್ (ಮೈದಾನ ಸಿಬ್ಬಂದಿಗಳು)ಗೆ ಕೋವಿಡ್-19 ಪಾಸಿಟಿವ್ ಬಂದಿದೆ.

ಏಪ್ರಿಲ್ 9ರಿಂದ ಮೇ 30ರ ವರೆಗೆ 2021ರ ಐಪಿಎಲ್ ಟೂರ್ನಿ ನಡೆಯುವುದರಲ್ಲಿದೆ. ಹೀಗಾಗಿ ಟೂರ್ನಿಗೆ ಮುಂಚಿತವಾಗಿ ಮೈದಾನದ ಸಿಬ್ಬಂದಿಗಳಿಗೆ ಕೊರೊನಾವೈರಸ್ ಪರೀಕ್ಷೆ ಮಾಡಿಸಲಾಗಿತ್ತು. ಈ ವೇಳೆ ಎಂಟು ಸಿಬ್ಬಂದಿಗಳಿಗೆ ಕೊರೊನಾ ಸೋಂಕಿರುವುದು ಪತ್ತೆಯಾಗಿದೆ.

ವಾಂಖೆಡೆ ಸ್ಟೇಡಿಯಂನಲ್ಲಿರುವ ಎಲ್ಲಾ 19 ಸಿಬ್ಬಂದಿಗಳು ಕಳೆದ ವಾರ ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಒಳಗಾಗಿದ್ದರು. ಮಾರ್ಚ್ 26ರಂದು ನಡೆಸಲಾದ ಪರೀಕ್ಷೆಯಲ್ಲಿ ಮೂವರಿಗೆ ಕೊರೊನಾ ಇರುವುದು ಕಂಡು ಬಂದಿತ್ತು. ಏಪ್ರಿಲ್ 1ರಂದು ಇನ್ನೂ 5 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ಏಪ್ರಿಲ್ 10ರಿಂದ ಏಪ್ರಿಲ್ 25ರ ವರೆಗೆ ಐಪಿಎಲ್ ಪಂದ್ಯಗಳು ನಡೆಯಲಿವೆ.

ಸಿಬ್ಬಂದಿಗಳಲ್ಲಿ ಕೆಲವರಿಗೆ ಕೊರೊನಾ ಇರುವುದು ಸಾಭೀತಾಗಿರುವುದರಿಂದ ಉಳಿದ ಎಲ್ಲಾ ಸಿಬ್ಬಂದಿಗಳೂ ಐಸೊಲೇಶನ್‌ನಲ್ಲಿದ್ದಾರಾ ಇಲ್ಲವಾ ಅನ್ನೋದು ಇನ್ನೂ ಸ್ಪಷ್ಟಗೊಂಡಿಲ್ಲ. ಏಪ್ರಿಲ್ 9ರಂದು ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಯಲಿದೆ. ಮುಂಬೈ ಮತ್ತು ಬೆಂಗಳೂರು ತಂಡಗಳು ಇದರಲ್ಲಿ ಕಾದಾಡಲಿವೆ.

Story first published: Saturday, April 3, 2021, 13:25 [IST]
Other articles published on Apr 3, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+